ಬಳ್ಳಾರಿಯಲ್ಲಿ ಗೆದ್ದವರು ನಮ್ಮ ಕಾರ್ಯಕರ್ತರಿಗೆ ತೊಂದರೆ ನೀಡಿದ್ರೆ ಸುಮ್ಮನಿರಲ್ಲ-ಶಾಸಕ ಗಾಲಿ ಜನಾರ್ದನ ರೆಡ್ಡಿ
ಬಳ್ಳಾರಿ, ಆಗಸ್ಟ್ 25: ಈ ಹಿಂದೆ ನಾನು ಬಳ್ಳಾರಿಯಲ್ಲಿ ಅಧಿಕಾರದಲ್ಲಿದ್ದಾಗ, ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡಲಿಲ್ಲ. ನನ್ನೊಂದಿಗೆ ಇದ್ದು ನನ್ನ ಬಿಟ್ಟು ಹೋದವರಿಗೆ ಈ ಚುನಾವಣೆಯಲ್ಲಿ ಜನರು ಪಾಠ ಕಲಿಸಿದ್ದಾರೆ ಎಂದು ಕೆಆರ್‌ಪಿ ಪಕ್ಷದ ಸಂಸ್ಥಾಪಕ, ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಕೆಆರ್‌ಪಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು,ಪ್ರಸಕ್ತ ಚುನಾವಣೆಯಲ್ಲಿ ಗಾಲಿ ಲಕ್ಷ್ಮೀ ಅರುಣಾ ಅವರು ಸಾಕಷ್ಟು ಶ್ರಮ ಹಾಕಿದರು. ಆದರೆ ನಮ್ಮವರೇ ಕೆಲವರು ವಿರೋಧಿಗಳ ಜೊತೆ ಕೈ ಜೋಡಿಸಿ, ಸೋಲಿಸಿದರು, ತಾವೂ ಸೋತು ಮನೆಯಲ್ಲಿ ಕೂತರು ಎಂದು ಹೇಳಿದರು.

ನಮ್ಮನ್ನು ನಂಬಿದ ಯಾವುದೇ ಕಾರ್ಯಕರ್ತರು ಇರಬಹುದು ಅವರನ್ನು ನಾನು ಕೈ ಬಿಡುವುದಿಲ್ಲ ಎಂದ ರೆಡ್ಡಿ, ಪತ್ನಿ ಲಕ್ಷ್ಮೀ ಅರುಣಾ ಅವರು ಚುನಾವಣೆಯಲ್ಲಿ ರಾಣಿ ಕಿತ್ತೂರು ಚೆನ್ನಮ್ಮ ಅವರ ರೀತಿ ಹೋರಾಡಿದರು. ಅವರು ಪ್ರತಿಪಕ್ಷವಾಗಿ ಬಳ್ಳಾರಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದರು.
ಕೆಆರ್‌ಪಿ ಪಕ್ಷಕ್ಕೆ ಕೆಲಸ ಮಾಡಿದವರಿಗೆ ಕೆಲಸ ಮಾಡಬಾರದೆಂದು ಒಬ್ಬ ಶಾಸಕ ಹೇಳುತ್ತಿರುವುದು ಹುಚ್ಚುತನ ಎಂದು ಹೇಳಿದ ಅವರು, ಚುನಾವಣೆ ಮುಗಿದ ಮೇಲೆ ರಾಜಕೀಯ ಮಾಡಬಾರದು, ಅಭಿವೃದ್ಧಿ ಮಾಡಬೇಕು, ನಾನು ಸಚಿವನಾಗಿದ್ದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ ಎಂದರು.

ಇತ್ತೀಚೆಗೆ ನಡೆದ ವಿಧಾನಸಭೆ ಚರ್ಚೆಯಲ್ಲಿ ಭಾಗವಹಿಸಿ, ಬಳ್ಳಾರಿ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದೆ, ಸಚಿವ ಎಂ.ಬಿ.ಪಾಟೀಲ್ ಅವರು ಉತ್ತಮವಾಗಿ ಸ್ಪಂದಿಸಿದರು. ವಿಮಾನ ನಿಲ್ದಾಣ ನಿರ್ಮಾಣ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬಾಕಿ ಕಾಮಗಾರಿ, ಬಳ್ಳಾರಿ-ಹಂಪಿ ಗ್ರೀನ್ ಫೀಲ್ಡ್ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಬಳ್ಳಾರಿಯ ಶಾಸಕರು, ಸಚಿವರು ಗಮನ ಹರಿಸಬೇಕು, ನನ್ನನ್ನು ಜನರು ಮರೆಯುವ ಹಾಗೆ ಕೆಲಸ ಮಾಡಿ ಎಂದರು.
ಬಳ್ಳಾರಿಯಲ್ಲಿ ಗೆದ್ದಿರುವ ಯಾವುದೇ ಶಾಸಕರು, ಸಚಿವರು ನಮ್ಮ ಕಾರ್ಯಕರ್ತರಿಗೆ ತೊಂದರೆ ನೀಡಿದರೆ ನಾನು ಸುಮ್ಮನೆ ಕೂರಲ್ಲ. ಕೇವಲ 70 ಕಿ.ಮೀ. ದೂರದಲ್ಲಿ ನಾನಿದ್ದೇನೆ. ವಿಧಾನಸೌಧದೊಳಗೆ ಹೊರಗೆ ಹೋರಾಟ ಮಾಡುತ್ತೇನೆ. ನನ್ನ ಕಾರ್ಯಕರ್ತರ ರಕ್ಷಣೆಗೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಈ ಹಿಂದೆ 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸುಷ್ಮಾ ಸ್ವರಾಜ್ ಅವರು ಪರಾಜಿತರಾದರು, ಆದರೆ ಬಳ್ಳಾರಿಯ ಜನರ ಪ್ರೀತಿಯನ್ನು ಕಂಡು ಅವರು ಪ್ರತಿ ವರ್ಷ ಬಳ್ಳಾರಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುವುದಾಗಿ ಹೇಳಿದ್ದರು, ಅವರು ಬಂದಾಗ ಅದ್ಧೂರಿ ಕಲ್ಯಾಣ ಕೆಲಸ ಮಾಡಬೇಕು ಎಂಬ ಉದ್ಧೇಶದಿಂದ ಸಾಮೂಹಿಕ ವಿವಾಹ ಏರ್ಪಡಿಸುತ್ತ ಬಂದೆವು. ಆದರೆ ರಾಜಕೀಯ ಕುತಂತ್ರದಿಂದ ನನ್ನನ್ನು ಬಳ್ಳಾರಿಯಿಂದ, ತಮ್ಮಿಂದ ಮತ್ತು ನನ್ನ ಕುಟುಂಬದಿಂದ ದೂರ ಮಾಡಿದರು ಎಂದು ಹೇಳಿದರು.
ನೂತನ ವಧು-ವರರಿಗೆ ಜನಾರ್ದನ ರೆಡ್ಡಿ ಶುಭ ಹಾರೈಸಿದ್ದು, ವಿವಾಹಿತರು ಎರಡೂ ಕುಟುಂಬಗಳೊಂದಿಗೆ ಸಂತೋಷದಿಂದ, ಪ್ರೀತಿಯಿಂದ ಇರಬೇಕು ಎಂದು ಸಲಹೆ ನೀಡಿದರು.
ಕುತಂತ್ರ ರಾಜಕೀಯದಿಂದ ಜನಾರ್ದನ ರೆಡ್ಡಿ ಬಳ್ಳಾರಿಯಿಂದ ದೂರ
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಕೆಆರ್‌ಪಿ ಪಕ್ಷದ ಪರಾಜಿತ ಅಭ್ಯರ್ಥಿ ಗಾಲಿ ಅರುಣಾ ಲಕ್ಷ್ಮಿ, ಸಾಮೂಹಿಕ ವಿವಾಹಗಳಿಗೆ ಇತಿಹಾಸವಿದೆ. ಸಾಮೂಹಿಕ ವಿವಾಹ ನಡೆಸುವುದು ಜನಾರ್ದನ ರೆಡ್ಡಿಯವರ ಕನಸಾಗಿತ್ತು. 1999ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ದಿ.ಸುಷ್ಮಾ ಸ್ವರಾಜ್ ಅವರು ಪರಾಜಿತರಾದರು, ಇದಾದ ನಂತರವೂ ಅವರು ಬಳ್ಳಾರಿಗೆ ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆಗೆ ಬರುವುದಾಗಿ ಹೇಳಿದರು. ಹೇಳಿದಂತೆ ಬಳ್ಳಾರಿಗೆ ಬಂದರು, ಅವರ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ನಡೆದವು ಎಂದರು.
ಕುತಂತ್ರ ರಾಜಕೀಯದಿಂದ ಜನಾರ್ದನ ರೆಡ್ಡಿಯವರನ್ನು ಬಳ್ಳಾರಿಯಿಂದ ದೂರ ಉಳಿಯುವಂತೆ ಮಾಡಲಾಯಿತು. ಹೀಗಾಗಿ 12 ವರ್ಷ ಸಾಮೂಹಿಕ ವಿವಾಹ ಸ್ಥಗಿತವಾದವು. ಸಾವಿರಾರು ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿದ ಕೀರ್ತಿ, ಶ್ರೇಯಸ್ಸು ಜನಾರ್ದನ ರೆಡ್ಡಿಯವರಿಗೆ ಸಲ್ಲಬೇಕು. ಇಂದು ಸಾಮೂಹಿಕ ವಿವಾಹಕ್ಕೆ ನಾನು ಸಾಕ್ಷಿಯಾಗಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.
ಚುನಾವಣೆಯ ವೇಳೆ ಸ್ಪರ್ಧಿಸಲು ನನಗೆ ಅವಕಾಶ ನೀಡಿದ ಕೆಆರ್‌ಪಿ ಪಕ್ಷಕ್ಕೆ, ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುವೆ. ನನ್ನ ಚುನಾವಣೆಯಲ್ಲಿ ನನ್ನ ಪುತ್ರಿ ಬ್ರಹ್ಮಣಿ ತನ್ನ ತಂದೆ ತಾಯಿಗಳಿಗಾಗಿ ಚುನಾವಣೆಯಲ್ಲಿ ಅವಿರತವಾಗಿ ಶ್ರಮಿಸಿದಳು ಎಂದು ವೇದಿಕೆಯಲ್ಲಿ ಹಾಜರಿದ್ದ ಬ್ರಹ್ಮಣಿಯನ್ನು ಶ್ಲಾಘಿಸಿದರು.
ಸಿರುಗುಪ್ಪ ಪರಾಜಿತ ಕೆಆರ್‌ಪಿ ಅಭ್ಯರ್ಥಿ ಧರೆಪ್ಪ ನಾಯಕ ಮಾತನಾಡಿ, ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಆಗಿದ್ದರೆ ಅದು ಜನಾರ್ದನ ರೆಡ್ಡಿಯವರ ಅವಧಿಯಲ್ಲಿ ಮಾತ್ರ. ಕೆಲವರು ಸಚಿವರು ಇದ್ದೂ ಇಲ್ಲದಂತೆ ಇರುತ್ತಾರೆ. ಆದರೆ ಬಳ್ಳಾರಿಯ ವೈಭೋಗ ಕಂಡದ್ದು ರೆಡ್ಡಿ ಅವರ ಕಾಲದಲ್ಲಿ. ಅವರ ಜೊತೆಗೆ ಬಹಳ ಜನ ಇದ್ದರು, ಇಂದು ಇಲ್ಲ, ಆದರೆ ಅವರ ಆಲೋಚನೆ, ಯೋಜನೆಗಳ ಬಗ್ಗೆ ಇರುವ ಕಲ್ಪನೆ ಪ್ರಧಾನಿಗೂ ಇಲ್. ಶಾಸಕರಾಗಿ ಆಯ್ಕೆಯಾಗಿ ಮೊದಲ ವಿಧಾನಸಭೆಯಲ್ಲೇ ಇಡೀ ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ ಏಕೈಕ ಶಾಸಕ ಜನಾರ್ದನ ರೆಡ್ಡಿಯವರು ಎಂದರು.
ಕಾರ್ಯಕ್ರಮದಲ್ಲಿ ಮ್ಮರಚೇಡು ಸಂಸ್ಥಾನ ಕಲ್ಯಾಣ ಮಠದ ಕಲ್ಯಾಣಶ್ರೀ ಕೆಆರ್‌ಪಿ ಪಕ್ಷದ ಮುಖಂಡರಾದ ಕೆ.ಎಸ್.ದಿವಾಕರ್, ಪಾಲಿಕೆ ಸದಸ್ಯರಾದ ಕೋನಂಕಿ ತಿಲಕ್ ಕುಮಾರ್, ಕಲ್ಪನಾ, ಪಕ್ಷದ ಇತರ ಮುಖಂಡರಾದ ಶ್ರೀನಿವಾಸ ರೆಡ್ಡಿ, ಮುನ್ನಾ ಭಾಯ್, ಹಂಪಿ ರಮಣ, ಶಿವಾ ರೆಡ್ಡಿ, ಮಾಜಿ ಮೇಯರ್ ವೆಂಕಟರಮಣ, ಪಕ್ಷದ ವಕ್ತಾರ ಸಂಜಯ ಬೆಟಗೇರಿ, ಮೆಹಫೂಜ್ ಆಲಿ ಖಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
-
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ












Click it and Unblock the Notifications