ಬಳ್ಳಾರಿಯಿಂದ ದೂರ ಇರುವ ಕಷ್ಟ ನನಗೆ ಮಾತ್ರ ಗೊತ್ತು : ರೆಡ್ಡಿ

ಬಳ್ಳಾರಿ, ಜೂನ್ 09 : 'ನಾನು ಬಳ್ಳಾರಿಯಿಂದ ದೂರು ಇರುವ ಕಷ್ಟ ನನಗೆ ಮತ್ತು ಆ ದೇವರಿಗೆ ಮಾತ್ರ ಗೊತ್ತು. ನಾನು ಎರಡು ವಾರಗಳ ಕಾಲ ಇಲ್ಲೇ ಇರುವೆ' ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.

ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಜನಾರ್ದನ ರೆಡ್ಡಿ ಅವರು ಬಳ್ಳಾರಿಯ ನಿವಾಸಕ್ಕೆ ಆಗಮಿಸಿದರು. ಬಳ್ಳಾರಿಯಲ್ಲಿ ಎರಡು ವಾರಗಳ ಕಾಲ ಇರಲು ಸುಪ್ರೀಂಕೋರ್ಟ್‌ ಜನಾರ್ದನ ರೆಡ್ಡಿ ಅವರಿಗೆ ಅನುಮತಿ ನೀಡಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಎರಡು ವಾರಗಳ ಕಾಲ ನಾನು ಬಳ್ಳಾರಿಯಲ್ಲಿಯೇ ಇರುತ್ತೇನೆ. ನನ್ನ ತಂದೆ-ತಾಯಿ ಸ್ಮರಣೆಯಲ್ಲಿ ಸ್ಥಾಪಿಸಿರುವ ರುಕ್ಮಿಣಮ್ಮ ಚೆಂಗಾರೆಡ್ಡಿ ವೃದ್ದಾಶ್ರಮಕ್ಕೆ ಭಾನುವಾರ ಹೋಗುತ್ತೇನೆ' ಎಂದರು.

I will stay in Ballari for two weeks says Janardhana Reddy

'ನಮ್ಮ ಮಾವನವರ ಅನಾರೋಗ್ಯದ ಹಿನ್ನಲೆಯಲ್ಲಿ ಎರಡು ವಾರಗಳ ಕಾಲ ಬಳ್ಳಾರಿಯಲ್ಲಿರಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಎರಡು ವಾರಗಳ ಕಾಲ ಇಲ್ಲೇ ಇರುತ್ತೇನೆ. ಮಾವನವರಿಗೆ ಮೊದಲು ಬೈಪಾಸ್ ಸರ್ಜರಿ ಆಗಿತ್ತು. ಇದೀಗ ಮತ್ತೆ ಅನಾರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ' ಎಂದು ಹೇಳಿದರು.

'ಮಾವನರ ಆರೋಗ್ಯ ನೋಡಿಕೊಳ್ಳುವೆ. ಬಿಡುವು ಸಿಕ್ಕರೆ ಬಳ್ಳಾರಿಯಲ್ಲಿರುವ ನನ್ನ ಒಡನಾಡಿಗಳನ್ನು ಭೇಟಿ ಮಾಡುವೆ. ಬಳ್ಳಾರಿಯಿಂದ ದೂರ ಇರುವ ಕಷ್ಟ ನನಗೆ, ದೇವರಿಗೆ ಮಾತ್ರ ಗೊತ್ತು' ಎಂದು ಜನಾರ್ದನ ರೆಡ್ಡಿ ತಿಳಿಸಿದರು.

ಅಕ್ರಮಗಣಿಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಆದರೆ, ಬಳ್ಳಾರಿಗೆ ಭೇಟಿ ನೀಡಬಾರದು ಎಂದು ಷರತ್ತು ಹಾಕಿದೆ. ಆದ್ದರಿಂದ, ಜನಾರ್ದನ ರೆಡ್ಡಿ ಬಳ್ಳಾರಿಯಿಂದ ದೂರವಾಗಿದ್ದಾರೆ.

ಮಾವನವರ ಅನಾರೋಗ್ಯದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ 2 ವಾರಗಳ ಕಾಲ ಬಳ್ಳಾರಿಯಲ್ಲಿರಲು ಒಪ್ಪಿಗೆ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+