ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರೆ ಗಲ್ಲಿಗೇರಿಸಿ

ಬಳ್ಳಾರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅನಿಲ್ ಲಾಡ್, ತಾವು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ವಿರುದ್ಧದ ಆರೋಪ ಸಾಬೀತಾದರೆ ಗಲ್ಲಿಗೇರಿಸಿ ಎಂದು ತಿಳಿಸಿದರು.
ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ್ ಅವರಿರಗೆ ನನ್ನ ಬಗ್ಗೆ ಆರೋಪಿಸುವ ಹಕ್ಕಿಲ್ಲ. ಅವರು ಪದೇ ಪದೇ ನನ್ನ ವಿರುದ್ಧ ಹೇಳಿಕೆ ನೀಡಿದರೆ ನಾನು ಹೆದರುವುದಿಲ್ಲ. ಏಕೆಂದರೆ ನಾನು ತಪ್ಪು ಮಾಡಿಲ್ಲ ಎಂದು ಅನಿಲ್ ಲಾಡ್ ಹೇಳಿದರು.
ಬೇಲೇಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರನ್ನು ರಫ್ತು ಮಾಡಿರುವ 20 ಕಂಪನಿಗಳ ವಿರುದ್ಧ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಆದೇಶ ನೀಡಿದೆ. ಇದರಲ್ಲಿ ವಿ.ಎಸ್. ಲಾಡ್ ಮೈನಿಂಗ್ ಕಂಪನಿಯ ಹೆಸರಿದೆ.
ನಮ್ಮ ಕಂಪನಿ ಸಾಗಣೆ ಮಾಡಿರುವ ಪ್ರತಿ ಟನ್ ಅದಿರಿಗೂ ಅನುಮತಿ ಪಡೆದಿದ್ದೇವೆ. ತಾವು ಅಕ್ರಮವಾಗಿ ಯಾವುದೇ ಅದಿಯನ್ನು ಸಾಗಣೆ ಮಾಡಿಲ್ಲ ಎಂದು ಅನಿಲ್ ಲಾಡ್ ಸ್ಪಷ್ಟ ಪಡಿಸಿದರು. ಸಿಬಿಐಗೆ ಈ ಕುರಿತು ದಾಖಲೆ ಸಲ್ಲಿಸುತ್ತೇನೆ ಎಂದರು. (20 ಕಂಪನಿಗಳಿಗೆ ಬೇಲೇಕೇರಿ ಗಣಿ ಸಂಕಷ್ಟ)
ಆನಂದ್ ಸಿಂಗ್ ಬೆಂಗಳೂರಿನಲ್ಲಿ : ಅಕ್ರಮ ಅದಿರು ಸಾಗಣೆ ಆರೋಪಕ್ಕೆ ಗುರಿಯಾಗಿ ಬಂಧನದ ಭೀತಿಯಿಂದ ನಾಪತ್ತೆಯಾಗಿರುವ ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ಬೆಂಗಳೂರಿನಲ್ಲಿದ್ದು, ಸಿಬಿಐ ಅಧಿಕಾರಿಗಳ ಮುಂದೆ ಶರಣಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಆನಂದ್ ಸಿಂಗ್ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ. ಸಿಬಿಐ ಪೊಲೀಸರು ಆನಂದ್ ಸಿಂಗ್ ಹುಡುಕಾಟಕ್ಕಾಗಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಆದ್ದರಿಂದ ಆನಂದ್ ಸಿಂಗ್ ಶರಣಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. (ಜಾಮೀನು ಅರ್ಜಿ ವಜಾ, ಸಂಕಷ್ಟದಲ್ಲಿ ಆನಂದ್ ಸಿಂಗ್)
ಆನಂದ್ ಸಿಂಗ್ ಸಿಂಗಾಪುರಕ್ಕೆ ತೆರಳಿರುವ ಬಗ್ಗೆ ಸಿಬಿಐ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದ್ದರಿಂದ ಅವರು ಬೆಂಗಳೂರಿನಲ್ಲಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದು, ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.












Click it and Unblock the Notifications