ಅನಿಲ್ ಲಾಡ್ ಕಾರ್ಯಕ್ರಮದಲ್ಲಿ ಬಳೆ, ಸೀರೆಗೆ ಮುಗಿಬಿದ್ದ ಮಹಿಳೆಯರು

ಬಳ್ಳಾರಿ, ಮಾರ್ಚ್‌ 05: ಶಾಸಕ ಅನಿಲ್ ಲಾಡ್ ದಂಪತಿ ಆಯೋಜಿಸಿದ್ದ ಮಹಿಳೆಯರಿಗೆ 'ಉಡಿ ತುಂಬುವ' ಕಾರ್ಯಕ್ರಮ ಸಂಪೂರ್ಣ ಅಸ್ತವ್ಯಸ್ಥವಾಗಿ ಕೊಡಲೆಂದು ಇಟ್ಟಿದ್ದ ಉಡಿ ಕಾಣಿಕೆ ಪೊಟ್ಟಣಗಳನ್ನು ಮಹಿಳೆಯರು ತಾವೇ ಮನಸೋಇಚ್ಛೆ ಹೊತ್ತೊಯ್ದರು.

ಭಾನುವಾರ ಇಲ್ಲಿನ ವಾರ್ಡ್ಲಾ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ರವಿಕೆ, ಬಳೆ ಹಾಗೂ ಹಣ್ಣಿನ ಪೊಟ್ಟಣಗಳನ್ನು ತೆಗೆದುಕೊಳ್ಳಲು ಮುಗಿಬಿದ್ದುದರಿಂದ ಭಾರಿ ನೂಕು ನುಗ್ಗಲು ಉಂಟಾಗಿತ್ತು. ಕಾರ್ಯಕ್ರಮ ನಡೆಯುತ್ತಿರುವಾಗಲೇ ಉಡಿ ಪೊಟ್ಟಣಗಳಿಗೆ ಮುಗಿ ಬಿದ್ದ ಮಹಿಳೆಯರು ಕೈಗೆ ಸಿಕ್ಕಷ್ಟು ಪೊಟ್ಟಣಗಳನ್ನು ತೆಗೆದು ಕೊಂಡು ಹೋದರು.

ಒಂದೆಡೆ ವೇದಿಕೆ ಕಾರ್ಯಕ್ರಮ ಆಯೋಜಿತವಾಗಿತ್ತು, ಮತ್ತೊಂದೆಡೆ ಮಹಿಳೆಯರಿಗೆ ವಿತರಿಸಲೆಂದ ಉಡಿ ವಸ್ತುಗಳನ್ನು ಪೊಟ್ಟಣಗಳನ್ನಾಗಿ ಮಾಡಿ ಇಡಲಾಗಿತ್ತು. ಈ ವಿಷಯ ತಿಳಿದ ಮಹಿಳೆಯರು ಒಬ್ಬೊಬ್ಬರಾಗಿ ಉಡಿ ಪೊಟ್ಟಣ ಹಂಚಲು ಇಟ್ಟಿದ್ದ ಕಡೆಗೆ ಹೊರಟರು ನಂತರ ವಿಷಯ ತಿಳಿದು ಎಲ್ಲರೂ ಒಮ್ಮೆಲೆ ಮುಗಿಬಿದ್ದು ಉಡಿ ಪೊಟ್ಟಣಗಳನ್ನು ಹೊತ್ತುಕೊಂಡು ಹೋದರು. ಸಾವಿರಾರು ಸಂಖ್ಯೆಯಲ್ಲಿ ಇದ್ದ ಮಹಿಳೆಯರನ್ನು ಕಾರ್ಯಕರ್ತರು ಮತ್ತು ಪೊಲೀಸರು ನಿಯಂತ್ರಿಸಲಾಗಲಿಲ್ಲ.

Hurly-Burly in Congress leader Anil Lad's function.

ಈ ವೇಳೆ ಭಾರಿ ನೂಕಾಟ ತಳ್ಳಾಟ ಆದ ಕಾರಣ ಹಣ್ಣುಗಳು, ಬಳೆ, ಇನ್ನಿತರ ವಸ್ತುಗಳು ಚೆಲ್ಲಾಪಿಲ್ಲಾಗಿ ಬಿದ್ದಿದ್ದವು. ಹಲವರು ಹೆಚ್ಚು ಪೊಟ್ಟಣಗಳು ಹೊತ್ತೊಯ್ದರು ಕೆಲವರಿಗೆ ಏನು ಸಿಗಲಿಲ್ಲ, ಅವರು ಶಾಸಕರಿಗೆ ಹಿಡಿ ಶಾಪ ಹಾಕಿ ತೆರಳಿದರು. ಕಾರ್ಯಕ್ರಮಕ್ಕೆ ಬಂದವರಿಗಾಗಿ ಸಸ್ಯಾಹಾರ ಹಾಗೂ ಮಾಂಸಾಹಾರ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೂ ಜನದಟ್ಟಣೆ ಕಂಡು ಬಂತು.

Hurly-Burly in Congress leader Anil Lad's function.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+