Get Updates
Get notified of breaking news, exclusive insights, and must-see stories!

ಹೊಸಪೇಟೆ: ಅನಧಿಕೃತವಾಗಿ ಮತದಾರರ ಮಾಹಿತಿ ಸಂಗ್ರಹ, ದೆಹಲಿ ಸರ್ವೆ ಸಂಸ್ಥೆಯ 7 ಜನರ ಬಂಧನ

ವಿಜಯನಗರ, ಡಿಸೆಂಬರ್‌, 23: ಅನಧಿಕೃತವಾಗಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದ 7 ಜನರನ್ನು ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿಯ ಧ್ರುವ ಸರ್ವೆ ಸಂಸ್ಥೆಗೆ ಸೇರಿದ 7 ಜನ ಸಿಬ್ಬಂದಿಗಳು ತಾಲೂಕಿನ ಕೊಂಡನಾಯಕನಹಳ್ಳಿಯಲ್ಲಿ ಅನಧಿಕೃತವಾಗಿವಾಗಿ ಮತದಾರರ ಮಾಹಿತಿ ಕಲೆಹಾಕುತ್ತಿದ್ದರು. ಅನುಮಾನಗೊಂಡ ಸ್ಥಳೀಯರು ಗ್ರಾಮೀಣ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿ ಸಿಬ್ಬಂದಿಗಳನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ರಾಜ್ಯದ 12 ವಿಧಾನಸಭಾ ಕ್ಷೇತ್ರಗಳಲ್ಲಿ ಈ ತಂಡ ಸಮೀಕ್ಷೆ ನಡೆಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ನಾವು ಗುಪ್ತಚರ ಸಂಸ್ಥೆಯಿಂದ ಬಂದಿದ್ದೇವೆಂದು ಎಂದು ತಂಡದ ಸದಸ್ಯರು ಹೇಳಿಕೊಂಡಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

ವಿಧಾನಸಭೆ ಚುನಾವಣೆ ಕುರಿತು ಪ್ರತಿಯೊಬ್ಬರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಬರುವ ಚುನಾವಣೆಯಲ್ಲಿ ನೀವು ಯಾವ ಪಕ್ಷಕ್ಕೆ ಮತ ಚಲಾಯಿಸುತ್ತೀರಿ? ಯಾವ ಪಕ್ಷ ಗೆದ್ದರೆ ಉತ್ತಮ? ಎನ್ನುವ ವಿವಿಧ ಪ್ರಶ್ನೆಗಳನ್ನು ಕೇಳಿ ಮಾಹಿತಿ ಕಲೆಹಾಕುತ್ತಿದ್ದರು ಎಂದು ಅಲ್ಲಿನ ಸ್ಥಳೀಯರು ಪೊಲೀಸರ ಬಳಿ ತಿಳಿಸಿದ್ದಾರೆ. ನಂತರ ಸರ್ವೆ ನಡೆಸುತ್ತಿದ್ದವರ ಬಳಿ ಖಾಸಗಿ ಕಂಪನಿಯ ಐ.ಡಿ. ಕಾರ್ಡ್‌ಗಳು ಪತ್ತೆಯಾಗಿವೆ. ಈ ತಂಡ ಯಾವುದೇ ಬಗೆಯ ಅನುಮತಿ ಪಡೆದಿದೆಯಾ? ಯಾರು ಅನುಮತಿ ಕೊಟ್ಟಿದ್ದಾರೆ ಎನ್ನುವುದರ ಬಗ್ಗೆಯೂ ಹೊಸಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

Hospet: Unauthorized collection of voter information, Arrested 7 people

ಹುಬ್ಬಳ್ಳಿಯಲ್ಲಿ ವೋಟರ್‌ ಐಡಿ ಹಗರಣದ
ಚಿಲುಮೆ ಸಂಸ್ಥೆ ಬೆಂಗಳೂರಿನಲ್ಲಿ ನಡೆಸಿದೆ ಎನ್ನಲಾದ ವೋಟರ್‌ಗೇಟ್ ಹಗರಣದ ಮಾದರಿಯಲ್ಲಿಯೇ ಪ್ರಕರಣ ಹುಬ್ಬಳ್ಳಿಯಲ್ಲೂ ನಡೆಯುತ್ತಿದೆ ಎನ್ನಲಾಗಿದೆ. ಖಾಸಗಿ ಸಂಸ್ಥೆಯು ಮತದಾರರ ಮಾಹಿತಿ ಕದಿಯುತ್ತಿದೆ ಮತ್ತು ಮತ ಪಟ್ಟಿಯಲ್ಲಿನ ಹೆಸರುಗಳನ್ನು ಡಿಲೀಟ್ ಮಾಡುತ್ತಿದೆ ಎಂಬ ಶಂಕೆ ಬಲು ಜೋರಾಗಿದೆ. ಇದು ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ಬಹುಚರ್ಚಿತ ವಿಷಯವಾಗಿದೆ. ರಾಜಕೀಯದಲ್ಲೂ ತೀವ್ರ ಸಂಚಲನವನ್ನುಂಟು ಮಾಡಿದ್ದು, ಈ ಪ್ರಕರಣದ ತನಿಖೆ ಚುರುಕಾಗಿದೆ ಎಂದು ಹೇಳಲಾಗಿತ್ತು.

ಧಾರವಾಡ ಜಿಲ್ಲಾಡಳಿತ ಹೇಳಿದ್ದೇನು?
ಎಎಸ್‌ಆರ್ ಸಂಸ್ಥೆಯ ಸಮೀಕ್ಷೆಯೇ ಇದೀಗ ಬಲು ಚರ್ಚಿತ ವಿಷಯವಾಗಿದೆ. ಆದರೆ ಧಾರವಾಡ ಜಿಲ್ಲಾಡಳಿತ ವೋಟರ್‌ಗೇಟ್ ನಡೆದಿಲ್ಲ ಎನ್ನುತ್ತಿದೆ. ಆದರೆ ರಾಜಕೀಯದಲ್ಲಿ ಈ ವಿಚಾರ ತೀವ್ರ ಸಂಚಲನ ಮೂಡಿಸಿದೆ ಎನ್ನುವ ಮಾಹಿತಿ ಇತ್ತೀಚೆಗಷ್ಟೇ ಲಭ್ಯವಾಗಿತ್ತು. ಕಳೆದ ಆರೇಳು ತಿಂಗಳಿನಿಂದ ಬೇರೆ ಬೇರೆ ಖಾಸಗಿ ಕಂಪನಿಗಳು ಮತದಾರರ ಮಾಹಿತಿ ಕದಿಯುವ ಕೆಲಸ ಮಾಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ 1.40 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಡಿಲೀಟ್‌ ಮಾಡಲಾಗಿದೆ ಎಂಬ ಆರೋಪ ಕಾಂಗ್ರೆಸ್‌ ಮಾಡುತ್ತಿದೆ. ಅನಧಿಕೃತ ಡಿಲಿಟ್ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಜಿಲ್ಲಾಡಳಿತ 1.46 ಲಕ್ಷಕ್ಕೂ ಅಧಿಕ ಅನರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸಷ್ಟಪಡಿಸಿದೆ. ಆದರೆ, ಇದೇ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಮತಗಳು ಡಿಲಿಟ್ ಆಗುತ್ತಿರುವುದು ನಿಜ ಎಂದಿರುವುದು ಪ್ರತಿಪಕ್ಷಗಳ ಶಂಕೆಯನ್ನು ಬಲಗೊಳಿಸಿತ್ತು.

Hospet: Unauthorized collection of voter information, Arrested 7 people

7 ಕ್ಷೇತ್ರಗಳಲ್ಲಿರುವ ಮತದಾರರ ಸಂಖ್ಯೆ ಎಷ್ಟು?
ಧಾರವಾಡ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬರೋಬ್ಬರಿ 14,67,658 ಮತದಾರರಿದ್ದಾರೆ. ಆದರೆ 2018ರ ಚುನಾವಣೆ ವೇಳೆ ಮತದಾರರ ಸಂಖ್ಯೆ 14,48,748 ಇತ್ತು. ಅಂದರೆ ಈಗ 18,910 ಜನರ ಹೆಸರು ಡಿಲಿಟ್ ಆಗಿದ್ದು ಕಂಡು ಬರುತ್ತದೆ. ಇದಕ್ಕೆ ಜಿಲ್ಲಾಡಳಿತ, ಜನವರಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಕೇವಲ 18,910 ಜನರ ಹೆಸರು ಮಾತ್ರ ಡಿಲಿಟ್ ಆಗಿಲ್ಲ. ಬರೋಬ್ಬರಿ 1,43,316 ಜನರನ್ನು ಮತದಾರರ ಪಟ್ಟಿಯಿಂದ ಕಡಿತಗೊಳಿಸಲಾಗಿದೆ. ಮೃತಪಟ್ಟವರು 22,344 ಜನರಿದ್ದರೆ, ಸ್ಥಳಾಂತರಗೊಂಡವರೇ 30,466. ‌ 46ಸಾವಿರಕ್ಕೂ ಅಧಿಕ ಜನ ನಕಲಿ ಮತದಾರರು, ಒಂದೇ ಬಗೆಯ ಫೋಟೋ ಇದ್ದ ಎರಡು ಮೂರು ಎಪಿಕ್ ಕಾರ್ಡ್ ಹೊಂದಿರುವವರು ಹೀಗೆ 1,46,316 ಜನರನ್ನು ಡಿಲಿಟ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು.

ಇನ್ನು ಮತದಾರರ ಪಟ್ಟಿಯಿಂದ ಹೆಸರನ್ನು ಡಿಲೀಟ್‌ ಮಾಡುವುದರ ಜೊತೆಗೆ 1 ಲಕ್ಷಕ್ಕೂ ಅಧಿಕ ಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ 14.67 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಮತದಾರರ ಪಟ್ಟಿ ವಿವರಣೆ ರಾಜಕೀಯ ಪಕ್ಷಗಳಿಗೆ ಆಗಾಗ ನೀಡಲಾಗುತ್ತಿದೆ. ಅಂತಿಮ ಪಟ್ಟಿ ಬಂದಾಗ ನಿಖರ ಮಾಹಿತಿ ಲಭ್ಯವಾಗುತ್ತದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸುತ್ತಿದೆ. ಆದರೆ ಪ್ರತಿ ಕ್ಷೇತ್ರದಿಂದ 10 ರಿಂದ 20 ಸಾವಿರ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗುತ್ತಿದೆ. ಅರ್ಹ ಮತದಾರರ ಹೆಸರು ಡಿಲೀಟ್ ಆಗುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ, ಚುನಾವಣಾ ಆಯೋಗ ಹೆಚ್ಚಿನ ಗಮನ ಹರಿಸಬೇಕೆಂದು ಕಾಂಗ್ರೆಸ್‌ ಆಗ್ರಹಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+