ನಿವೃತ್ತಿ ದಿನವೇ ಕೋವಿಡ್‌ಗೆ ಸಾವನ್ನಪ್ಪಿದ ಹೊಸಪೇಟೆ ಪಿಎಸ್ಐ
ವಿಜಯನಗರ, ಜೂನ್ 30: ಇಂದು (ಜೂ.30) ಸೇವೆಯಿಂದ ನಿವೃತ್ತಿ ಹೊಂದಬೇಕಿದ್ದ ಹೊಸಪೇಟೆ ಪಿಎಸ್ಐ ಯಲ್ಲಪ್ಪ ಕದ್ರಳ್ಳಿ (60) ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಯಲ್ಲಪ್ಪ ಕದ್ರಳ್ಳಿ ಕಳೆದ ಒಂದು ವರ್ಷದಿಂದ ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ 15 ದಿನಗಳ ಹಿಂದೆ ಕೊರೊನಾ ಸೋಂಕು ಪಾಸಿಟಿವ್ ಕಾಣಿಸಿಕೊಂಡಿದ್ದು, ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಉಸಿರಾಟದ ತೀವ್ರ ತೊಂದರೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಯಲ್ಲಪ್ಪ ಕದ್ರಳ್ಳಿ ಇಂದು (ಜೂ.30) ಮೃತಪಟ್ಟಿದ್ದಾರೆ. ಇವರು ಕಳೆದ 38 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.
ದುರಾದೃಷ್ಟವಶಾತ್ ಇಂದು ಪೊಲೀಸ್ ಇಲಾಖೆ ಸೇವೆಯಿಂದ ನಿವೃತ್ತಿ ಹೊಂದಬೇಕಿದ್ದ ಇವರು, ವಿಧಿಯಾಟ ಬೇರೆನೇ ಆಗಿದ್ದರಿಂದ ನಿವೃತ್ತಿ ದಿನದಂದೇ ಇಹಲೋಕ ತ್ಯಜಿಸಿದ್ದಾರೆ. ಯಲ್ಲಪ್ಪ ಕದ್ರಳ್ಳಿ ಸಾವಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications