• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿಯಲ್ಲಿ ಸಂಬಳಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಭಟನೆ

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಜುಲೈ 24: ಐದು ತಿಂಗಳುಗಳಿಂದ ಸಂಬಳವಿಲ್ಲದೆ ಪರದಾಡುತ್ತಿರುವ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಆರೋಗ್ಯ ಇಲಾಖೆ ಸಿಬ್ಬಂದಿ, ಇಲಾಖೆಯ ವಿರುದ್ಧ ರೋಸಿಹೋಗಿ ಪ್ರತಿಭಟನೆ ನಡೆಸಿದ್ದಾರೆ.

 ಹಾಸನದಲ್ಲಿ ಹಿಂಸೆಗೆ ತಿರುಗಿದ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ ಹಾಸನದಲ್ಲಿ ಹಿಂಸೆಗೆ ತಿರುಗಿದ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ

219 ಜನ ಸಿಬ್ಬಂದಿಗೆ ಐದು ತಿಂಗಳಿನಿಂದ ಸಂಬಳವೇ ಆಗಿಲ್ಲ. ಇದರಿಂದ ಬೇಸತ್ತು ಹೋರಾಟದ ಹಾದಿ ಹಿಡಿದಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಯ ಈ ಹೋರಾಟಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘವೂ ಬೆಂಬಲ ನೀಡಿದೆ.

ದಾವಣಗೆರೆ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಇತ್ತೀಚಿಗೆ ಹರಪನಹಳ್ಳಿ ಸೇರ್ಪಡೆಯಾಗಿದ್ದು. ಹೊಸ ಜಿಲ್ಲೆಗೆ ಸೇರ್ಪಡೆ ಆದ ಬಳಿಕ ಸಂಬಳವಿಲ್ಲದೆ ಕಷ್ಟ ಅನುಭವಿಸುವಂತಾಗಿದೆ. ಪ್ರತಿಭಟನೆ ಮೂಲಕ, ಇನ್ನಾದರೂ ಸಂಬಳ ನೀಡಿ ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.

English summary
The Health Department staff of the Harapanahalli taluk in Ballari district has been protesting against the department for salary. Workers are not getting salary since 5 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X