Hampi Utsav 2023: ಇತಿಹಾಸ, ಆಕರ್ಷಣೆಗಳು, ಅತಿಥಿಗಳು, ಸ್ಥಳ ಮತ್ತು ತಲುಪುವುದು ಹೇಗೆ ಎಂದು ತಿಳಿಯಿರಿ
ಹಂಪಿ ಉತ್ಸವ ಶುಕ್ರವಾರದಿಂದ ಆರಂಭವಾಗಿದ್ದು, ಜನವರಿ 29ರವರೆಗೂ 3ದಿನಗಳ ನಡೆಯಲಿದೆ. ಈ ಬಾರಿಯ ಹಂಪಿ ಉತ್ಸವದ ಪ್ರಮುಖ ಆಕರ್ಷಣೆಗಳು ಏನು ಎನ್ನುವುದನ್ನು ಇಲ್ಲಿ ತಿಳಿಯಿರಿ.
ವಿಜಯನಗರ, ಜನವರಿ, 27: ಈಗಾಗಲೇ ಚಿಕ್ಕಮಗಳೂರು, ಬಳ್ಳಾರಿ, ಚಿಕ್ಕಾಬಳ್ಳಾಪುರ ಉತ್ಸವಗಳು ಅದ್ಧೂರಿಯಾಗಿ ನಡೆದಿದ್ದು, ಇದೇ ಹಾದಿಯಲ್ಲಿ ಒಂದು ಕೈ ಮೇಲು ಎಂಬಂತೆ ವಿಶ್ವ ವಿಖ್ಯಾತ ಹಂಪಿಯಲ್ಲಿ ಶುಕ್ರವಾರ ಹಂಪಿ ಉತ್ಸವ ಆರಂಭವಾಗಿದೆ. ಈ ಉತ್ಸವ ಜನವರಿ 27, 28 ಮತ್ತು 29ರವರೆಗೆ 3 ದಿನಗಳ ಕಾಲ ನಡೆಯಲಿದೆ. ಹಾಗೆಯೇ ಉತ್ಸವದಲ್ಲಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಗಳ ವಿವರವನ್ನು ಇಲ್ಲಿ ನೋಡಬಹುದಾಗಿದೆ.
ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಂಪಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಚಿವರಾದ ಆನಂದ್ ಸಿಂಗ್, ಶ್ರೀರಾಮುಲು ಸೇರಿದಂತೆ ಹಲವರು ಭಾಗಿಯಾಗಿದ್ದರು. ವಿಶ್ವವಿಖ್ಯಾತ "ಹಂಪಿ ಉತ್ಸವ" ಹಿನ್ನೆಲೆ ಹಂಪಿಯ ಎಲ್ಲಾ ಸ್ಮಾರಕಗಳು ದೀಪಾಂಕಾರದಿಂದ ಕಂಗೊಳಿಸುತ್ತಿವೆ. ಉತ್ಸವಕ್ಕೆ ನಾಲ್ಕು ವೇದಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಸೇರಿದಂತೆ ಸುಮಾರು 5,000ಕ್ಕೂ ಹೆಚ್ಚು ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಈ ಬಗ್ಗೆ ಮಾತನಾಡಿ, ಉತ್ಸವಕ್ಕೆ ಸುಮಾರು 9 ಲಕ್ಷಕ್ಕಿಂತ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಯಿದ್ದು, ಇದಕ್ಕೆ ಸುಮಾರು 15 ಕೋಟಿ ರೂಪಾಯಿ ವೆಚ್ಚ ತಗುಲಲಿದೆ. ಜಲಕ್ರೀಡೆ, ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಮತ್ತು ಧ್ವನಿ ಕಾರ್ಯಕ್ರಮಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಿವೆ ಎಂದರು. ಹಾಗೆಯೇ ಖ್ಯಾತ ಸಂಗೀತಗಾರರಾದ ಅರ್ಜುನ್ ಜನ್ಯಾ, ರಘು ದೀಕ್ಷಿತ್, ವಿಜಯ್ ಪ್ರಕಾಶ್, ಅರ್ಮಾನ್ ಮಲ್ಲಿಕ್ ಸೇರಿದಂತೆ ಇನ್ನಿತರ ಸಂಗೀತಗಾರರು ತಮ್ಮ ಧ್ವನಿಯ ಗಾಯನದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಮಹಾಮಾರಿ ಕರೊನಾ ಬಳಿಕ ಇದೇ ಮೊದಲ ಬಾರಿಗೆ ಹಂಪಿ ಉತ್ಸವ ನಡೆಯುತ್ತಿದ್ದು, ಸುಮಾರು 9 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಉತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಆಕರ್ಷಣೆಯಾಗಲಿರುವ ಪ್ರದರ್ಶನಗಳು
ಹಂಪಿ ಉತ್ಸವದಲ್ಲಿ ಚಿತ್ರಕಲೆ ಶಿಬಿರ, ಫಲಪುಷ್ಪ ಪ್ರದರ್ಶನ, ಮತ್ಸ್ಯಮೇಳ, ಮರಳು ಶಿಲ್ಪಕಲಾ ವೈಭವ, ಲೇಸರ್ ಶೋ, ವಸಂತ ವೈಭವ, ಆಹಾರ ಮೇಳ, ಕವಿಗೋಷ್ಠಿ, ಜಲಕ್ರೀಡೆ, ಕುಸ್ತಿ, ರಸಮಂಜರಿ, ಸಾಹಸ ಕ್ರೀಡೆ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳನ್ನು ಜನರನ್ನು ತನ್ನತ್ತ ಸೆಳೆಯಲಿವೆ.

ಯಾವೆಲ್ಲ ಕಾರ್ಯಕ್ರಮಗಳು ಇರಲಿವೆ?
ಹಂಪಿ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ, ಮುಖ್ಯ ವೇದಿಕೆ ಗಾಯತ್ರಿ ಪೀಠ ಹಾಗೂ ಹಂಪಿ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದ ಹತ್ತಿರ ಆಹಾರ ಮೇಳ, ಹಂಪಿ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ಕರಕುಶಲ, ಕೈಗಾರಿಕೆ ಹಾಗೂ ಪುಸ್ತಕ ಪ್ರದರ್ಶನ, ಹೊಸ ಮಲಪನಗುಡಿ ಗ್ರಾಮದ ವಿದ್ಯಾರಣ್ಯ ಸರ್ಕಾರಿ ಶಾಲೆಯ ಆವರಣದಲ್ಲಿ ಕುಸ್ತಿ, ಗುಂಡು, ಚೀಲ ಎತ್ತು ಹಾಗೂ ಇತರೆ ಗ್ರಾಮೀಣ ಕ್ರೀಡೆಗಳು ನಡೆಯಲಿವೆ. ಇನ್ನು ಸಾಸಿವೆ ಕಾಳು ಗಣಪತಿ ಮಂಟಪದ ಮುಂಭಾಗದಲ್ಲಿ ಸಾಹಸ ಕ್ರೀಡೆಗಳು ನಡೆಯಲಿವೆ. ಕಮಲಮಹಲ್ ಸಮೀಪದ ಗಜಶಾಲೆ ಆವರಣದಲ್ಲಿ ಧ್ವನಿ ಮತ್ತು ಬೆಳಕು ಪ್ರದರ್ಶನ, ಕಮಲಾಪುರ ಕೆರೆಯಲ್ಲಿ ಜಲ ಕ್ರೀಡೆಗಳು ನಡೆಯಲಿವೆ.

ನಾಲ್ಕು ವೇದಿಕೆಗಳ ವಿವರ ಇಲ್ಲಿದೆ
ಈ ಬಾರಿಯ ಹಂಪಿ ಉತ್ಸವದಲ್ಲಿ ನಾಲ್ಕು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದ್ದು, ಮುಖ್ಯವೇದಿಕೆಯನ್ನು ಗಾಯತ್ರಿಪೀಠದ ಬಳಿಯ ಮೈದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಎದುರು ಬಸವಣ್ಣ ಮಂಟಪದಲ್ಲಿ ಎರಡನೇ ವೇದಿಕೆ, ಸಾಸಿವೆ ಕಾಳು ಗಣಪತಿ ಮಂಟಪದಲ್ಲಿ ಮೂರನೇ ವೇದಿಕೆ ನಿರ್ಮಾಣ, ಶ್ರೀ ವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿ ನಾಲ್ಕನೇ ವೇದಿಕೆ ನಿರ್ಮಾಣ ಮಾಡಲಾಗಿದೆ. ಉತ್ಸವದಲ್ಲಿ ಪ್ರಖ್ಯಾತ ಕಲಾವಿದರು ಭಾಗವಹಿಸಲಿದ್ದು, ಜೊತೆಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕಲಾವಿದರಿಗೂ ಆದ್ಯತೆ ನೀಡಲಾಗುವುದು. ಈ ಮೂಲಕ ಹಂಪಿ ಉತ್ಸವದ ಅಸ್ಮಿತೆ ಕಾಪಾಡುವ ಕಾರ್ಯಕ್ಕೆ ಜಿಲ್ಲಾಡಳಿತ ನಿರ್ಧಾರ ಮಾಡಿದೆ.

ಹರಿದು ಬರುತ್ತಲೇ ಇದೆ ಜನರ ದಂಡು
ಹಂಪಿ ಉತ್ಸವ ಬರೀ ಉತ್ಸವ ಆಗಿರದೇ ಇಡೀ ದಕ್ಷಿಣ ಭಾರತಕ್ಕೆ ರಾಜಧಾನಿಯಾಗಿದ್ದ ವಿಜಯನಗರದ ನೆಲದ ಗತವೈಭವ ಮರುಕಳಿಸುವ ಕಾರ್ಯವೂ ಆಗಲಿದೆ. ಈ ಉತ್ಸವಕ್ಕೆ ಲಕ್ಷಾಂತರ ಜನರು ಹರಿದು ಬರಲಿದ್ದಾರೆ. ವಿಜಯನಗರದ ವಾಸ್ತುಶಿಲ್ಪ, ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಕಾರ್ಯವನ್ನು ಈ ಉತ್ಸವದಲ್ಲಿ ಮಾಡಲಾಗುತ್ತದೆ. ಹಾಗೆಯೇ ಹಂಪಿಯ ಸ್ಮಾರಕಗಳ ಗುಚ್ಛವನ್ನು ಈಗಾಗಲೇ 1986ರಲ್ಲಿ ಯುನೆಸ್ಕೊ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಹಾಗಾಗಿ ಈ ಉತ್ಸವವು ಜನೋತ್ಸವದೊಂದಿಗೆ ವಿಜಯನಗರದ ಕಲಾ ಪ್ರಪಂಚವನ್ನೂ ಉಣಬಡಿಸಲಿದೆ.

ಸೌಂಡ್ ಮತ್ತು ಲೈಟ್ ಶೋ ವ್ಯವಸ್ಥೆ
ಕಾರ್ಯಕ್ರಮಗಳು ನಿನ್ನೆ ಗುರುವಾರ ಸಂಜೆಯಿಂದಲೇ ಆರಂಭಗೊಂಡಿದ್ದು, ವಸಂತ ವೈಭವ ಕಾರ್ಯಕ್ರಮವು ನಡೆದಿದೆ. ಸೌಂಡ್ ಮತ್ತು ಲೈಟ್ ಶೋ ಅನ್ನು ಕೂಡ ಏರ್ಪಡಿಸಲಾಗಿತ್ತು. ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಫೆಬ್ರವರಿ 2ರವರೆಗೆ ಇರಲಿದ್ದು, ವಿಜಯನಗರದ ವೈಭವವನ್ನು ಧ್ವನಿ ಮತ್ತು ಬೆಳಕು ಲೇಸರ್ ಶೋನಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಹಂಪಿ ಬೈ ಸ್ಕೈ ಎಂಬ ಹೆಲಿಕಾಪ್ಟರ್ ರೈಡ್ ಅವಕಾಶವೂ ಉತ್ಸವದಲ್ಲಿ ಸಿಗಲಿದೆ. ಹಾಗೆಯೇ ಜನವರಿ 30ರವರೆಗೆ 6-7 ನಿಮಿಷಗಳ ಕಾಲ ಹೆಲಿಕಾಪ್ಟರ್‌ನಲ್ಲಿ ಹಂಪಿಯ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ.

ಕಾರ್ಯಕ್ರಮಗಳು ನಡೆಯುವ ಸಮಯ
ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಅರ್ಜುನ್ ಜನ್ಯ ಮತ್ತು ತಂಡವು ಗಾಯತ್ರಿ ಪೀಠ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಲಿದೆ. ರಾತ್ರಿ 10:0ರಿಂದ 12:30 ರವರೆಗೆ ಅಂಕಿತ್ ತಿವಾರಿ ಮತ್ತು ತಂಡವು ಕಾರ್ಯಕ್ರಮವನ್ನು ನೀಡಲಿದೆ. ಶನಿವಾರ (ಜನವರಿ 28) ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಸ್ಯಾಂಡಲ್‌ವುಡ್‌ನ ಜನಪ್ರಿಯ ಗಾಯಕ ವಿಜಯ ಪ್ರಕಾಶ್ ಕಾರ್ಯಕ್ರಮ ನೀಡಲಿದ್ದಾರೆ. ಬಳಿಕ ಬಾಲಿವುಡ್ ಗಾಯಕ ಅರ್ಮನ್ ಮಲ್ಲಿಕ್ ತಮ್ಮ ಮದುರ ಕಂಠದಿಂದ ಗಾಯನವನ್ನು ಮೊಳಗಿಸಲಿದ್ದಾರೆ.

ಭಾನುವಾರ ನಡೆಯಲಿರುವ ಕಾರ್ಯಕ್ರಮಗಳು
ಇನ್ನು (ಭಾನುವಾರ ಜನವರಿ 29) ಕನ್ನಡದ ಗಾಯಕಿ ಅನನ್ಯ ಭಟ್ ಅವರು ರಾತ್ರಿ 7:8 ಗಂಟೆಗೆ ಕಾರ್ಯಕ್ರಮದಲ್ಲಿ ತಮ್ಮ ಗಾಯನದ ಮೂಲಕ ಜನರನ್ನು ರಂಜಿಸಲಿದ್ದಾರೆ. 8:15ರಿಂದ 9:45 ರವರೆಗೆ ರಘು ದೀಕ್ಷಿತ್, ರಾತ್ರಿ 10:15ರಿಂದ ಕೈಲಾಶ್ ಖೇರ್ ತಮ್ಮ ಹಾಡಿನ ಮೂಲಕ ಜನರನ್ನು ರಂಜಿಸಲಿದ್ದಾರೆ. ಪಾರ್ಕಿಂಗ್ ಸ್ಥಳದಿಂದ ಕಾರ್ಯಕ್ರಮ ಸ್ಥಳದವರೆಗೆ ಉಚಿತ ಬಸ್ ಸೇವೆ ಇರಲಿದ್ದು, ಪ್ರತಿ ಐದು ನಿಮಿಷಕ್ಕೊಂದು ಬಸ್ ಬಿಡಲಾಗುತ್ತದೆ. ಒಟ್ಟು 120 ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಹಂಪಿಯ ಇತಿಹಾಸ ಹೇಳುವುದೇನು?
16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯರ ಆದೇಶದ ಮೇರೆಗೆ ಕಲ್ಲಿನ ರಥವನ್ನು ನಿರ್ಮಿಸಲಾಯಿತು. ಕಾಳಿಂಗದೊಂದಿಗಿನ ಯುದ್ಧದ ಸಮಯದಲ್ಲಿ ಚಕ್ರವರ್ತಿಯು ಕೋನಾರ್ಕ್‌ನ ಸೂರ್ಯ ದೇವಾಲಯದಿಂದ ಪ್ರಭಾವಿತನಾಗಿ ಹಂಪಿಯಲ್ಲಿ ಇದೇ ರೀತಿಯ ದೇವಾಲಯವನ್ನು ಮರುಸೃಷ್ಟಿಸಲು ಬಯಸಿದ್ದನೆಂದು ಇತಿಹಾಸದಲ್ಲಿ ಉಲ್ಲೇಖವಿದೆ. ಇತ್ತೀಚೆಗೆ ಬಿಡುಗಡೆಯಾದ ಭಾರತದ ಕರೆನ್ಸಿಯ 50 ರೂಪಾಯಿ ನೋಟುಗಳಲ್ಲಿ ಕಲ್ಲಿನ ರಥದ ಚಿತ್ರಗಳನ್ನು ಕಾಣಬಹುದಾಗಿದೆ.

ಹಂಪಿಗೆ ಯಾವ ಮಾರ್ಗಗಳಲ್ಲಿ ಹೋದರೆ ಸೂಕ್ತ
ವಿಜಯನಗರ ಸಾಮ್ರಾಜ್ಯ ಅಂತಲೇ ಪ್ರಖ್ಯಾತಿ ಪಡೆದ ಹಂಪಿ ಬೆಂಗಳೂರಿನಿಂದ 342 ಕಿಲೋ ಮೀಟರ್ ದೂರದಲ್ಲಿದೆ. ರಸ್ತೆ, ರೈಲು ಅಥವಾ ವಿಮಾನದ ಮೂಲಕವೂ ಇಲ್ಲಿಗೆ ತಲುಪಬಹುದಾಗಿದೆ. ಹಾಗೆಯೇ ಹಂಪಿಗೆ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಪ್ರತಿದಿನ ವಿಮಾನಯಾನಗಳಿವೆ. ಹಂಪಿಯಲ್ಲಿ ಟ್ಯಾಕ್ಸಿ, ಬೈಕ್ ಅಥವಾ ಬೈಸಿಕಲ್ ಬಾಡಿಗೆಗೆ ಪಡೆದು ವಿಜಯ ವಿಠ್ಠಲ ದೇವಸ್ಥಾನವನ್ನು ತಲುಪಬಹುದಾಗಿದೆ. ಅಲ್ಲದೇ ಎಲೆಕ್ಟ್ರಿಕ್ ಬಂಡಿಗಳನ್ನು ಕೂಡ ಪ್ರವಾಸ ಮಾಡಬಹುದಾಗಿದೆ. ಹೊಸಪೇಟೆ ಹತ್ತಿರದ ರೈಲು ನಿಲ್ದಾಣದಿಂದ ಹಂಪಿಗೆ 15 ಕಿ.ಮೀ. ಆಗುತ್ತದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications