• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯದಲ್ಲಿ ಕೊರೊನಾ ಆತಂಕ; ಹಂಪಿಯಲ್ಲಿ ವಿದೇಶಿಗರ ತಪಾಸಣೆ

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಮಾರ್ಚ್ 3: ರಾಜ್ಯದಲ್ಲೂ ಕೊರೊನಾ ವೈರಸ್ ಪ್ರಕರಣದ ಆತಂಕ ಶುರುವಾದ ಬೆನ್ನಲ್ಲೇ ಐತಿಹಾಸಿಕ ಸ್ಥಳ ಹಂಪಿಯಲ್ಲಿ ವಿದೇಶಿಯರಿಗೆ ಆರೋಗ್ಯ ಇಲಾಖೆ ಆರೋಗ್ಯ ತಪಾಸಣೆ ನಡೆಸಿದೆ.

ಪ್ರವಾಸಿ ತಾಣ ಹಂಪಿಯಲ್ಲಿ ವಿದೇಶಿ ಪ್ರವಾಸಿಗರಿಗೆ ಇಂದು ಕೊರೊನಾ ವೈರಸ್ ಗೆ ಸಂಬಧಿಸಿದಂತೆ ಆರೋಗ್ಯ ತಪಾಸಣೆಯನ್ನು ಮಾಡಲಾಗಿದೆ. ಹಂಪಿಗೆ ಬಂದಿರುವ ವಿದೇಶಿ ವ್ಯಕ್ತಿಗಳಲ್ಲಿ ಯಾವುದೇ ಶಂಕೆ ಕಂಡುಬಂದಿಲ್ಲ.

ಕೊರೊನಾ; ಟೆಕ್ಕಿಯ ಸಹೋದ್ಯೋಗಿ ಆಸ್ಪತ್ರೆಗೆ ದಾಖಲು, ಸಚಿವರ ಟ್ವೀಟ್

ಇಲ್ಲಿನ ಆರೋಗ್ಯ ಇಲಾಖೆಯು ವಿದೇಶಿಗರ ಆರೋಗ್ಯದ ಕುರಿತು ಮುಂಜಾಗೃತಾ ಕ್ರಮವಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಹಂಪಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಭೇಟಿ ನೀಡುತ್ತಾರೆ. ಹೀಗಾಗಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಹಂಪಿಗೆ ಭೇಟಿ ನೀಡುವ ಪ್ರತಿ ವಿದೇಶಿ ಪ್ರಜೆಗಳ ತಪಾಸಣೆ ಮಾಡುತ್ತಿದೆ.

English summary
The Health Department has conducted a health check for foreigners in the historical place Hampi with the fear of coronavirus cases in the state,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X