ಮಾಜಿ ಸಿಎಂ ರನ್ನು "ಯೂಟರ್ನ್ ಸ್ವಾಮಿ' ಎಂದ ಸಿ.ಟಿ.ರವಿ

ಬಳ್ಳಾರಿ, ಜನವರಿ 10: ಮಂಗಳೂರು ಗಲಭೆಗೆ ಪೊಲೀಸ್ ಇಲಾಖೆಯೇ ಕಾರಣ ಎಂದು ಹೇಳಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸದ್ಯದಲ್ಲಿಯೇ ಯೂಟರ್ನ್ ಹೊಡೆಯಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.

ಮಂಗಳೂರು ಗಲಭೆಯಲ್ಲಿ ಪೊಲೀಸ್ ಇಲಾಖೆಯೇ ಮೊದಲು ಲಾಠಿ ಚಾರ್ಜ್ ಮಾಡಿದ್ದಾರೆ, ಹೀಗಾಗಿ ಮಂಗಳೂರು ಎಸ್ಪಿ ಹರ್ಷಾ ಅವರನ್ನು ಅಮಾನತು ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಚಿವ ಸಿಟಿ ರವಿ ಅವರು ತಿರುಗೇಟು ನೀಡಿದ್ದಾರೆ.

ಬಳ್ಳಾರಿಯ ಹಂಪಿ ಉತ್ಸವ ಮಳಿಗೆಗಳ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಂತಾ ಎಲ್ಲಾ ಇರಲ್ಲಾ ಅವರೆಲ್ಲಾ ಈ ರಾಜ್ಯದ ಪೊಲೀಸರು.

CT Ravi Calls To Former CM Is U Turn Swamy

ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು, ರಾಜ್ಯದ ಸೂಕ್ಷ್ಮ ವಿಚಾರಗಳನ್ನು ಮಾತನಾಡುವ ಮುನ್ನ ಒಂದು ಸಾರಿ ಯೋಚನೆ ಮಾಡಬೇಕು ಎಂದರು.

ಮಾಜಿ ಸಿಎಂ ಪೊಲೀಸರ ಬಗ್ಗೆ ಹಗುರವಾಗಿ ಮಾತನಾಡಿ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗುವಂತೆ ಮಾಡಿದ್ದಾರೆ. ಮಂಗಳೂರಿನಲ್ಲಿ ಕಲ್ಲು ಹೊಡೆದವರು ಪೊಲೀಸರಾ? ಬೆಂಕಿ ಹಚ್ಚಿದ್ದು ಪೊಲೀಸರಾ? ಎಂದು ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಅವರು ಸಿ,ಎಂ ಆಗಿದ್ದಾಗ ಬಾಂಗ್ಲಾ ವಲಸಿಗರನ್ನು ಹೊರಹಾಕಬೇಕು ಎನ್ನುತಿದ್ರು. ಆದರೆ ಈಗ ಯಾಕೆ ಈ ವಿರೋಧ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಈ ನಡೆಯನ್ನು ನೋಡಿದರೆ ಸಿಗ್ನಲ್ ಇಲ್ಲದೇ ಯು ಟರ್ನ್ ಹೊಡೆಯುತ್ತಾರೆ ಅನಿಸುತ್ತೆ.

ಜೆಡಿಎಸ್ ಒಂದು ಸೆಕ್ಯೂಲರ್ ಪಾರ್ಟಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ಹೇಳಿಕೆಯಿಂದ ಇದು ಅಪ್ಪ ಮಕ್ಕಳ ಪಕ್ಷ ಅನಿಸತ್ತೆ ಅಂತಾ ಕುಮಾರಸ್ವಾಮಿ ವಿರುದ್ಧ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+