ಅರಣ್ಯ ಸಚಿವ ಅನಂದ್ ಸಿಂಗ್ ಅವರಿಗೂ ಕೊರೊನಾ ಸೋಂಕು ದೃಢ

ಬಳ್ಳಾರಿ, ಜುಲೈ 26: ಅರಣ್ಯ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೂ ಕೊರೊನಾ ಸೋಂಕು ಪ್ರಕರಣ ದೃಢಪಟ್ಟಿದೆ. ಶನಿವಾರ ಸಂಜೆ ಸಚಿವ ಆನಂದ್ ಸಿಂಗ್ ಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸದ್ಯ ಸಚಿವರು ಹೋಮ್ ಐಸೋಲೇಷನ್ ಆಗಿದ್ದಾರೆ.

ಕಳೆದ ಒಂದು ವಾರದ ಹಿಂದೆ ಸಚಿವರ ಕಾರು ಚಾಲಕನಿಗೆ ಸೋಂಕು ತಗುಲಿದ್ದು, ಕಾರು ಚಾಲಕ ಸೇರಿದಂತೆ ಅವರ ಮನೆಯವರು ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಆರೋಗ್ಯ ಇಲಾಖೆ ಹೋಮ್‌ ಕ್ವಾರಂಟೈನ್ ಮಾಡಲಾಗಿತ್ತು. ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಸಚಿವ ಆನಂದ್ ಸಿಂಗ್ ಅವರು ಶುಕ್ರವಾರ ಸ್ವಯಂ ಪ್ರೇರಿತರಾಗಿ ಟೆಸ್ಟ್ ಮಾಡಿಸಿದ್ದರು.

Coronavirus Infection Positive For Forest Minister Anand Singh

ಶನಿವಾರ ರಾತ್ರಿ ಆನಂದ್ ಸಿಂಗ್ ಗೆ ಕೊರೊನಾ ಸೋಂಕು ಧೃಡವಾಗಿರುವ ವರದಿ ಬಂದಿದ್ದು, ಯಾವುದೇ ರೋಗ ಲಕ್ಷಣ ಗಳಿಲ್ಲದ ಕಾರಣ, ಎ ಸಿಂಪ್ಟಮ್ಯಾಟಿಕ್ ಪ್ರಕರಣ ಎಂದು ಗುರುತಿಸಲಾಗಿದೆ. ಹೀಗಾಗಿ ಹೊಸಪೇಟೆ ನಿವಾಸದಲ್ಲಿ ಸಚಿವ ಆನಂದ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+