ಸದನಕ್ಕೆ ಶಾಸಕ ಬಿ.ಎಸ್. ಆನಂದಸಿಂಗ್ ಮಧ್ಯಾಹ್ನ ಹಾಜರು
Recommended Video

ಬಳ್ಳಾರಿ, ಮೇ. 19 : ವಿಜಯನಗರ ಕಾಂಗ್ರೆಸ್ ಶಾಸಕ ಬಿ.ಎಸ್. ಆನಂದಸಿಂಗ್ ಅವರಿಗಾಗಿ ವಿಧಾನಸೌಧವೇ ಕಾತುರದಿಂದ ನೋಡುತ್ತಿದೆ. ಬಿ.ಎಸ್. ಆನಂದಸಿಂಗ್ ಅವರು ಸದನಕ್ಕೆ ಹಾಜರಾಗಿ, ಪ್ರಮಾಣವಚನ ಸ್ವೀಕಾರ ಮಾಡುವ ಕುರಿತು ಅನೇಕರಲ್ಲಿ ವಿಭಿನ್ನವಾದ ಅಭಿಪ್ರಾಯಗಳಿವೆ.
ಹೊಸಪೇಟೆಯಲ್ಲಿ ಶುಕ್ರವಾರ ಅಧ್ಯಕ್ಷ ಬಿ.ವಿ. ಶಿವಯೋಗಿ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿ, ಸ್ಥಳೀಯ ಪೊಲೀಸರಿಗೆ ದೂರು ನೀಡಿ, ನೂತನ ಶಾಸಕ ಬಿ.ಎಸ್. ಆನಂದಸಿಂಗ್ ಅವರು ಕಾಣೆಯಾಗಿದ್ದಾರೆ. ಹುಡುಕಿಕೊಡಿ ಎಂದು ಕೋರಿದ್ದರು.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಘಟಕ ಪೊಲೀಸರಿಗೆ ದೂರು ನೀಡಿ, ಪ್ರತಿಭಟನೆ ನಡೆಸಿದೆ. ಆದರೆ ಇದೆಲ್ಲದರ ನಡುವೆ ಕಾಂಗ್ರೆಸ್ ಮತ್ತು ಬಿ.ಎಸ್. ಆನಂದಸಿಂಗ್ ಅವರ ಆಪ್ತರು ಹಾಗೂ ಕುಟುಂಬದ ಮೂಲಗಳ ಪ್ರಕಾರ ಶಾಸಕರು ಮಧ್ಯಾಹ್ನದ ವೇಳೆಗೆ ಸದನಕ್ಕೆ ಹಾಜರಾಗಲಿದ್ದಾರಂತೆ!

ಆನಂದ್ ಸಿಂಗ್ ಅವರು ನಾಪತ್ತೆಯಾಗಿದ್ದಾರೆ. ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ್ದ ಆನಂದ್ ಸಿಂಗ್ ಬಿಜೆಪಿಗೆ ವಿಶ್ವಾಸಮತದಲ್ಲಿ ಬೆಂಬಲ ನೀಡುತ್ತಾರೆ ಎಂದು ಸುದ್ದಿ ಹಬ್ಬಿತ್ತು.











Click it and Unblock the Notifications