ಕಾಂಗ್ರೆಸ್ ಪ್ರಣಾಳಿಕೆ: ಬಳ್ಳಾರಿ ಜೀನ್ಸ್ ಗೆ ಬರಲಿದೆ ಬ್ರಾಂಡ್ ಇಮೇಜ್ !
ಬಳ್ಳಾರಿ, ಮೇ. 01 : ಕರ್ನಾಟಕದಲ್ಲಿ ಐದು ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿರುವ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಗೆ ಮುಂದಿನ ದಿನಗಳಲ್ಲಿ ಮಾಡಲಿರುವ ಸೇವೆ, ಅಭಿವೃದ್ಧಿಯ ವಿವಿಧ ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ನಮೂದು ಮಾಡಿದೆ.
ಕಾಂಗ್ರೆಸ್ ಮತದಾರರಿಗೆ ಭರವಸೆಗಳ ದೊಡ್ಡ ಸಾಲನ್ನೇ ಅಕ್ಷರಗಳಲ್ಲಿ ಮೂಡಿಸಿದೆ. ಹೊಸ ಹೊಸ ಪ್ರಯತ್ನಗಳ ಮೂಲಕ ಮತಗಳನ್ನು ಸೆಳೆಯಲು ಯತ್ನಿಸಿದೆ. ಪ್ರಾದೇಶಿಕ ವಿಚಾರಗಳಿಗೆ ಪ್ರಥಮ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಒಂದು ನೋಟ ಇಲ್ಲಿದೆ ನೋಡಿ...
ಸಂಡೂರಿನ ನಂದಿಹಳ್ಳಿಯಲ್ಲಿ ಐಐಟಿ, ನೆನೆಗುದಿಗೆ ಬಿದ್ದಿರುವ ಬಹುದಿನಗಳ ಬೇಡಿಕೆಯಾಗಿರುವ ಹಗರಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ, ಬಳ್ಳಾರಿ ಜಿಲ್ಲೆಯಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿ, ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ಪ್ರಮುಖ ಅಂಶಗಳು.

ಕೃಷಿಯೇತರ ಕ್ಷೇತ್ರದಲ್ಲಿ ಹೆಚ್ಚು ಜನರು
ಕರ್ನಾಟಕ ಪ್ರದೇಶ ವ್ಯಾಪ್ತಿಯ ಬಳ್ಳಾರಿ ಜಿಲ್ಲೆ ಕಲಬುರಗಿ ಜಿಲ್ಲೆಯ ನಂತರ ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ಜಿಲ್ಲೆ. ಇಲ್ಲಿ ಕೃಷಿ ಕ್ಷೇತ್ರಕ್ಕಿಂತ ಕೃಷಿಯೇತರ ಕ್ಷೇತ್ರದಲ್ಲಿ ಜನರು ಹೆಚ್ಚು ತೊಡಗಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ಸೇವಾ ವಲಯ, ಕೈಗಾರಿಕಾ ಅಭಿವೃದ್ಧಿ, ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಕೃಷಿ, ಪೂರಕ ಚಟುವಟಿಕೆಗಳು ಹಾಗೂ ಗ್ರಾಮೀಣಾಭಿವೃದ್ಧಿ, ನಗರ ಮೂಲ ಸೌಕರ್ಯ ಹಾಗೂ ಸ್ಮಾರ್ಟ್ ಸಿಟಿ ಯೋಜನೆ, ಆರೋಗ್ಯ ಮತ್ತು ಪೌಷ್ಠಿಕತೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಎನ್ನುವ ವಿಭಾಗಗಳಲ್ಲಿ ವಿವಿಧ ಯೋಜನೆಗಳನ್ನು ಮೂಡಿಸಿ, ವಿಶೇಷತೆ ಮರೆದಿದೆ.
ಜಿಲ್ಲೆಯ ಜೀನ್ಸ್ ಹಾಗೂ ಸಿದ್ಧ ಉಡುಪು ತಯಾರಿಕಾ ಉದ್ಯಮಕ್ಕೆ ತಾಂತ್ರಿಕ ಆಧುನಿಕತೆ ಮತ್ತು ಕಾರ್ಮಿಕರ ಹಿತ ಕಾಪಾಡುವ ಮೂಲಕ ಉತ್ಪಾದನಾ ಹೆಚ್ಚಿಸಲು ವೃತ್ತಿ ಕೌಶಲ್ಯ ತರಬೇತಿಗೆ ಆದ್ಯತೆ ನೀಡಿದೆ. ಹುಣಸೆ ಹಣ್ಣು ಮೌಲ್ಯವರ್ಧನೆಗಾಗಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ, ಹುಣಿಸೆ ಹಣ್ಣಿನ ಪಲ್ಪ್, ವೈನ್ ರೀತಿಯ ಪಾನೀಯ, ಮಸಾಲೆಯುಕ್ತ ಸಾಸ್ ಗಳ ತಯಾರಿಕೆಗೆ ಕನಸು ಬಿತ್ತಿದೆ.

ಬರಲಿದೆ ಬಳ್ಳಾರಿ ಜೀನ್ಸ್
ಬಳ್ಳಾರಿ ಜೀನ್ಸ್ ಗೆ ಬ್ರಾಂಡ್ ಇಮೇಜ್ ಸೃಷ್ಟಿಸಿ, ರಾಷ್ಟ್ರ ಮಟ್ಟದಲ್ಲಿ ಬಳ್ಳಾರಿ ಜೀನ್ಸ್ ಉಡುಪುಗಳಿಗೆ ಮಾರುಕಟ್ಟೆ ಒದಗಿಸುವಿಕೆ. ಜಿಲ್ಲೆಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ಗಳನ್ನು ಸ್ಥಾಪಿಸಿ ಜೀನ್ಸ್ ಉಡುಪುಗಳ ಉತ್ಪಾದನೆ ಹಾಗೂ ವಿತರಣಾ ಕೇಂದ್ರಗಳನ್ನು ಆರಂಭಿಸುವಿಕೆ. ಪೂರಕ ಉದ್ಯಮಗಳ ಸ್ಥಾಪನೆ ಮೂಲಕ ಬಳ್ಳಾರಿಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲಾಗುವುದು.
ಪ್ಲಾಸ್ಟಿಕ್ ಮರುಬಳಕೆ ಉದ್ಯಮಗಳ ಪ್ರೋತ್ಸಾಹ. ವೈದ್ಯಕೀಯ ಉಪಕರಣಗಳ ಉದ್ಯಮ ಸ್ಥಾಪನೆಗೆ ವಿಶೇಷ ಪ್ರೋತ್ಸಾಹ. ಪ್ಲಾಸ್ಟಿಕ್ ಆಧಾರಿತ ಪೂರಕ ಉದ್ಯಮಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ.

ಸೂಕ್ತ ಸೌಲಭ್ಯಕ್ಕೆ ಒತ್ತು
ಬಳ್ಳಾರಿಯಲ್ಲಿ ತ್ಯಾಜ್ಯ ನಿರ್ವಹಣಾ ಕೇಂದ್ರ ಸ್ಥಾಪಿಸಿ, ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ, ಸಂಸ್ಕರಣೆ ಹಾಗೂ ನಿರ್ವಹಣೆಗೆ ಅಗತ್ಯವಿರುವ ತರಬೇತಿ ಕೇಂದ್ರ ಸ್ಥಾಪನೆ.
ಜಿಲ್ಲಾ ಖನಿಜ ನಿಧಿಯ ಸದ್ಬಳಕೆಗೆ ಸೂಕ್ತ ನೀತಿ ರೂಪಿಸಲು ತಜ್ಞರ ಸಮಿತಿ ರಚನೆ.
ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ, ಸುಲಭವಾಗಿ ವ್ಯಾಪಾರ-ವಹಿವಾಟು ನಡೆಸಲು ಮತ್ತು ಗಣಿ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸೂಕ್ತ ಸೌಲಭ್ಯಕ್ಕೆ ಒತ್ತು. ಬಳ್ಳಾರಿಯಲ್ಲಿ ಮೆಗಾ ಟೆಕ್ಸ್ ಟೈಲ್ಸ್ ಪಾರ್ಕ್ ಸ್ಥಾಪಿಸಿ ದೇಶೀಯ ಹಾಗೂ ವಿದೇಶೀ ಮಾರುಕಟ್ಟೆಗಳಿಗೆ ಪೂರಕವಾದ ಉತ್ಪಾದನೆಗಳನ್ನು ಉತ್ಪಾದಿಸಲು ಪ್ರೋತ್ಸಾಹ.
ಬಳ್ಳಾರಿ ಜಿಲ್ಲೆಯಲ್ಲಿ 1,25,000 ಕೋಟಿ ರೂಗಳ ಬಂಡವಾಳ ತಂದಿರುವ ಕಬ್ಬಿಣ ಹಾಗೂ ಉಕ್ಕು ಉದ್ಯಮಗಳಿಗೆ ಹೆಚ್ಚುವರಿ ನೀರು, ವಿದ್ಯುತ್ ಮತ್ತು ಕಚ್ಚಾ ವಸ್ತುಗಳ ಪೂರೈಕೆಗೆ ಬೆಂಬಲ.
ಮುಚ್ಚುವ, ಮುಚ್ಚಿರುವ, ಮುಚ್ಚುತ್ತಿರುವ ಭೀತಿಯಲ್ಲಿರುವ ನಷ್ಟದಲ್ಲಿರುವ ಸ್ಪಾಂಜ್ (ಮೆದು) ಕಬ್ಬಿಣ ಘಟಕಗಳ ಪುನಶ್ಚೇತನ ಕಾರ್ಯಕ್ಕೆ ಉದ್ಯಮಿಗಳನ್ನು ಆಕರ್ಷಿಸಲು ವಿಶೇಷ ಪ್ಯಾಕೇಜ್ ಮತ್ತು ವಿಶೇಷ ಪ್ರೋತ್ಸಾಹ ಧನ.
ಗ್ರೀನ್ ಫೀಲ್ಡ್ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಿ, ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 500 ಹೊಲಿಗೆ ಕೇಂದ್ರಗಳನ್ನು ಬೆಳೆಸುವ ಹಾಗೂ ಜಿಲ್ಲೆಯಲ್ಲಿ ಕೈಮಗ್ಗ, ಸಿದ್ಧ ಉಡುಪು ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಸೂಕ್ತ ಯೋಜನೆ.

ಐಐಟಿ ಸ್ಥಾಪನೆ
ಸಂಡೂರು ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿರುವ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಸ್ನಾತಕೋತ್ತರ ಕೇಂದ್ರದಲ್ಲಿ ಐಐಟಿ ಸ್ಥಾಪನೆ. ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಬ್ಬಿಣ ಉಕ್ಕು ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸಲು ಜಿಲ್ಲೆಯ ಯುವಜನರಿಗೆ ಸ್ಥಳೀಯ ಕೇಂದ್ರಿತ ತರಬೇತಿ ಕೇಂದ್ರಗಳ ಆರಂಭ.
ಬಳ್ಳಾರಿ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಗಣಿಗಾರಿಕೆ ಕುರಿತ ವಿಶೇಷ ಹಾಗೂ ಡಿಪ್ಲೋಮಾ ಕೋರ್ಸ್ ಗಳನ್ನು ಆರಂಭಿಸಿ, ಗಣಿಗಾರಿಕೆಗೆ ಅಗತ್ಯವಿರುವ ತಂತ್ರಜ್ಞರನ್ನು ರೂಪಿಸಲು ಕ್ರಮ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications