ಚಂದ್ರಯಾನ-3: ಬಳ್ಳಾರಿಯಲ್ಲಿ ಆಲ್ ದಿ ಬೆಸ್ಟ್ ಇಸ್ರೋ, ಭಾರತ್ ಮಾತ್ ಕಿ ಜೈ ಎಂದು ಘೋಷಣೆ ಮೊಳಗಿಸಿದ ಶಾಲಾ ವಿದ್ಯಾರ್ಥಿಗಳು

ಬಳ್ಳಾರಿ, ಆಗಸ್ಟ್‌, 23: ಚಂದ್ರಯಾನ-3 ಯಶಸ್ಸಿಗೆ ದೇಶಾದ್ಯಂತ ಕಾತರದಿಂದ ಕಾಯುತ್ತಿದೆ. ಅಲ್ಲದೆ ದೇಶದ ಬಹುತೇಕ ರಾಜ್ಯಗಳಲ್ಲಿ ವಿಶೇಷ ಪೂಜೆಗಳನ್ನು ಸಹ ಸಲ್ಲಿಸುತ್ತಿದ್ದಾರೆ. ಅದೇ ರೀತಿ ರಾಜ್ಯದ ಗಣಿನಾಡು ಬಳ್ಳಾರಿಯ ವಾಸವಿ ಶಾಲೆಯಲ್ಲಿ ಇಂದು (ಆಗಸ್ಟ್‌ 23) ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾರತದ ಧ್ವಜ ಹಿಡಿದು ಪ್ರಾಥನೆ ಸಲ್ಲಿಸಿದರು.

ಬಳ್ಳಾರಿಯ ವಾಸವಿ ಶಾಲೆಯವಿದ್ಯಾರ್ಥಿಗಳು ರಾಕೆಟ್ ಮಾದರಿಯ ಸ್ಥಬ್ಧ ಚಿತ್ರ ನಿರ್ಮಾಣ ಮಾಡುವ ಮೂಲಕ ಚಂದ್ರಯಾಣ-3 ಯಶಸ್ವಿಯಾಗಲೆಂದು ಶುಭ ಹಾರೈಸಿದ್ದಾರೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ವಿಜ್ಞಾನಿಗಳ ಪರಿಶ್ರಮಕ್ಕೆ ಯಶಸ್ಸು ಸಿಗಲಿ ಎಂದ ಹಾರೈಸಿದರು. ಇದೇ ವೇಳೆ ಜೈ ಇಸ್ರೋ, ಜೈ ಭಾರತ್ ಎಂದು ಘೋಷಣೆ ಕೂಗಿ ಗಮನ ಸೆಳೆದರು.

for-success-of-chandrayaan-3

ಚಂದ್ರಯಾನ-3ಗೆ ಶುಭಹಾರೈಸಿದ ರಂಭಾಪುರಿ ಶ್ರೀ

ಚಂದ್ರಯಾನ-3ಗೆ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಮೂಲಕ ಶುಭಹಾರೈಸಿದ್ದಾರೆ‌. ಚಿಕ್ಕಮಗಳೂರು ಜಿಲ್ಲೆ ಎನ್.ಆರ್‌.ಪುರ ತಾಲೂಕಿನ ಬಾಳಡಹೊನ್ನೂರಿನಲ್ಲಿ ಮಾತಾನಾಡಿದ ಅವರು, ನಮ್ಮ ವಿಜ್ಞಾನಿಗಳ ಈ ಕೆಲಸ ವಿಶ್ವಕ್ಕೆ ಮಾದರಿಯಾಗಲಿ. ಇಂದು ಇಡೀ ಜಗತ್ತೆ ಭಾರತದತ್ತ ಮುಖ ಮಾಡಿದೆ. ವಿಜ್ಞಾನಿಗಳಿಗೆ ಬೆನ್ನುಲುಬಾಗಿ ನಿಂತ ಪ್ರಧಾನಿ ಮೋದಿ ಅವರಿಗೂ ಅಭಿನಂದನೆಗಳು ಎಂದರು.

ಅಲ್ಲದೆ ಸಾವಿರಾರು ವಿಜ್ಞಾನಿಗಳ ಚಂದ್ರಯಾನ-3 ಇಸ್ರೋ ತಂಡದಲ್ಲಿ ಬಾಳೆಹೊನ್ನೂರು ಮಹಿಳೆ ಕೇಶವಮೂರ್ತಿ-ಮಂಗಳ ಪುತ್ರಿ ಡಾ.ಕೆ.ನಂದಿನಿ ಇರುವುದು ಹೆಮ್ಮೆಯ ವಿಚಾರವಾಗಿದೆ. ಚಂದ್ರಯಾನ-3 ಲ್ಯಾಂಡಿಂಗ್ ಸುವರ್ಣ ಘಳಿಗೆಯನ್ನು ನಾನು ಕಣ್ತುಂಬಿಕೊಳ್ಳುತ್ತೇನೆ. ಇಸ್ರೋ ವಿಜ್ಞಾನಿಗಳ ಮುಂದಿನ ಭವಿಷ್ಯವೂ ಸುಖಕಾರವಾಗಿರಲಿ, ಸಾಧನೆಗೈಯುವಂತಿರಲಿ ಎಂದು ರಂಭಾಪುರಿ ಶ್ರೀ ಶುಭಹಾರೈಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+