ಕಂಪ್ಲಿ: ಪತ್ನಿ ಮೇಲಿನ ಸಿಟ್ಟಿಗೆ ಐವರನ್ನು ಕೊಚ್ಚಿ ಕೊಂದ ತಿಪ್ಪಯ್ಯ
ಕಂಪ್ಲಿ: ಆ ಕೊಠಡಿ ತುಂಬೆಲ್ಲಾ ರಕ್ತ, ಮೂವರು ಮಕ್ಕಳು ಸೇರಿದಂತೆ ಇಬ್ಬರು ಹೆಂಗಸರ ಶವ ಅಲ್ಲಿತ್ತು. ಎಲ್ಲರನ್ನು ಕೊಚ್ಚಿ ಕೊಂದ ವ್ಯಕ್ತಿ ಕೊನೆಗೆ ಪೊಲೀಸರಿಗೆ ಶರಣಾಗಿದ್ದಾನೆ.
ಕಂಪ್ಲಿ(ಬಳ್ಳಾರಿ), ಫೆಬ್ರವರಿ 26: ಆ ಕೊಠಡಿ ತುಂಬೆಲ್ಲಾ ರಕ್ತ, ಮೂವರು ಮಕ್ಕಳು ಸೇರಿದಂತೆ ಇಬ್ಬರು ಹೆಂಗಸರ ಶವ ಅಲ್ಲಿತ್ತು. ಎಲ್ಲರನ್ನು ಕೊಚ್ಚಿ ಕೊಂದ ವ್ಯಕ್ತಿ ಕೊನೆಗೆ ಪೊಲೀಸರಿಗೆ ಶರಣಾಗಿದ್ದಾನೆ. ಪತ್ನಿ ಮೇಲಿನ ಅನುಮಾನಕ್ಕೆ ಕುಟುಂಬದವರೆಲ್ಲರನ್ನು ಬಲಿ ತೆಗೆದುಕೊಂಡ ತಿಪ್ಪಯ್ಯನ ವಿಚಾರಣೆ ಜಾರಿಯಲ್ಲಿದೆ.
ತನ್ನ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಭೂತ ಆವರಿಸಿಕೊಂಡಿದ್ದ ತಿಪ್ಪಯ್ಯ, ಪತ್ನಿ ಮತ್ತು ಪತ್ನಿಯ ತಂಗಿ, ತನ್ನ ಮೂವರು ಮಕ್ಕಳೂ ಸೇರಿ ಐದು ಮಂದಿಯನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣದ ಚಪ್ಪರದಳ್ಳಿಯಲ್ಲಿರುವ ತಿಪ್ಪಯ್ಯನ ಮನೆಯ ಮುಂದೆ ಜನಜಾತ್ರೆ ನೆರೆದಿದೆ.

ಮೃತರನ್ನು ತಿಪ್ಪಯ್ಯನ ಪತ್ನಿ ಫಕೀರಮ್ಮ (36), ಪತ್ನಿ ತಂಗಿ ಗಂಗಮ್ಮ(30), ತಿಪ್ಪಯ್ಯನ ಮಕ್ಕಳಾದ ಪವಿತ್ರ (6), ಮಗ ರಾಜು(8), ಬಸಮ್ಮ (10) ಎಂದು ಗುರುತಿಸಲಾಗಿದೆ. ತಿಪ್ಪಯ್ಯ ಹಾಗೂ ಫಕೀರಮ್ಮ ಅವರ ಮತ್ತೊಬ್ಬ ಮಗಳು ರಾಜೇಶ್ವರಿ(12) ತನ್ನ ಸಂಬಂಧಿಕರ ಮನೆಗೆ ಹೋಗಿದ್ದರಿಂದ ಆಕೆಯ ಜೀವ ಉಳಿದಿದೆ.
ಈ ಹತ್ಯಾಕಾಂಡಕ್ಕೆ ಕೌಟುಂಬಿಕ ಕಲಹ. ಪತ್ನಿ ಮೇಲಿನ ಅನುಮಾನವೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಪಿ ಕೆಂಚನಗುಡ್ಡದ ತಿಪ್ಪಯ್ಯ ಅವರನ್ನು ವಶಕ್ಕೆ ಪದೆದು ಕಂಪ್ಲಿ ಪಟ್ಟಣ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಾಸಗಿ ಸುದ್ದಿ ವಾಹಿನಿಗೆ ಹೇಳಿದರು.












Click it and Unblock the Notifications