ಬಳ್ಳಾರಿ: ಮೀಸಲು ಒದಗಿಸಲು ಸಿಎಂಗೆ ಬ್ರಾಹ್ಮಣರ ಮನವಿ
ಬಳ್ಳಾರಿ, ಜ. 27: ಬ್ರಾಹ್ಮಣ ವರ್ಗದ ಬಡ ಕುಟುಂಬಗಳಿಗೂ ಸರ್ಕಾರ ವಿಶೇಷ ಸೌಲಭ್ಯ ಒದಗಿಸಬೇಕು ಎಂದು ಬಳ್ಳಾರಿ ಬ್ರಾಹ್ಮಣ ಸಂಘರ್ಷ ಸಮಿತಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಬಳ್ಳಾರಿ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ಸಂಘದ ಕಾರ್ಯದರ್ಶಿ ಗುರುರಾಜ್, ನಿರ್ದೇಶಕರಾದ ಶ್ರೀನಿವಾಸ್, ಹರಿ ಮತ್ತು ಪ್ರಹ್ಲಾದ್ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.[ಜಾತಿ ಮೀಸಲಾತಿ ನಿಷೇಧ ಅಸಾಧ್ಯ, ಏಕೆಂದರೆ?]

ಸರ್ಕಾರ ಜಾರಿಗೆ ತರುತ್ತಿರುವ ಯೋಜನೆಗಳಿಂದ ಬಡ ಬ್ರಾಹ್ಮಣ ಕುಟುಂಬಗಳು ವಂಚಿತವಾಗುತ್ತಿವೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಸಮುದಾಯಕ್ಕೆ ಅನುಕೂಲವಾಗುವಂಥ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.[ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ]
ದೇಶದ ಅಭಿವೃದ್ಧಿಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿದೆ. ಕೇವಲ ಮೇಲ್ಜಾತಿ ಎಂಬ ಹಣೆಪಟ್ಟಿಯಿಂದ ಬ್ರಾಹ್ಮಣರು ಅನೇಕ ಸವಲತ್ತುಗಳಿಂದ ವಂಚಿತರಾಗುತ್ತಿದ್ದು ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಿಎಂ ಜತೆ ಸಚಿವ ಮಹದೇವಪ್ರಸಾದ್, ಜಿಂದಾಲ್ ಸಂಸ್ಥೆಯ ವಿನೋದ್ ನಾವೆಲ್ ಇದ್ದರು.












Click it and Unblock the Notifications