ಗುಡ್ಡಗಾಡು ಪ್ರದೇಶದಲ್ಲಿ ಕೃಷಿ ಮಾಡಿ ಯಶಸ್ಸು ಕಂಡ ರೈತ ಮಹಿಳೆ

ಬಳ್ಳಾರಿ, ಮೇ 05: ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುವುದೇ ಕಷ್ಟ. ಆದರೆ ಅಂತಹ ಪ್ರದೇಶದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ದೊಡ್ಡ ಸಾಹಸವೇ ಸರಿ. ಆದರೆ ಕೃಷಿಯ ಮೇಲೆ ಅಪಾರವಾದ ಪ್ರೀತಿ ಇರುವ ಬಳ್ಳಾರಿಯ ರೈತ ಮಹಿಳೆ ಗಂಗೂಬಾಯಿ ಗುಡ್ಡಗಾಡು ಪ್ರದೇಶದಲ್ಲಿ ಕೃಷಿ ಮಾಡುವ ಮೂಲಕ ಯಶಸ್ಸಿಯಾಗಿದ್ದಾರೆ. ಬರಡಾಗಿದ್ದ ಜಮೀನಿನಲ್ಲಿ ತೋಟಗಾರಿಕೆ ಬೆಳೆಯನ್ನು ಬೆಳೆಸುವ ಮೂಲಕ ಭೂಮಿಯನ್ನು ಸಾವಯವ ಕೃಷಿ ಭೂಮಿಯಾಗಿ ಬದಲಾಯಿಸಿದ್ದಾರೆ.

ಇದು ಬಳ್ಳಾರಿ ತಾಲ್ಲೂಕಿನ ಹೊನ್ನಳ್ಳಿ ತಾಂಡ ಎಂಬ ಪುಟ್ಟ ಗ್ರಾಮದ ಪ್ರತಿಭಾನ್ವಿತ ರೈತ ಮಹಿಳೆ ಗಂಗೂಬಾಯಿ ಅವರ ಯಶಸ್ಸಿನ ಕಥೆ. ಗಂಗೂಬಾಯಿ ಪತಿ ತಿರುಪತಿ ನಾಯ್ಕ. ಬಳ್ಳಾರಿ ಸಮೀಪದ ಹೊನ್ನಳ್ಳಿ ತಾಂಡ ಗ್ರಾಮದಲ್ಲಿ ದಂಪತಿಗಳು ಸರಿಸುಮಾರು 4.5 ಎಕರೆಯ ಭೂಮಿ ಹೊಂದಿದ್ದಾರೆ. ಇವರಿಗೆ ತಮ್ಮ ಮನೆಯ ಸುತ್ತ ಮುತ್ತ ಏನಾದರೂ ಉತ್ಪಾದಕ ಕೆಲಸ ಮಾಡಬೇಕೆಂಬ ಛಲವಿತ್ತು.

Agriculture Success Story Ballari Woman Model For Other Farmers

ಈಗ ದಂಪತಿಗಳು ಬರಡಾಗಿರುವ ಜಮೀನಿನಲ್ಲಿ ತೋಟಗಾರಿಕೆ ಹಾಗೂ ವಿವಿಧ ಬೆಳೆಯನ್ನು ಬೆಳೆಯುವ ಮೂಲಕ ಕೃಷಿ ಮಾಡಿ ಭೂಮಿಯನ್ನು ಸಾವಯವ ಕೃಷಿ ಭೂಮಿಯಾಗಿ ಬದಲಾಯಿಸಿದ್ದಾರೆ. ದಂಪತಿಗಳು ಮೊದಲು ಬರಡು ಭೂಮಿಗೆ ಸುತ್ತಲೂ ತಂತಿ ಬೇಲಿ ಹಾಕಿ ಭದ್ರಪಡಿಸಿಕೊಂಡರು. ಬಳಿಕ ಕೃಷಿಯನ್ನು ಕೈಗೊಂಡರು.

ತಮ್ಮ ಜಮೀನಿನಲ್ಲಿ ವಿವಿಧ ಹಣ್ಣಿನ ಬೆಳೆಗಳಾದ 600 ನಿಂಬೆ, 700 ಪೇರಲ, 1600 ಡ್ರ್ಯಾಗನ್‌ ಪ್ರೂಟ್ ಹಾಗೂ 2 ಎಕರೆಯಲ್ಲಿ ಕರಿಬೇವು ಗಿಡ ಮತ್ತು ಆತ್ಮ ಯೋಜನೆಯ ಪ್ರಾತ್ಯಕ್ಷಿಕೆಯಡಿ 10 ಬಿದಿರು ಸಸಿಗಳನ್ನು ಪಡೆದು ಹೊಲದ ಸುತ್ತಲೂ ನೆಟ್ಟಿದ್ದಾರೆ. ಇದಲ್ಲದೆ, ಪಶು ಸಂಗೋಪನೆಯು ಕೈಗೊಂಡಿದ್ದು, 2 ಹಸು, 1 ಎತ್ತು ಹಾಗೂ 1 ಎಮ್ಮೆ ಇದೆ.

ಕೋಳಿ ಸಾಕಾಣಿಕೆಯಲ್ಲೂ ದಂಪತಿ ತೊಡಗಿದ್ದು 30 ಕೋಳಿಗಳನ್ನು ಹೊಂದಿದ್ದಾರೆ. 100 ಕುರಿ, 25 ಮೇಕೆ, ಆಡುಗಳನ್ನು ಸಹ ಸಾಕುತ್ತಿದ್ದಾರೆ. ಇವರು ತಮ್ಮ ಹೊಲದಲ್ಲಿ ನೀರಿನ ಕೊರತೆ ಬಾರದಂತೆ ಕೃಷಿ ಹೊಂಡ (21*21*3.5ಮೀ) ನಿರ್ಮಿಸಿದ್ದು, ಹೊಲದಲ್ಲಿ ತಮ್ಮ ಗಿಡಗಳು ಸಾವಯವವಾಗಿ ಬೆಳೆಯಲು ಎರೆಹುಳು ಘಟಕವನ್ನು ನಿರ್ಮಿಸಿ ಎರೆಹುಳು ಗೊಬ್ಬರವನ್ನು ತಯಾರಿಸುತ್ತಾರೆ.

ಗೋಕೃಪಾಮೃತ, ದಶಪಾಣಿಯನ್ನು ಸ್ವತಃ ತಯಾರಿಸಿ ತಮ್ಮ ಹೊಲದಲ್ಲಿರುವ ಗಿಡಗಳಿಗೆ ಹನಿ ನೀರಾವರಿ ಪದ್ದತಿ ಉಪಯೋಗಿಸಿಕೊಂಡು ಸಾವಯವವಾಗಿ ಬೆಳೆಯುತ್ತಿದ್ದಾರೆ. ಈಗ ಗಂಗೂಬಾಯಿ ಅವರು ಹಾಗೂ ತಮ್ಮ ಊರಿನ ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.

ಬಾಯಿ ಬೇನೆ ಲಸಿಕೆ ಕಾರ್ಯಕ್ರಮ: ಧಾರವಾಡ ಜಿಲ್ಲೆಯಾದ್ಯಂತ ಕೇಂದ್ರ ಪುರಸ್ಕೃತ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ 7ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕೆ ಕಾರ್ಯಕ್ರಮವನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯಿಂದ ಮೇ 26ರಿಂದ ಪ್ರಾರಂಭವಾಗಲಿದೆ.

ಈ ಅಭಿಯಾನದಲ್ಲಿ 1.38 ಲಕ್ಷ ದನ, 47 ಸಾವಿರ ಎಮ್ಮೆಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 4 ತಿಂಗಳ ಮೇಲ್ಪಟ್ಟ ದನ, ಎಮ್ಮೆಗಳಿಗೆ ಲಸಿಕೆ ಹಾಕಲಾಗುತ್ತದೆ. ಪ್ರಥಮ ಬಾರಿಗೆ ಲಸಿಕೆ ಪಡೆಯುವ 4 ತಿಂಗಳ ಕರುಗಳಿಗೆ 21 ದಿನಗಳ ನಂತರ ಬೂಸ್ಟರ್ ಡೋಸ್ ಲಸಿಕೆ ಹಾಕಲಾಗುತ್ತದೆ.

ಈ ಲಸಿಕಾಕರಣ ಅಭಿಯಾನದಲ್ಲಿ 227 ಲಸಿಕೆದಾರರು, 45 ಮೇಲ್ವಿಚಾರಕರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಜಾನುವಾರು ಮಾಲೀಕರ ಮನೆಗಳಿಗೆ ತೆರಳಿ ಜೂನ್ 9ರ ವರೆಗೆ ಲಸಿಕೆ ನೀಡಲಾಗುತ್ತದೆ. ಈ ಸುತ್ತಿನ ಲಸಿಕಾಕರಣಕ್ಕೆ 2.14 ಲಕ್ಷ ಡೋಸ್ ಲಸಿಕೆ ಸರಬರಾಜಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ದನ, ಎಮ್ಮೆಗಳಿಗೆ ಲಸಿಕೆ ಹಾಕಲಾಗುತ್ತದೆ.

ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಲಸಿಕೆದಾರರು ನಿಗದಿಪಡಿಸಿದ ಗ್ರಾಮಗಳಿಗೆ ಭೇಟಿ ನೀಡಿ, ದನ, ಎಮ್ಮೆಗಳಿಗೆ ಲಸಿಕೆ ನೀಡುತ್ತಾರೆ. ಪ್ರತಿದಿನ 100 ರಿಂದ 150 ಹಸುಗಳಿಗೆ ಲಸಿಕೆ ಹಾಕುವ ಗುರಿಯನ್ನು ನಿಗದಿಗೊಳಿಸಲಾಗಿದೆ. ಲಸಿಕೆಯನ್ನು 2 ರಿಂದ 80 ಸೆಂಟಿಗ್ರೇಡ್‍ನಲ್ಲಿ ಶೇಖರಿಸಲು ಅಗತ್ಯವಿರುವ ಶೀತಲ ಸರಪಳಿ ವ್ಯವಸ್ಥೆಮಾಡಲಾಗಿದೆ.

ಹಳ್ಳಿಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ಕೆ ಪಶುಸಖಿಯರು ಪ್ರಚಾರ ನೀಡುತ್ತಿದ್ದಾರೆ. ದೇಶದಲ್ಲಿ ಕಾಲು ಬಾಯಿ ಜ್ವರ ನಿರ್ಮೂಲನೆಗೊಂಡಲ್ಲಿ, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ರಪ್ತು ಮಾಡಲು ಅವಕಾಶವಿರುವುದರಿಂದ ರೈತರಿಗೆ ಹೈನುಗಾರಿಕೆಯಿಂದ ಹೆಚ್ಚಿನ ಆದಾಯ ನಿರೀಕ್ಷಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+