Get Updates
Get notified of breaking news, exclusive insights, and must-see stories!

ಮಾಜಿ ಪ್ರೇಯಸಿ ತಲೆ ಕಡಿದು, ಠಾಣೆಗೆ ತಂದ ಪಾಗಲ್ ಪ್ರೇಮಿ!

ವಿಜಯನಗರ, ಜುಲೈ 22: ಪಾಗಲ್ ಪ್ರೇಮಿಯೊಬ್ಬ ತನ್ನ ಮಾಜಿ ಪ್ರೇಯಸಿಯ ತಲೆಯನ್ನು ಕತ್ತರಿಸಿಕೊಂಡು ಪೊಲೀಸರ ಮುಂದೆ ಶರಣಾಗಿರುವ ಘಟನೆ ವಿಜಯ ನಗರ ಜಿಲ್ಲೆಯ ಕೂಡ್ಲಿಗೆ ತಾಲೂಕಿನ ಕನ್ನಿಬೋರನ್ನಯ್ಯನ ಹಟ್ಟಿಯಲ್ಲಿ ನಡೆದಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

23 ವರ್ಷದ ನಿರ್ಮಲಾ ಎಂಬ ಯುವತಿ ಮಲಗಿದ್ದ ವೇಳೆ ಆಕೆಯ ಮಾಜಿ ಪ್ರಿಯತಮ ಭೋಜರಾಜ್‌ ತಲೆಯನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ. ನಿರ್ಮಲಾ ಹಾಗೂ ಭೋಜರಾಜ್‌ ಇಬ್ಬರು ಒಂದೇ ಗ್ರಾಮದವರಾಗಿದ್ದಾರೆ, ಜೊತೆಗೆ ಸಂಬಂಧಿಕರಾಗಿದ್ದು, ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು, ಆದರೆ ಮದುವೆಗೆ ಒಪ್ಪದಿದ್ದಕ್ಕೆ ಭೋಜರಾಜ್ ಹತ್ಯೆ ಮಾಡಿದ್ದಾನೆ.

ಇನ್ನು ಈ ವಿವಾಹಕ್ಕೆ ಇಬ್ಬರ ಮನೆಯವರೂ ಒಪ್ಪಿಗೆ ಸೂಚಿಸಿದ್ದರು, ಅದರೆ ನಂತರ ನಿರ್ಮಲಾ ಮದುವೆಗೆ ನಿರಾಕರಿಸಿದ್ದಕ್ಕೆ ಕುಟುಂಬಸ್ಥರು ಮದುವೆ ರದ್ದುಗೊಳಿಸಿದ್ದಾರೆ. ಕೆಲವು ದಿನಗಳ ನಂತರ ಭೋಜರಾಜ ಎರಡು ತಿಂಗಳ ಹಿಂದೆಯಷ್ಟೇ ಮತ್ತೊಂದು ಯುವತಿಯ ಜೊತೆಗೆ ವಿವಾಹವಾಗಿದ್ದ. ಆದರೆ ನಿರ್ಮಲಾ ಮೇಲಿನ ಪ್ರೀತಿ ಆತನಲ್ಲಿ ಇನ್ನೂ ಇದ್ದಿದ್ದರಿಂದ ಆಗಿಂದಾಗೆ ಫೋನ್ ಮಾಡಿ ಕಾಡಿಸುತ್ತಿದ್ದನಂತೆ. ಆದರೆ ಗುರುವಾರ ಯಾರು ಇಲ್ಲದ ವೇಳೆ ನಿರ್ಮಲಾ ಮನೆಗೆ ನುಗ್ಗಿ ತಲೆಯನ್ನು ಕಡಿದು ವಿಕೃತ ಮೆರೆದಿದ್ದಾನೆ.

A Married Man Beheads his ex-lover in Vijayanagar

3 ದಿನಗಳ ಹಿಂದೆ ಮನೆಗೆ ಬಂದಿದ್ದ ನಿರ್ಮಲಾ; ನಿರ್ಮಲಾ ಕೊಪ್ಪಳದ ಕಾಲೇಜೊಂದರಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಳೆದ ಮೂರು ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದಳು. ಇತ್ತ ಎರಡು ತಿಂಗಳ ಹಿಂದೆ ವಿವಾಹವಾಗಿ ತನ್ನ ಕುಟುಂಬದೊಂದಿಗೆ ಇದ್ದ ಭೋಜರಾಜ್ ಸಿಕ್ಕಾಗಲೆಲ್ಲಾ ನಿರ್ಮಲಾ ಜೊತೆಗೆ ಮಾತನಾಡುತ್ತಿದ್ದ, ಆದರೆ ಗುರುವಾರ ಆಕೆಯೊಂದಿಗೆ ಮಾತನಾಡುತ್ತಿದ್ದ ವೇಳೆ ಯಾವುದೋ ವಿಷಯಕ್ಕೆ ಮಾತಿಗೆ ಮಾತು ಬೆಳೆದು ತನ್ನ ಕೈಯಲ್ಲಿದ್ದ ಮಚ್ಚಿನಿಂದ ಹೊಡೆದು ಕೊಂದಿದ್ದಲ್ಲದೆ, ರುಂಡವನ್ನು ಬೈಕ್‌ನಲ್ಲಿ ತೆಗೆದುಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.

ಪೊಲೀಸ್‌ ಠಾಣಗೆ ಭೋಜರಾಜ ರುಂಡ ದೊಂದಿಗೆ ಬಂದಿದ್ದನ್ನು ನೋಡಿ ಒಂದು ಕ್ಷಣ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇನ್ನೂ ಇಂತಹದ್ದೊಂದು ಘಟನೆ ತಮ್ಮ ಊರಲ್ಲಿ ನಡೆದಿದೆ ಎನ್ನುವುದು ಪೊಲೀಸ್‌ ಗ್ರಾಮಕ್ಕೆ ಆಗಮಿಸಿದಾಗ ಬಹಿರಂಗವಾಗಿದೆ.

A Married Man Beheads his ex-lover in Vijayanagar

ಈ ಘಟನೆ ಬಗ್ಗೆ ವಿಜಯನಗರದ ಎಸ್‌ಪಿ ಪ್ರತಿಕ್ರಿಯಿಸಿದ್ದು, "ಪ್ರಾಥಮಿಕ ತನಿಖೆಯಲ್ಲಿ ಕೊಲೆಯಾದ ನಿರ್ಮಲಾ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಅನುಮಾನದಿಂದ ಆರೋಪಿ ಕೊಲೆಗೆ ಯುವತಿಯನ್ನು ಕೊಲೆ ಮಾಡಿರಬಹುದು ಎಂದು ತಿಳಿಸಿದ್ದು, ಸಂಪೂರ್ಣ ತನಿಖೆ ಮುಗಿದ ಬಳಿಕ ಇದರ ಸತ್ಯ ಗೊತ್ತಾಗಲಿದೆ" ಎಂದು ಹೇಳಿದ್ದಾರೆ.

ಮನೆಯ ಮಗಳು ಕೊಲೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಮಗಳನ್ನು ಕೊಂದ ಭೋಜರಾಜ್‌ನನ್ನು ತಮಗೆ ಒಪ್ಪಿಸಿ ಎಂದು ಯುವತಿಯ ಸಹೋದರ ಶ್ರೀಕಾಂತ್ ಪೊಲೀಸರ ಮುಂದೆ ತನ್ನ ಮೇಲೆ ಡೀಸೆಲ್ ಸುರಿದುಕೊಂಡು ಕೋಲಾಹಲ ಸೃಷ್ಟಿಸಿದ್ದಾರೆ. ತಕ್ಷಣ ಆತನನ್ನು ಸಮಾಧಾನ ಪಡಿಸಿ ನೀರು ಸುರಿದು ಆಸ್ಪತ್ರೆಗೆ ಕಳುಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+