ಕೊರೊನಾ ಸೋಂಕು ಮಣಿಸಿದ 95ರ ಹರೆಯದ ಬಸಮ್ಮ
ಬಳ್ಳಾರಿ, ಜುಲೈ 30: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ 95 ವರ್ಷದ ಅಜ್ಜಿಯೊಬ್ಬರು ಇದೀಗ ಸೋಂಕು ಗೆದ್ದು ಗುಣಮುಖರಾಗಿದ್ದಾರೆ.
ತೋರಣಗಲ್ಲು ಮೂಲದ ಬಸಮ್ಮ (95) ಎಂಬ ವೃದ್ಧೆಯನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿತ್ತು. ಇದೀಗ ಅವರು ಗುಣಮುಖರಾಗಿದ್ದಾರೆ. ಇಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಬಸಮ್ಮ ಅವರು, "ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆ ನೀಡಿದರು. ಸಕಾಲದಲ್ಲಿ ಮಾತ್ರೆ, ಊಟೋಪಚಾರವನ್ನು ಮಾಡಿದರು ಹಾಗೂ ಕೊರೊನಾ ಸೋಂಕಿತರ ಆರೈಕೆ ಬಹಳ ಚೆನ್ನಾಗಿ ಮಾಡಿದರು. ಹೀಗಾಗಿ ಬೇಗ ಗುಣಮುಖಳಾದೆ" ಎಂದು ಹೇಳಿದರು.

"ನನಗೆ ಬಿಪಿ, ಶುಗರ್ ಕಾಯಿಲೆ ಅಲ್ಪ ಪ್ರಮಾಣದಲ್ಲಿತ್ತು. ನನ್ನನ್ನು ಇಲ್ಲಿನವರು ತುಂಬಾ ಚೆನ್ನಾಗಿ ನೋಡಿಕೊಂಡರು. ಇಲ್ಲಿನ ಸಿಬ್ಬಂದಿ ಹಾಗೂ ವೈದ್ಯರು ಚೆನ್ನಾಗಿ ಆರೈಕೆ ಮಾಡಿದರು. ಹೀಗಾಗಿ ಹುಷಾರಾದೆ" ಎಂದು ಅಜ್ಜಿ ಬಸಮ್ಮ ಸ್ಮರಿಸಿದರು.












Click it and Unblock the Notifications