ಫಾಸ್ಟ್ ಟ್ರ್ಯಾಕ್ ಪ್ರಧಾನಿ ಮೋದಿಯಿಂದ ದಾರಿ ತಪ್ಪಿದ ದೇಶದ ಆರ್ಥಿಕತೆ: ಪರಂ
ಜಮಖಂಡಿ, ಅಕ್ಟೋಬರ್ 24: ಫಾಸ್ಟ್ ಟ್ರ್ಯಾಕ್‌ನಂತೆ ಬಂದ ಪ್ರಧಾನಿ ನರೇಂದ್ರ ಮೋದಿಯಿಂದ ಅಭಿವೃದ್ಧಿ ಹಾಗಿರಲಿ, ಇಡೀ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ವ್ಯಂಗ್ಯವಾಡಿದ್ದಾರೆ.
ಜಮಖಂಡಿ ಕ್ಷೇತ್ರದ ಹುಲ್ಯಾಳ ಗ್ರಾಮದಲ್ಲಿ ಪಾದಯಾತ್ರೆ ಮಾಡಿ, ಮೂರನೇ ದಿನ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶದ ಆರ್ಥಿಕ ದಿಕ್ಕನ್ನೇ ಬದಲಿಸುವ ಮಾತನ್ನಾಡಿ ಜನಗಳ ದಿಕ್ಕು ತಪ್ಪಿಸಿ ಅಧಿಕಾರ ಪಡೆದರು. ಫಾಸ್ಟ್ ಟ್ರ್ಯಾಕ್ ನಂತೆ ಎಲ್ಲ ಕೆಲಸ ಮಾಡಲು ಬಂದವರು ಇಡೀ ಆಡಳಿತ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ ಎಂದು ಆರೋಪಿಸಿದರು.

ಜಮಖಂಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಲು ಸಿದ್ದು ನ್ಯಾಮಗೌಡರು ಮುಂದಾಗಿದ್ದರು. ಈಗ ಈ ಎಲ್ಲ ಕೆಲಸಗಳನ್ನು ಅವರ ಮಗ ಆನಂದ ನ್ಯಾಮಗೌಡ ಮಾಡಲು ಹೊರಟಿದ್ದಾರೆ. ಇವರಿಗೆ ನಮ್ಮ ಸರಕಾರದಿಂದ ಸಂಪೂರ್ಣ ಬೆಂಬಲವಿದೆ ಎಂದರು.












Click it and Unblock the Notifications