• search
For bagalkot Updates
Allow Notification  

  ಬಾದಾಮಿಯ ಲಾಡ್ಜ್‌ನಲ್ಲಿ ಅಂಚೆ ಮತಪತ್ರ ಸಿಕ್ಕಿಲ್ಲ: ಡಿಸಿ ಸ್ಪಷ್ಟನೆ

  By Nayana
  |

  ಬಾದಾಮಿ, ಮೇ 15: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ (ಮತಗಟ್ಟೆ ಸಂಖ್ಯೆ 23) ಅಂಚೆ ಮತಪತ್ರಗಳು ಪತ್ತೆಯಾಗಿವೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಬಾಗಲಕೋಟೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

  ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಸರ್ಕಾರಿ ನೌಕರರಿಗೆ ಮೆ. 14 ರಂದು ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಅಂಚೆ ಮತದಾನಕ್ಕೆ ನೀಡಲಾಗಿದ್ದ ಮತಪತ್ರಗಳು ಬಾದಾಮಿಯ ಆನಂದ್ ಡಿಲಕ್ಸ್ ಲಾಡ್ಜ್ ನಲ್ಲಿ ಪತ್ತೆಯಾಗಿವೆ ಎಂದು ಕೆಲವೊಂದು ವಾಹಿನಿಗಳು ಮೇ 14ರ ಸಂಜೆ ಪ್ರಸಾರ ಮಾಡಿದ್ದವು.

  ಬಾದಾಮಿ: ಅಂಚೆ ಮತಪತ್ರ ದುರುಪಯೋಗದ ಶಂಕೆ

  ಈ ಹಿನ್ನೆಲೆಯಲ್ಲಿ ಅಂಚೆ ಮತ ಪತ್ರಗಳು ಸಿಕ್ಕಿವೆ ಎನ್ನಲಾಗುತ್ತಿದ್ದ ಆನಂದ್ ಡಿಲಕ್ಸ್ ಲಾಡ್ಜ್ ನ ರೂಮ್ ನಂಬರ್ 411ಕ್ಕೆ ಬಾದಾಮಿ ತಾಲ್ಲೂಕು ತಹಶೀಲ್ದಾರ್ ಮತ್ತು ಎ.ಆರ್.ಒ ಹಾಗೂ ಪೋಲೀಸ್ ಇನ್ ಸ್ಪೆಕ್ಟರ್ ಅವರುಗಳಿಂದ ಕೂಡಿದ್ದ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಈ ವೇಳೆಯಲ್ಲಿ ಅಲ್ಲಿ ಯಾವುದೇ ರೀತಿಯ ಅಂಚೆ ಮತಪತ್ರಗಳಾಗಲಿ ಅಥವಾ ಇನ್ನಾವುದೇ ರೀತಿಯ ಸಾಕ್ಷಿಗಳು ಹೋಟೆಲ್‌ನ ಆವರಣದಲ್ಲಿ ಮತ್ತು ಶಂಕಿತ ಕೊಠಡಿಯಲ್ಲಿ ದೊರೆತಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

  ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಂಚೆ ಮತಪತ್ರಗಳು ಹೋಟೆಲ್ ನಲ್ಲಿ ಪತ್ತೆಯಾಗಿದ್ದು, ಇವುಗಳನ್ನು ಪ್ರಮುಖ ಪಕ್ಷವೊಂದಕ್ಕೆ ಮತ ಬದಲಾವಣೆ ಮಾಡಲಾಗುತ್ತದೆ ಎಂದು ವರದಿಯಾಗಿತ್ತು. ಆದರೆ, ವರದಿಯು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

  ಕಳೆದ ಕೆಲವು ದಿನಗಳಿಂದ ಇದೇ ಲಾಡ್ಜ್ ನಲ್ಲಿ ತಂಗಿರುವ ಕೆಲವು ಪತ್ರಕರ್ತರನ್ನು ಈ ಸಂಬಂಧವಾಗಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಅಂಚೆ ಮತ ಪತ್ರಗಳನ್ನು ಹೋಟೆಲ್ ನಲ್ಲಿ ನೋಡಿರುವುದಾಗಿ ತಿಳಿಸಿರುತ್ತಾರೆ. ಆದರೆ, ಈ ಸಂಬಂಧವಾಗಿ ಸೂಕ್ತ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಅವರುಗಳು ವಿಫಲರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

  ಆದರೂ, ಆನಂದ್ ಡಿಲಕ್ಸ್ ಲಾಡ್ಜ್ ನ ರೂಮ್ ನಲ್ಲಿ ದೊರೆತಿದೆ ಎನ್ನಲಾದ ಅಂಚೆ ಮತಪತ್ರವನ್ನು ಬಳಸುವ ಬಗೆಯನ್ನು ವಿವರಿಸುವ ಸೂಚನಾ ಪತ್ರವನ್ನು ಆಧರಿಸಿ ಬಾದಾಮಿಯ ಉಪವಿಭಾಗಾಧಿಕಾರಿ ಮತ್ತು ಎ.ಆರ್.ಒ ಅವರು ಬಾದಾಮಿಯ ಪೋಲೀಸ್ ಠಾಣೆಯಲ್ಲಿ ಆರ್.ಪಿ ಕಾಯಿದೆಯ ಸೆಕ್ಷನ್ 136 (ಡಿ) ಅಡಿಯಲ್ಲಿ ಸಿಆರ್ ನಂ 144/2018 ರಂತೆ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

  ಯಾವುದೇ ಸಾಕ್ಷಿಗಳಿಲ್ಲದೆ ಸುದ್ದಿಯನ್ನು ಕೆಲವೊಂದು ವಾಹಿನಿಗಳು ಪ್ರಸಾರ ಮಾಡಿರುವುದು ವಿಷಾದನೀಯ. ಇಂತಹ ವರದಿಗಳನ್ನು ಪ್ರಸಾರ ಮಾಡುವ ಮುನ್ನ ಸತ್ಯಾಂಶವನ್ನು ಖಚಿತ ಪಡಿಸಿಕೊಂಡು ಪ್ರಸಾರ ಮಾಡುವುದು ಸೂಕ್ತವೆಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಬಾಗಲಕೋಟೆ ಸುದ್ದಿಗಳುView All

  English summary
  District election officer has clarified that there were no postal ballot were found in Anand lodge at Badami constituency of Bagalkot district as section of media were reported.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more