ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ: ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಎಚ್ಚರಿಕೆ
ಬಾಗಲಕೋಟೆ ಮೇ 25 : ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಮಕ್ಕಳ ಕಳ್ಳತನ ಪ್ರಕರಣಗಳು ನಡೆದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಕ್ಕಳ ಕಳ್ಳತನ ಮಾಡುವವರು ಬಂದಿದ್ದಾರೆ ಎಂದು ಅಮಾಯಕರನ್ನು ಹೊಡೆದು ಬಡೆದು, ಪ್ರಾಣಕ್ಕೆ ಕುತ್ತು ತರುವಂತೆ ಮಾಡಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಮಕ್ಕಳ ಕಳ್ಳತನ ಮಾಡುವವರು ಕಂಡು ಬಂದರೆ ಅಥವಾ ಅಂಥವರ ಮೇಲೆ ಅನುಮಾನ ಇದ್ದರೆ ಸ್ಥಳೀಯ ಹಾಗೂ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಪೊಲೀಸರಿಗೆ ಮಾಹಿತಿ ನೀಡದೇ, ತಾವೇ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ವಾಟ್ಸಪ್ ಹಾಗೂ ಫೇಸ್ ಬುಕ್ ಗಳಲ್ಲಿ ತಪ್ಪು ಸಂದೇಶ ನೀಡಬಾರದು. ಇದರಲ್ಲಿ ಬರುವ ಸಂದೇಶಗಳು ಸಹ ಕೆಲವೊಮ್ಮೆ ಜನರನ್ನು ದಾರಿ ತಪ್ಪಿಸುತ್ತವೆ. ಅಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದರು.












Click it and Unblock the Notifications