ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆ: ನವಿಲುತೀರ್ಥ ಜಲಾಶಯ ಭರ್ತಿ, ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಸೆಪ್ಟೆಂಬರ್ 5: ಬೆಳಗಾವಿ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನಲೆ ನವಿಲುತೀರ್ಥ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ಜಲಾಶಯ ಸಂಪೂರ್ಣ ಭರ್ತಿಯಾಗಿ ನೀರನ್ನು ಮಲಪ್ರಭಾ ನದಿ ಮೂಲಕ ಹರಿ ಬಿಟ್ಟಿದ್ದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ಜಿಲ್ಲೆಯ ಗಡಿ ಭಾಗದ ಹುಬ್ಬಳ್ಳಿ ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ 218ರ ಸಂಪರ್ಕ ಕಲ್ಪಿಸುವ ಮಲಪ್ರಭಾ ಹಳೆ ಸೇತುವೆ ಜಲಾವೃತಗೊಂಡಿದೆ.

ನವಿಲುತೀರ್ಥ ಜಲಾಶಯದಿಂದ 7544 ಕ್ಯೊಸೆಕ್ ನೀರು ಹರಿಬಿಡಲಾಗಿದ್ದು, ನದಿ ಪಾತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಲವು ಸೇತುವೆಗಳು ಜಲಾವೃತಗೊಂಡಿವೆ. ಬಾಗಲಕೋಟೆ-ಗದಗ ಸಂಪರ್ಕ ರಸ್ತೆ ಕಡಿತಗೊಂಡಿದ್ದರಿಂದ ಹಲವು ಗ್ರಾಮದ ಜನರಿಗೆ ಸುತ್ತುವರೆದು ನದಿ ದಾಟುವ ಪರಿಸ್ಥಿತಿ ಎದುರಾಗಿದೆ.

ಚಿಕ್ಕಮಗಳೂರಿನಲ್ಲಿ ದಾಖಲೆಯ ಮಳೆ, ವರುಣಾರ್ಭಟಕ್ಕೆ ಬಯಲುಸೀಮೆ ಜನರು ತತ್ತರಚಿಕ್ಕಮಗಳೂರಿನಲ್ಲಿ ದಾಖಲೆಯ ಮಳೆ, ವರುಣಾರ್ಭಟಕ್ಕೆ ಬಯಲುಸೀಮೆ ಜನರು ತತ್ತರ

ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿದ್ದು ಸದ್ಯ ಗೋವಿನಜೋಳ, ಈರುಳ್ಳಿ, ಕಬ್ಬು, ಸೂರ್ಯಕಾಂತಿ, ಹೆಸರು ಸೇರಿದಂತೆ ತೋಟಗಾರಿಕೆ ಬೆಳೆಗಳಾದ ಪೇರಲ, ದಾಳಿಂಬೆ, ಪಪ್ಪಾಯಿ ಮುಂತಾದ ಬೆಳೆಗಳು ಹಾಳಾಗಿದ್ದು, ರೈತರು ಆತಂಕ ಮನೆಮಾಡಿದೆ. ಸದ್ಯ ಮಲಪ್ರಭಾ ಪ್ರವಾಹದ ನೀರು ಹೆಚ್ಚುತ್ತಿದ್ದು ನದಿ ಪಾತ್ರದಲ್ಲಿನ ರೈತರು ಪಂಪ್‌ಸೆಟ್ ಜಾನುವಾರು ಸೇರಿದಂತೆ ತಮ್ಮ ಸಲಕರಣೆಗಳನ್ನು ಬೇರೆ ಕಡೆ ಸಾಗಿಸುತ್ತಿದ್ದಾರೆ.

Naviluthirtha Dam Water Released To Malaprabha River; Some Villages Flooded

ಪ್ರತಿ ವರ್ಷ ಪ್ರವಾಹ ಸುಮಾರು ವರ್ಷಗಳಿಂದ ಪ್ರತಿ ವರ್ಷ ಬಿಟ್ಟು ಬಿಡದೆ ಪ್ರವಾಹದ ಪರಿಸ್ಥಿತಿ ಎದುರಿಸುತ್ತಿರುವ ರೈತರಿಗೆ ವಾರದಲ್ಲಿ ಎರಡನೆ ಬಾರಿ ಪ್ರವಾಹ ಬಂದು ಉತ್ತಮ ಬೆಳೆಗಳು ಹಾಳಾಗಿವೆ.

ಕಳೆದ ಬಾರಿ ಬೆಳೆದಿದ್ದ ಉತ್ತಮ ಬೆಳೆಗಳು ರೈತರ ಕೈ ಸೇರುವ ಸಂದರ್ಭದಲ್ಲಿ ಪ್ರವಾಹಕ್ಕೆ ತುತ್ತಾಗಿದ್ದವು. ಸದ್ಯ ಮತ್ತೆ ಸಾಲ ಮಾಡಿ ಬಿತ್ತನೆ ಮಾಡಿದ ರೈತರ ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಾದಾಮಿ ತಹಸಿಲ್ದಾರ ಜೆ ಬಿ ಮಜ್ಜಗಿ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿದ್ದು ಮಲಪ್ರಭಾ ನದಿಯ ಪ್ರವಾಹವನ್ನು ವೀಕ್ಷಣೆ ಮಾಡಿದ್ದಾರೆ. ನೀರಿನ ಮಟ್ಟ ಪರಿಶೀಲಿಸಿದ ಅವರು ನಂತರ ಗ್ರಾಮಗಳಲ್ಲಿ ಸಂಚರಿಸಿ ಜನರಲ್ಲಿ ಜಾಗ್ರತಿ ಮೂಡಿಸಿದರು.

ನದಿ ಪಾತ್ರದಲ್ಲಿ ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು, ವಾಹನ ಹಾಗೂ ಜಾನುವಾರುಗಳ ಮೈ ತೊಳೆಯುವುದು ಮಾಡಬಾರದು, ಸೆಲ್ಫಿ ಸೇರಿದಂತೆ ಪ್ರವಾಹದಲ್ಲಿ ಹುಚ್ಚು ಸಾಹಸ ಮಾಡುವ ಗೋಜಿಗೆ ಹೋಗಬಾರದು ಎಂದು ಎಚ್ಚರಿಸಿದರು. ಪ್ರವಾಹ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Naviluthirtha Dam Water Released To Malaprabha River; Some Villages Flooded

ಅಂಬೇಡ್ಕರ್ ಫೋಟೋಗೆ ಮಸಿ ಬಳಿದ ಕಿಡಿಗೇಡಿಗಳು

ಗುಳೇದಗುಡ್ಡ ತಾಲ್ಲೂಕಿನ ಹಂಗರಗಿ ಗ್ರಾಮದ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಕಟ್ಟಡದ ಗೋಡೆಯ ಮೇಲೆ ಚಿತ್ರಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಸೆಗಣಿ ಬಳಿದಿದ್ದು, ಗ್ರಾಮದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದರು. ಕೆರೂರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಬಾದಾಮಿ ಸಿಪಿಐ ಕರೆಪ್ಪ ಬನ್ನೆ ಅವರು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದರು.

English summary
Water released to Malaprabha river from Naviluteertha Dam, Many Villages Flooded due to the inundation of heavy rain waters,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X