ಬಾಗಲಕೋಟೆಯ ಮಾತನಾಡುವ ಕಂಪ್ಯೂಟರ್ ಬಗ್ಗೆ ತಿಳಿಯಿರಿ!

Posted By: Gururaj
Subscribe to Oneindia Kannada

ಬಾಗಲಕೋಟೆ, ಅಕ್ಟೋಬರ್ 23 : ಇಲ್ಲೊಂದು ಮಾತನಾಡುವ ಕಂಪ್ಯೂಟರ್ ಇದೆ. ನೀವು ಏನೇ ಪ್ರಶ್ನೆ ಕೇಳಿದರೂ ಥಟ್ ಅಂತ ಉತ್ತರ ಕೊಟ್ಟು ಬಿಡುತ್ತದೆ. ಗಣಿತದಲ್ಲಂತೂ ಎತ್ತಿದ ಕೈ. ಏನೇ ಲೆಕ್ಕ ಕೊಟ್ಟರೂ ಕ್ಷಣಾರ್ಧದಲ್ಲಿ ಉತ್ತರ ನಿಮ್ಮ ಕಣ್ಮುಂದೆ ಇರುತ್ತದೆ. ಈ ಕಂಪ್ಯೂಟರ್ ಈಗ ರಾಷ್ಟ್ರ ಪ್ರಶಸ್ತಿಗೂ ಶಿಫಾರಸಾಗಿದೆ.

ಪಟಪಟನೆ ಗಣಿತದ ಲೆಕ್ಕಾಚಾಗಳನ್ನು ಬಿಡಿಸಿ ಉತ್ತರ ನೀಡುವ ಬಾಲಕನ ಹೆಸರು ರಾಹುಲ್. ಈ ಬಾಲಕನ ಪ್ರತಿಭೆಗೆ ಪ್ರಶಸ್ತಿಗಳ ಸರಮಾಲೆ ಬಂದಿದೆ. ರಾಹುಲ್ ತಂದೆ-ತಾಯಿ ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇದು ಕೋಟೆನಾಡು ಬಾಗಲಕೋಟೆಯ ಬಾಲಕನೊಬ್ಬನ ಅದ್ಭುತ ನೆನಪಿನ ಶಕ್ತಿಯ ಸ್ಟೋರಿ.

Meet this child prodigy from Bagalkot

ಬಾಗಲಕೋಟೆ ಬಸವೇಶ್ವರ ನ್ಯೂ ಮಾಧ್ಯಮಿಕ ಶಾಲೆಯ 9ನೇ ತರಗತಿ ವಿದ್ಯಾರ್ಥಿ ರಾಹುಲ್ ಪಾರ್ವತಿಮಠ್. ಇತನ ನೆನಪಿನ ಶಕ್ತಿಗೆ ಬೆರಗಾಗದವರೇ ಇಲ್ಲ. 300 ವರ್ಷದ ಕ್ಯಾಲೆಂಡರ್‌ನಲ್ಲಿ ಯಾವ ದಿನ, ಯಾವ ದಿನಾಂಕದಂದು ಬರುತ್ತೆ ಅಂತ ಕೇಳಿದರೆ ಥಟ್ ಅಂತ ಸರಿಯಾದ ಉತ್ತರ ಕೊಡುತ್ತಾನೆ.

50 ಪದಗಳ ಸ್ಪೆಲ್ಲಿಂಗ್ ಗಳನ್ನು ಸೀದಾ ಮತ್ತು ಉಲ್ಟಾ ಹೇಳುವುದರಲ್ಲಿಯೂ ರಾಹುಲ್ ನಿಸ್ಸೀಮ. ರೂಬಿಕ್ ಕ್ಯೂಬ್ ಜೋಡಿಸುವುದರಲ್ಲಿಯೂ ಈತ ಎತ್ತಿದ ಕೈ. ಅಂದಹಾಗೆ ಮೂರನೇ ತರಗತಿಯಲ್ಲಿದ್ದಾಗ ನೆನಪಿನ ಶಕ್ತಿಯ ಒಂದು ಕೋರ್ಸ್‌ ಕಲಿತಿದ್ದ ರಾಹುಲ್, ಈಗ ಅಘಾದ ನೆನಪಿನ ಶಕ್ತಿಯನ್ನು ಹೊಂದಿದ್ದಾನೆ.

Meet this child prodigy from Bagalkot

ಯಾವುದೇ ವಿಷಯವನ್ನು ಎರಡು ನಿಮಿಷ ನೋಡಿದರೂ ಸಾಕು, ಕ್ಷಣಾರ್ಧದಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲದಂತೆ ಅದರ ಬಗ್ಗೆ ಉತ್ತರ ಹೇಳುತ್ತಾನೆ. ರಾಹುಲ್ ದಿನಕ್ಕೆ ಕೇವಲ ಒಂದೇ ಒಂದು ತಾಸು ಓದುತ್ತಾನೆ. ಉಳಿದ ಸಮಯದಲ್ಲಿ ಆಟ, ಹರಟೆ ಅಷ್ಟೆ. ಆದರೂ ಈತ ಕ್ಲಾಸಿನಲ್ಲಿ ಫಸ್ಟ್. ಪ್ರತಿವರ್ಷ ಗಣಿತದಲ್ಲಿ 100ಕ್ಕೆ 100 ಅಂಕ ಪಡೆಯುತ್ತಾನೆ. ಎಲ್ಲಾ ವಿಷಯಗಳಲ್ಲೂ ನೂರಕ್ಕೆ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಮಾದರಿ ವಿದ್ಯಾರ್ಥಿಯಾಗಿದ್ದಾನೆ.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶದಿಂದಲೇ ನೋಟಗಳನ್ನು ಗುರುತಿಸಿ ಅವುಗಳ ನಂಬರ್‌ಗಳನ್ನು ಹೇಳುವ ಕಲೆ ರಾಹುಲ್ ಅಲ್ಲಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಓಡಿಸುವುದು, ಚೆಸ್ ಆಡುವುದು, ರೀಡಿಂಗ್, ರೈಟಿಂಗ್ ಎಲ್ಲವೂ ಮಾಡುತ್ತಾನೆ. ರಾಹುಲ್ ಅಗಾದ ನೆನಪಿನ ಶಕ್ತಿಗೆ ಎಲ್ಲರೂ ಫಿದಾ ಆಗಿದ್ದು ರಾಹುಲ್‌ಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ.

Meet this child prodigy from Bagalkot

ಇನ್ನು ರಾಜ್ಯ ಸರ್ಕಾರದಿಂದ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ನಮ್ಮ ವಿದ್ಯಾರ್ಥಿ ರಾಹುಲ್‌ ಬಗ್ಗೆ ನಮಗೆ ಹೆಮ್ಮೆಯಿದೆ ಅಂತಾರೆ ಸಹಪಾಠಿಗಳು, ಶಿಕ್ಷಕರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Meet 9th class student Rahul Parvathy Mutt wonder child of Bagalkot, Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ