• search
 • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವೇಗೌಡ-ಸಿದ್ದರಾಮಯ್ಯ ಹಾವು-ಮುಂಗುಸಿ ಇದ್ದಂತೆ ಅಂದ ಈಶ್ವರಪ್ಪ

By ಬಾಗಲಕೋಟೆ ಪ್ರತಿನಿಧಿ
|
   ಎಚ್ ಡಿ ದೇವೇಗೌಡ ಹಾಗು ಸಿದ್ದರಾಮಯ್ಯ ಬಗ್ಗೆ ಲೇವಡಿ ಮಾಡಿದ ಕೆ ಎಸ್ ಈಶ್ವರಪ್ಪ

   ಬಾಗಲಕೋಟೆ, ಏಪ್ರಿಲ್ 11 : ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂಬ ಇಮ್ರಾನ್ ಹೇಳಿಕೆ ವಿಚಾರ ಒಳ್ಳೆಯ ಬೆಳವಣಿಗೆ. ಆಗ ಕಾಶ್ಮೀರ ಸಮಸ್ಯೆ ಒಂದೇ ಅಲ್ಲ, ಪಾಕಿಸ್ತಾನದ ಸಮಸ್ಯೆಯೂ ಬಗೆಹರಿಯುತ್ತೆ ಎಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಹೇಳಿದರು.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಕಾಲು ಕೆರೆದು ಜಗಳಕ್ಕೆ ಹೋದ್ರೆ ಸರಿಯಿರಲ್ಲ ಎಂಬುದು ಪಾಕ್ ಗೆ ಮನವರಿಕೆ ಆಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಕಾಂಗ್ರೆಸ್ ಹೇಳಿಕೊಳ್ಳುತ್ತಲೇ ಬಂದ್ರು. ಆದ್ರೆ ಮುಸ್ಲಿಮರಿಗೆ, ಕ್ರಿಶ್ಚಿಯನ್ ರಿಗೆ ಕಾಂಗ್ರೆಸ್ ನಲ್ಲಿ ಜಾತ್ಯತೀತತೆ ಇಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದರು.

   ನಿಖಿಲ್ ಸೋಲಿಸಲೆಂದೇ ಬಿಜೆಪಿ ಸುಮಲತಾಗೆ ಬೆಂಬಲ‌ ನೀಡಿದೆ:ಈಶ್ವರಪ್ಪ

   ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಕೈ-ಜೆಡಿಎಸ್ ಕಾರ್ಯಕರ್ತರ ಸಂಘರ್ಷ ಬಹಿರಂಗವಾಗಿದೆ ಎಂದ ಈಶ್ವರಪ್ಪ ಇದನ್ನು ಸರಿಪಡಿಸಲು ದೇವೇಗೌಡರು ಮತ್ತು ಸಿದ್ದರಾಮಯ್ಯ ಮುಂದಾಗಿದ್ದಾರೆ. ಆದ್ರೆ ಇವರಿಬ್ಬರು ಹಾವು-ಮುಂಗಸಿ ಇದ್ದಂತೆ. ಇದು ತೋರಿಕೆಗಷ್ಟೇ ಮಾಡ್ತಿದ್ದಾರೆ ಎಂದು ಆರೋಪಿಸಿದರು.

   ಕಳೆದ ಸಾರಿ ಪಡೆದ ಸ್ಥಾನಗಳನ್ನು ಕೈ-ಜೆಡಿಎಸ್ ಈ ಸಾರಿ ಪಡೆಯಲು ಸಾಧ್ಯವಿಲ್ಲ. ಈ ಲೋಕಸಭಾ ಚುನಾವಣೆ ಬಳಿಕ ಜೆಡಿಎಸ್ ಸಂಪೂರ್ಣ ನಿರ್ನಾಮ ಆಗಲಿದೆ. ಕಾಂಗ್ರೆಸ್ ಅಲ್ಲೊಂದು ಚೂರು, ಇಲ್ಲೊಂದು ಚೂರು ಇರಲಿದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು. ಮುಂದೆ ಓದಿ...

    ಅದು ಕಳೆದ ಚುನಾವಣೆಯಲ್ಲಿ ಸಾಬೀತಾಗಿದೆ

   ಅದು ಕಳೆದ ಚುನಾವಣೆಯಲ್ಲಿ ಸಾಬೀತಾಗಿದೆ

   ಸಿದ್ದರಾಮಯ್ಯ-ದೇವೇಗೌಡ್ರು ಪ್ರಚಾರಕ್ಕೆ ಹೋಗ್ಲೆಬೇಕು. ಜಾತಿ ರಾಜಕಾರಣದಿಂದ ಗೆಲ್ಲಬೇಕು ಅಂತಾ ಇಬ್ರೂ ಅನ್ಕೊಂಡಿದ್ದಾರೆ. ಅದು ಸಾಧ್ಯವಿಲ್ಲ, ಅದು ಕಳೆದ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಈಶ್ವರಪ್ಪ ಟೀಕಿಸಿದರು.

    ಡಿಕೆಶಿ-ಪಾಟೀಲ ಇಬ್ರೂ ಜಾತಿವಾದಿಗಳು

   ಡಿಕೆಶಿ-ಪಾಟೀಲ ಇಬ್ರೂ ಜಾತಿವಾದಿಗಳು

   ಡಿಕೆಶಿ-ಎಂ.ಬಿ. ಪಾಟೀಲ ವಾಕ್ಸಮರ ವಿಚಾರಕ್ಕೆ ಪ್ರತಿಕ್ರಯಿಸಿದ ಈಶ್ವರಪ್ಪ, ಡಿಕೆಶಿ-ಪಾಟೀಲ ಇಬ್ರೂ ಜಾತಿವಾದಿಗಳು. ಕುತಂತ್ರ ರಾಜಕಾರಣ ಮಾಡಬೇಕು ಅಂತ ಪ್ರಯತ್ನ ಪಟ್ರು.

   ಆದ್ರೆ ಇದನ್ನು ಗಮನಿಸಿ ರಾಜ್ಯದ ಜನ ಇವರನ್ನು ತಿರಸ್ಕರಿಸಿದರು ಎಂದು ಲೇವಡಿ ಮಾಡಿದರು.

   ಕುಮಾರಸ್ವಾಮಿ ಅಯೋಗ್ಯ ಅಲ್ಲ, ಯೋಗ್ಯತೆ ಇಲ್ಲದ ಮುಖ್ಯಮಂತ್ರಿ: ಈಶ್ವರಪ್ಪ

    ತಿಂದ ಅನ್ನ ಜೀರ್ಣ ಆಗಲ್ಲ

   ತಿಂದ ಅನ್ನ ಜೀರ್ಣ ಆಗಲ್ಲ

   ಮೋದಿ, ಮೋದಿ ಅಂತ್ಯಾಕೆ ಅಂತೀರಾ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಯಿಸಿದ ಈಶ್ವರಪ್ಪ, ಮೋದಿ ಬಗ್ಗೆ ಟೀಕೆ ಮಾಡದಿದ್ರೆ ಸಿದ್ದರಾಮಯ್ಯ, ಗುಂಡೂರಾವ್, ರಾಹುಲ್ ಗಾಂಧಿಗೆ ತಿಂದ ಅನ್ನ ಜೀರ್ಣ ಆಗಲ್ಲ.ನಾವು ನಮ್ಮ ಪಕ್ಷದ ಹಿರಿಯರಿಗೆ ಗೌರವ ಕೊಡ್ತಿದೀವಿ. ಆದ್ರೆ ಇದು ಕೇವಲ ಕಾಂಗ್ರೆಸ್ ಪಕ್ಷದ ಆರೋಪವಷ್ಟೆ ಈ ಚುನಾವಣೆ ಬಳಿಕ ಜೆಡಿಎಸ್-ಕಾಂಗ್ರೆಸ್ ಸಂಬಂಧ ಇರಲ್ಲ ಎಂದು ತಿಳಿಸಿದರು.

    ಅವ್ರ ಹೇಳಿಕೆಗೆ ನಾನೇಕೆ ಉತ್ತರ ಕೊಡ್ಲಿ?

   ಅವ್ರ ಹೇಳಿಕೆಗೆ ನಾನೇಕೆ ಉತ್ತರ ಕೊಡ್ಲಿ?

   ಮೋದಿಗೆ ಮುಸ್ಲಿಂ ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿ ಎಂಬ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿ ಅಯೊಗ್ಯ ಇಬ್ರಾಹಿಂ, ಇಬ್ರಾಹಿಂನಂಥಹ ತಲೆಹಿಡುಕ ಏನು ಬೇಕಾದ್ರು ಮಾತಾಡ್ತಾನೆ.

   ಅವ್ರ ಹೇಳಿಕೆಗೆ ನಾನೇಕೆ ಉತ್ತರ ಕೊಡ್ಲಿ. ಮೋದಿ ಎಲ್ಲಾ ಧರ್ಮದವ್ರು ಅಕ್ಕ ತಂಗಿಯರು ಅಂತಾ ತಿಳಿದುಕೊಂಡಿದಾರೆ ಎಂದರು. ಮೋದಿ ಸೇನಾ ಡ್ರೆಸ್ ಹಾಕೊಂಡು ಶೋ ಕೊಡ್ತಾರೆ ಎಂಬ ಹೆಚ್ ಕೆ ಪಾಟೀಲ ಹೇಳಿಕೆ ವಿಚಾರವಾಗಿ ಮಾತನಾಡಿ ಸೂರ್ಯನಿಗೆ ಉಗುಳಿದ್ರೆ ಏನಾಗುತ್ತೆ, ಹಿರಿಯರಾದ ಹೆಚ್ಕೆ ಪಾಟೀಲರು ಯೋಚಿಸಿ ಮಾತಾಡಬೇಕು ಎಂದು ಈಶ್ವರಪ್ಪ ಗುಡುಗಿದರು.

   English summary
   KS Esharappa spoke against JDS and Congress in Bagalkot. After the Lok Sabha polls, the JDS will be completely abolished.Little bit of Congress is there.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X