ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುದ್ಧಕ್ಕೆ ಮೊದಲೇ ಸೋಲೊಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ : ಬಿಜೆಪಿ

|
Google Oneindia Kannada News

Recommended Video

Karnataka Elections 2018 : ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಕ್ಕೆ ಬಿಜೆಪಿ ಗೇಲಿ

ಬಾಗಲಕೋಟೆ, ಏಪ್ರಿಲ್ 23 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018ರ ಚುನಾವಣೆಗೆ ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರು ನಾಮಪತ್ರ ಸಲ್ಲಿಸಿದ್ದು, ಬಾದಾಮಿಯಲ್ಲಿ ಮಂಗಳವಾರ ನಾಮಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ.

ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಟೀಕಿಸಿವೆ. ತವರು ಜಿಲ್ಲೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಆದ್ದರಿಂದ, ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಬಾದಾಮಿಯಲ್ಲಿ ಯಾರಾದರೂ ಸ್ಪರ್ಧಿಸಲಿ, ನನಗೆ ಭಯವಿಲ್ಲ: ಸಿದ್ದರಾಮಯ್ಯಬಾದಾಮಿಯಲ್ಲಿ ಯಾರಾದರೂ ಸ್ಪರ್ಧಿಸಲಿ, ನನಗೆ ಭಯವಿಲ್ಲ: ಸಿದ್ದರಾಮಯ್ಯ

ಭಾನುವಾರ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಲಾಗಿದೆ. ಮಂಗಳವಾರ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿ ನಾಮಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ.

ಸಿದ್ದರಾಮಯ್ಯ ಸೋಲಿಗಾಗಿ ಕಾದು ಕುಳಿತ ನಾಯಕರ ಪಟ್ಟಿ!ಸಿದ್ದರಾಮಯ್ಯ ಸೋಲಿಗಾಗಿ ಕಾದು ಕುಳಿತ ನಾಯಕರ ಪಟ್ಟಿ!

ಬಾದಾಮಿ ಕ್ಷೇತ್ರದಲ್ಲಿ 48,000 ಕುರುಬ ಸಮುದಾಯದ ಮತಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಕಣಕ್ಕಿಳಿಯವು ಮೂಲಕ ನಾನು ಒಂದು ಸಮುದಾಯದ ಪರ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಸಿದ್ದರಾಮಯ್ಯ ಅವರು ಸೋಲೊಪ್ಪಿಕೊಂಡರು

ಸಿದ್ದರಾಮಯ್ಯ ಅವರಿಗೆ ತವರು ಕ್ಷೇತ್ರದಲ್ಲಿಯೇ ಜಯಗಳಿಸುವ ವಿಶ್ವಾಸವಿಲ್ಲ. ಕುರುಬ ಸಮುದಾಯದ ಮತಗಳು ಹೆಚ್ಚಿರುವ ಕ್ಷೇತ್ರ ಆರಿಸಿಕೊಳ್ಳುವ ಮೂಲಕ ಅವರು ಒಂದು ಸಮುದಾಯದ ನಾಯಕ ಎಂದು ಸಾಬೀತು ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಮಂಗಳೂರು ಬೇರೆ ಕ್ಷೇತ್ರ ಏಕಿಲ್ಲ?

ಅಹಿಂದ ವರ್ಗದ ಸ್ವಘೋಷಿತ ನಾಯಕ ಸಿದ್ದರಾಮಯ್ಯ ಅವರು ಮಂಗಳೂರು, ಗುಲ್ಬರ್ಗ, ಅಫಜಲಪುರ ಮುಂತಾದ ಕ್ಷೇತ್ರಗಳನ್ನು ಏಕೆ ಆಯ್ಕೆ ಮಾಡಿಕೊಂಡಿಲ್ಲ? ಎಂದು ಬಿಜೆಪಿ ಪ್ರಶ್ನಿಸಿದೆ.

ಬಾದಾಮಿಯಲ್ಲಿನ ಜಾತಿ ಲೆಕ್ಕಾಚಾರ

ಬಾದಾಮಿಯಲ್ಲಿನ ಜಾತಿ ಲೆಕ್ಕಾಚಾರ

ಬಾದಾಮಿ ಕ್ಷೇತ್ರದಲ್ಲಿ ಮಂಗಳವಾರ ಸಿದ್ದರಾಮಯ್ಯ ಅವರು ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಕ್ಷೇತ್ರದ ಜಾತಿ ಲೆಕ್ಕಾಚಾರ ಹೇಗಿದೆ? ನೋಡಣ.

ವೀರಶೈವ ಲಿಂಗಾಯತ : 65,000
ಕುರುಬ : 48,000
ಪ.ಜಾತಿ : 22,000
ಪರಿಶಿಷ್ಟ ಪಂಗಡ : 25,000
ಮುಸ್ಲಿಂ : 11,000
ನೇಕಾರ : 13,000
ಇತರರು : 30,000

ಯಡಿಯೂರಪ್ಪ, ಶ್ರೀರಾಮುಲು

ಯಡಿಯೂರಪ್ಪ, ಶ್ರೀರಾಮುಲು

ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಸದ್ಯದ ಪ್ರಶ್ನೆ. ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ಶ್ರೀರಾಮುಲು ಅವರು ಸ್ಪರ್ಧಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.

English summary
Karnataka BJP Slammed Chief Minister Siddaramaiah for contesting for Karnataka assembly elections 2018 form Chamundeshwari and Badami. In a Tweet party said that Siddaramaiah has accepted defeat even before the elections by contesting from Badami, Bagalkot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X