• search
For bagalkot Updates
Allow Notification  

  105 ವರ್ಷದ ಅಜ್ಜನನ್ನು ವಂಚಿಸಿ ಲಕ್ಷಾಂತರ ದೋಚಿದ್ದ ಮೊಮ್ಮಗ ಸೆರೆ

  |

  ಮುಧೋಳ, ನವೆಂಬರ್ 10: ವಯಸ್ಸಾದ ಬಳಿಕ ವೃದ್ಧ ತಂದೆ-ತಾಯಿಗಳಿಗೆ ಮಕ್ಕಳು ಅಥವಾ ಮೊಮ್ಮಕ್ಕಳು ಆಶ್ರಯ ನೀಡಬೇಕು, ಆದರೆ ಕೈಲಾಗದ 105 ವರ್ಷದ ಅಜ್ಜನನ್ನೇ ವಂಚಿಸಿ ಮೊಮ್ಮಗ 28 ಲಕ್ಷ ದೋಚಿ ಪರಾರಿಯಾಗಿದ್ದ ಘಟನೆ ಮುಧೋಳದಲ್ಲಿ ಇತ್ತೀಚೆಗೆ ನಡೆದಿದೆ.

  ಮಹಾಲಿಂಗಪುರ ಪೊಲೀಸರು ಆ ಯುವಕನನ್ನು ಬಂಧಿಸಿದ್ದಾರೆ. ಗ್ರಾಮದ ಮಹಾಲಿಂಗ ಯಂಕಪ್ಪ ಮಳಲಿ, ಕಲ್ಲಪ್ಪ ಮೇಟಿ ಬಂಧಿತರು. ತಾಲೂಕಿನ ಸಂಗಾನಟ್ಟಿ ಗ್ರಾಮದ ಶಿವಪ್ಪ ಅಲ್ಲಪ್ಪ ಉಳ್ಳಾಗಡ್ಡಿ ಎಂಬುವವರು ಟ್ರೇಜರಿಯಲ್ಲಿ 28 ಲಕ್ಷ ರೂಪಾಯಿ ಹಣ ಇಟ್ಟಿದ್ದರು. ಕೆಲ ದಿನ ಬಳಿಕ ಟ್ರಜರಿ ತೆಗೆದು ನೋಡಿದಾಗ ಹಣ ನಾಪತ್ತೆಯಾಗಿತ್ತು.

  ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸಿದ ಪುತ್ರಿ: ಹುಬ್ಬಳ್ಳಿ ಬಸ್ಟಾಪಿನಲ್ಲಿ ದಂಪತಿಗಳ ಪರದಾಟ

  ಈ ಬಗ್ಗೆ ಶಿವಪ್ಪ ಅಕ್ಟೋಬರ್ 29ರಂದು ಮಹಾಲಿಂಗಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಶಿವಪ್ಪರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಪತ್ನಿ ತೀರಿಕೊಂಡ ಬಳಿಕ ಸಂಬಂಧದಲ್ಲಿ ಮೊಮ್ಮಗನಾದ ಮಹಾಲಿಂಗ ಮಳಲಿ ತನ್ನ ಯೋಗಕ್ಷೇಮ, ಊಟೋಪಚಾರದ ಬಗ್ಗೆ ನೋಡಿಕೊಳ್ಳುತ್ತಿದ್ದ, ರಾತ್ರಿ ಮನೆಯಲ್ಲಿಯೇ ಮಲಗುತ್ತಿದ್ದ ಎಂದು ತಿಳಿಸಿದ್ದಾರೆ.

  ಇದರಿಂದ ಅನುಮಾನಗೊಂಡ ಪೊಲೀಸರು ಮಹಾಲಿಂಗನ ವಿಚಾರಣೆಗೆ ಸಿದ್ಧವಾದಾಗ ಆತ ಕೆಲವು ದಿನಗಳಿಂದ ನಾಪತ್ತೆಯಾಗಿರುವುದು ಗೊತ್ತಾಗಿದೆ. ಪ್ರಕರಣದಲ್ಲಿ ಆತನ ಕೈವಾಡ ಇರುವುದನ್ನು ಖಚಿತಪಡಿಸಿಕೊಂಡ ಪೊಲಿಸ್ ಅಧಿಕಾರಿಗಳು ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದರು. ಮಹಾಲಿಂಗನ ಇರುವಿಕೆ ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

  ಧಾರವಾಡ: ವೃದ್ಧ ಅಪ್ಪನನ್ನು ರಸ್ತೆಯಲ್ಲಿ ಬಿಟ್ಟು ಹೋದ ನಿರ್ದಯಿ ಮಗ

  ರಾತ್ರಿ ಅಜ್ಜನ ಮನೆಯಲ್ಲಿ ಮಲಗುತ್ತಿದ್ದೆ, ಟ್ರೇಜರಿಯಲ್ಲಿ ಹಣ ಇಟ್ಟಿರುವುದು ಗೊತ್ತಾಗಿ ಹಣ ದೋಚಲು ಸಂಚು ರೂಪಿಸಿ ಗೆಳೆಯನಾದ ಕಲ್ಲಪ್ಪ ಮೇಟಿ ಜತೆ ಸೇರಿ ಅಕ್ಟೋಬರ್ 18ರ ರಾತ್ರಿ ಅಜ್ಜ ಮಲಗಿದ್ದಾಗ ಟ್ರೇಜರಿ ಬದಿಯ ಚೀಲದಲ್ಲಿಟ್ಟಿದ್ದ ಎರಡು ಚಾವಿಗಳಲ್ಲಿ ಒಂದನ್ನು ತೆಗೆದುಕೊಂಡು ಹಣ ದೋಚಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 26.50 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.

  ಇನ್ನಷ್ಟು ಬಾಗಲಕೋಟೆ ಸುದ್ದಿಗಳುView All

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Mudhol police have arrested a man along with his friend who cheated 105 years old grand father and looted Rs28 lakhs from the house recently.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more