ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕ್ಸಲ್ ಪರವಾಗಿ ನಿಂತಿರುವ ಸಾಹಿತಿ ಗಿರೀಶ್ ಕಾರ್ನಾಡ್ ರನ್ನು ಬಂಧಿಸಿ: ಗಂಗಾಧರ ಕುಲಕರ್ಣಿ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಸೆಪ್ಟೆಂಬರ್.09: ಅರ್ಬನ್ ನಕ್ಸಲ್ ಎಂದು ಬೋರ್ಡ್ ಹಾಕಿಕೊಂಡು ನಕ್ಸಲ್ ಪರವಾಗಿ ನಿಂತಿರುವ ಗಿರೀಶ್ ಕಾರ್ನಾಡ್ ಅವರನ್ನು ಬಂಧಿಸಬೇಕು ಎಂದು ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ನಕ್ಸಲ್ ರನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ಕಾರ್ಯಾಚರಣೆ‌ ಮಾಡುತ್ತಿದೆ. ಆದರೆ ಗಿರೀಶ್ ಕಾರ್ನಾಡರು ರಕ್ತದೋಕುಳಿ ನಡೆಸುವವರ ಪರ ವಾದ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಅವರನ್ನು ಬಂಧಿಸುತ್ತಿಲ್ಲ ಎಂದು ಕಿಡಿಕಾರಿದರು.

'ನಾನೂ ನಗರ ನಕ್ಸಲ್' ಎಂದ ಗಿರೀಶ ಕಾರ್ನಾಡ್ ವಿರುದ್ಧ ದೂರು'ನಾನೂ ನಗರ ನಕ್ಸಲ್' ಎಂದ ಗಿರೀಶ ಕಾರ್ನಾಡ್ ವಿರುದ್ಧ ದೂರು

ಅದೇ ಶ್ರೀರಾಮ ಸೇನೆಯವರು ಹಿಂದೂ ಸಂಘಟನೆಯವರು ಭಾಷಣ ಮಾಡಿದರೆ ಅವರನ್ನು ಸ್ವಯಂ‌ಪ್ರೇರಣೆಯಿಂದ ಬಂಧಿಸಿ, ಕೇಸ್ ದಾಖಲು ಮಾಡುವ ಸರ್ಕಾರ‌ ಹಾಡು ಹಗಲೇ ನಕ್ಸಲ್ ಪರ ಇರುವವರನ್ನು ಯಾಕೆ ಬಂಧಿಸುತ್ತಿಲ್ಲ. ಸರ್ಕಾರ ದ್ವಂದ್ವ ನೀತಿ ಅನುಸರಿಸುವುದನ್ನು ಬಿಡಬೇಕು.

Gangadhar Kulkarni requested to government please arrest girish karnad

ಚಿಕ್ಕಮಗಳೂರಲ್ಲಿ ದತ್ತಪೀಠಕ್ಕೆ ಮೌಲ್ವಿ ನೇಮಿಸಿದ್ದರ ವಿರುದ್ಧ ಅಕ್ಟೋಬರ್ ೨೫ ರಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಶ್ರೀರಾಮ ಸೇನೆಯಿಂದ
ಅಕ್ಟೋಬರ್ 28 ರಂದು ಮಂಗಳೂರಿನವರೆಗೆ ದತ್ತಪೀಠ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.

ದೇಶದಲ್ಲಿ ಭಯದ ವಾತಾವರಣವಿದೆ: ಗಿರೀಶ್ ಕಾರ್ನಾಡ್ ಕಳವಳದೇಶದಲ್ಲಿ ಭಯದ ವಾತಾವರಣವಿದೆ: ಗಿರೀಶ್ ಕಾರ್ನಾಡ್ ಕಳವಳ

ಅಯೋಧ್ಯದಲ್ಲಿ ಕೇಂದ್ರ ಸರ್ಕಾರ ನುಡಿದಂತೆ‌ ರಾಮ ಮಂದಿರ ನಿರ್ಮಾಣ ಮಾಡಲು ಮುಂದಾಗಬೇಕು. ರಾಜ್ಯದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಗಣೇಶ ಮಂಡಳಿಗಳಿಗೆ ವಿಧಿಸಿರುವ ಷರತ್ತುಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

English summary
Sri Ram Sena State Secretary Gangadhar Kulkarni requested to government please arrest girish karnad. They are in favor of Naxal. Government should avoid dual policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X