ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಡಿಯೋಕೆ ನೀರು ಕೊಡದ ಕಾಂಗ್ರೆಸ್ಸಿಗೆ ಧಿಕ್ಕಾರ: ಎಚ್ಡಿಕೆ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

Recommended Video

ಕುಡಿಯೋಕೆ ನೀರು ಕೊಡದ ಕಾಂಗ್ರೆಸ್ಸಿಗೆ ಧಿಕ್ಕಾರ: ಎಚ್ಡಿಕೆ | Oneindia Kannada

ಬಾಗಲಕೋಟೆ, ಏಪ್ರಿಲ್ 07: ರಾಜ್ಯದ ಜನರಿಗೆ ಸರಿಯಾಗಿ ಕುಡಿಯೋಕೆ ನೀರು ಕೊಡಲಿಕ್ಕಾಗದ ರಾಜ್ಯ ಸರ್ಕಾರ ಪತ್ರಿಕೆಗಳಲ್ಲಿ ಮಾತ್ರ ದಿನಕ್ಕೆ ಏಳು ಪುಟ ಜಾಹೀರಾತು ನೀಡುವ ಮೂಲಕ ಜನರ ತೆರಿಗೆ ದುಡ್ಡನ್ನು ನೀರಿನಂತೆ ಹಾಳು ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಮುಧೋಳದಲ್ಲಿಂದು ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ನಡೆಸೋನಿಗೆ ರೈತರ ನೋವು ಅರ್ಥ ಮಾಡಿಕೊಳ್ಳವಂತಹ ಗುಣ ಇರಬೇಕು. ಈ ಬಾರಿ ನನಗೆ ಅಧಿಕಾರ ಕೊಡಿ ಎಂದು ಜನತೆಯಲ್ಲಿ ಅವರು ಮನವಿ ಮಾಡಿದರು.

Elections 2018: HD Kumaraswamy slams Congress for Water problem across state.

ಆದ್ರೆ ಪುಟಗಟ್ಟಲೇ ಲಕ್ಷಾಂತರ ರೂ ಜಾಹೀರಾತಿಗೆ ವೆಚ್ಚ ಮಾಡುತ್ತಾರೆ. ಸಮರ್ಪಕವಾಗಿ ನೀರಾವರಿ ಯೋಜನೆಗಳನ್ನು ಮಾಡದೇ ಪತ್ರಿಕೆಗಳಲ್ಲಿ ಜಾಹೀರಾತು ಹಾಕಿ ಸಾಧನೆ ಬಿಂಬಿಸಿಕೊಳ್ಳುವ ಸರ್ಕಾರದ ವಿರುದ್ದ ಅವರು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಯಿಂದ ಅಧಿಕಾರ ದುರುಪಯೋಗ, ಆಯೋಗಕ್ಕೆ ದೂರು: ಎಚ್‌ಡಿಕೆಮುಖ್ಯಮಂತ್ರಿಯಿಂದ ಅಧಿಕಾರ ದುರುಪಯೋಗ, ಆಯೋಗಕ್ಕೆ ದೂರು: ಎಚ್‌ಡಿಕೆ

ಸಾಲ‌ ಸಂಪೂರ್ಣ ಮನ್ನಾ ಮಾಡಿದ್ರೂ, ಪುನಃ ನೀವು ಸಾಲ ಮಾಡ್ತಿರಾ, ನನ್ನ ರೈತರು ಪುನಃ ಸಾಲ ಮಾಡದ ರೀತಿಯಲ್ಲಿ ಕೃಷಿ ನೀತಿಯನ್ನ ಬದಲಾವಣೆ ಮಾಡುತ್ತೇನೆ ಎಂದು ರೈತರಿಗೆ ಬುದ್ಧಿವಾದ ಹೇಳುವುದರ ಜೊತೆಗೆ ವಾಗ್ದಾನವನ್ನೂ ನೀಡಿದರು.

Elections 2018: HD Kumaraswamy slams Congress for Water problem across state.

ಮಾರುಕಟ್ಟೆ ಒದಗಿಸೋದು, ಸರ್ಕಾರದಿಂದಲೇ ಬೀಜ ಪೂರೈಕೆ ಮಾಡುತ್ತೇನೆ, ವಿಜಯಪುರದಲ್ಲಿ ಅಕಾಲಿಕ ಮಳೆ ಆಗಿದೆ, ದ್ರಾಕ್ಷಿ ಬೆಳೆ ಹಾನಿ ಆಗಿದೆ, ಅದ್ರ ಬಗ್ಗೆ ಸರ್ಕಾರ ಯೋಚಿಸುತ್ತಿಲ್ಲ ಎಂದು ದೂರಿದರು.

70 ವರ್ಷ ತಾಳ್ಮೆಯಿಂದ ವೋಟ್ ಕೊಟ್ಟಿದ್ದೀರಾ, ನನಗೂ ಐದು ವರ್ಷ ಅಧಿಕಾರ ಕೊಡಿ ಈ ಹುಡುಗ ಏನು ಮಾಡ್ತಾನೆ, ಅಂತಾ ನೋಡಿ ಎಂದರು.

ಇನ್ನು ಚುನಾವಣೆ ನೀತಿ ಸಂಹಿತೆ ತಮಗೆ ತಕ್ಕಂತೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಒಂದೊಂದು ಕಡೆ‌ ಒಂದು ರೀತಿ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ರಾಹುಲ್ ಬಂದಾಗ ಇರದ ಅಡೆತಡೆ ನಾನು ಮುಧೋಳಕ್ಕೆ ಬರುವುದು ಗೊತ್ತಾಗುತ್ತಿದ್ದಂತೆ ಇಲ್ಲಿಯ ಅಧಿಕಾರಿಗಳು ಕಾರ್ಯಕ್ರಮಕ್ಕೆ ಜನರು ಸೇರಲು ಅವಕಾಶ ನೀಡುತ್ತಿಲ್ಲ. ಇದು ಬೇಸರದ ಸಂಗತಿ ಎಂದರು.

English summary
Election 2018: Bagalkot : JDS state president HD Kumaraswamy today blamed ruling Congress government for drinking water problem across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X