'ಉಮಾಶ್ರೀಗೆ ಟಿಕೆಟ್ ಬೇಡ': ಸ್ವಪಕ್ಷದವರಿಂದಲೇ ಮನವಿ
ಬಾಗಲಕೋಟೆ, ಏಪ್ರಿಲ್ 07: ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವರು ಹಾಗೂ ತೇರದಾಳ ಮತಕ್ಷೇತ್ರದ ಹಾಲಿ ಶಾಸಕಿ ಉಮಾಶ್ರೀ ಅವರಿಗೆ ಟಿಕೆಟ್ ನೀಡಬಾರದು ಎಂದು ಸ್ವಪಕ್ಷದವರೆ ನಾಯಕರಿಗೆ ಮನವಿ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ತೇರದಾಳ ನಗರಸಭೆ ಸದಸ್ಯ ಆನಂದ ಬಕ್ರಿ ಮತ್ತು ಬೂತ್ ಕಮಿಟಿ ಅಧ್ಯಕ್ಷ ರವಿ ಕಾಂಬಳೇಕರ, ಉಮಾಶ್ರೀ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಟಿಕೆಟ್ ನೀಡಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂದರು.
ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಸ್ವ-ಕ್ಷೇತ್ರದವರಿಗೇ ಟಿಕೆಟ್ ನೀಡಬೇಕು. ಹೊರಗಿನವರಿಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಕಾರ್ಯಕರ್ತರು ಕೆಲಸ ಮಾಡುವುದಿಲ್ಲ ಎಂದು ಹೆದರಿಸಿದರು.

ಉಮಾಶ್ರೀ ಅವರು ಐದು ವರ್ಷದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಲಿಲ್ಲ, ಸರಿಯಾಗಿ ಮಾತನಾಡಿಸಿಯೂ ಇಲ್ಲ. ಇಂತಹವರು ನಮ್ಮ ಕ್ಷೇತ್ರಕ್ಕೆ ಬೇಡ ಟಿಕೆಟ್ ಕೊಟ್ಟರೂ ಬಂಡಾಯ ಏಳವ ಸಾಧ್ಯವಿದೆ ಎಂದರು.
ಎ.ಆರ್.ಬೆಳಗಲಿ, ಯುನಿಸ್ ಚೌಲಗಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಇವರನ್ನು ಬಿಟ್ಟು ಉಮಾಶ್ರೀ ಅವರಿಗೆ ಟಿಕೆಟ್ ನೀಡಿದರೆ ಈಗಾಗಲೇ 75%ರಷ್ಟು ಕಾರ್ಯಕರ್ತರು ಬೇರೆ ಪಕ್ಷಕ್ಕೆ ಹೋಗಿದ್ದಾರರೆ. ಉಳಿದಿರುವ 25% ರಷ್ಟು ಕಾರ್ಯಕರ್ತರಾದರೂ ಕಾಂಗ್ರೆಸ್‌ನಲ್ಲಿ ಉಳಿಯಲು ನಾಯಕರು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದರು.












Click it and Unblock the Notifications