• search
  • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಯ್ತು ಊರಿನ ಮಧ್ಯವಿರುವ ಕೆರೆಯಲ್ಲಿನ ಮೊಸಳೆ!

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಅಕ್ಟೋಬರ್ 6: ಸಾಮಾನ್ಯವಾಗಿ ನದಿ ದಡದಲ್ಲಿ ಅಥವಾ ನದಿ ತೀರದ ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷವಾಗುವುದನ್ನು ನೋಡಿರುತ್ತೇವೆ. ಆದರೆ ಊರ ಮಧ್ಯದಲ್ಲಿರುವ ಕೆರೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷ ಆಗಿದ್ದು, ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.

ಬಾಗಲಕೋಟೆ ತಾಲ್ಲೂಕಿನ ಮುರನಾಳ ಪುನರ್ವಸತಿ ಕೇಂದ್ರದಲ್ಲಿರುವ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡು ಗ್ರಾಮಸ್ಥರಿಗೆ ಭಯದ ಜೊತೆಗೆ ಅಚ್ಚರಿ ಮೂಡಿಸಿದೆ. ಗ್ರಾಮದ ಯುವಕರು ಡ್ರೋನ್ ಮೂಲಕ ಕೆರೆಯನ್ನು ಚಿತ್ರೀಕರಿಸುವಾಗ ಮೊಸಳೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಾಸಕರ ಮೌಲ್ಯ ಮಾಪನ; ಬಾಗಲಕೋಟೆ ಜಿಲ್ಲೆಯ ಶಾಸಕರಿಗೆ ಅಂಕ ಕೊಡಿ ಶಾಸಕರ ಮೌಲ್ಯ ಮಾಪನ; ಬಾಗಲಕೋಟೆ ಜಿಲ್ಲೆಯ ಶಾಸಕರಿಗೆ ಅಂಕ ಕೊಡಿ

ತಕ್ಷಣ ಯುವಕರು ಮೊಸಳೆ ಹೋಗುವುದನ್ನು ಕೆಲವು ಸೆಕೆಂಡುಗಳವರೆಗೆ ಸೆರೆ ಹಿಡಿದಿದ್ದಾರೆ. ಈ ಕೆರೆ ಊರ ಮದ್ಯದಲ್ಲೇ ಇರುವುದರಿಂದ ಗ್ರಾಮಸ್ಥರಲ್ಲಿ ಮೊಸಳೆ ಭಯ ಕಾಡತೊಡಗಿದೆ. ನಿತ್ಯ ಗ್ರಾಮದ ದನಕರುಗಳು ಇದೆ ಕೆರೆಯಲ್ಲೇ ನೀರು ಕುಡಿಯುತ್ತಿದ್ದವು. ಆದರೆ ಮೊಸಳೆ ಇವರೆಗೂ ಯಾವುದೇ ಹಸು-ಕರು, ಮೇಕೆ ಕುರಿ ಸೇರಿದಂತೆ ಯಾವುದೇ ಪಶುಗಳನ್ನು ಕೊಂದಿರುವ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಹಾಗಾಗಿ ಮೊಸಳೆ ಇರುವ ವಿಚಾರ ಯಾರಿಗೂ ತಿಳಿದಿರಲಿಲ್ಲ.

ಇದೀಗ ಡ್ರೋನ್‌ನಲ್ಲಿ ಮೊಸಳೆ ಕಾಣಿಸಿಕೊಂಡಿದ್ದರಿಂದಾಗಿ ಗ್ರಾಮದ ಜನತೆಗೆ ಅಚ್ಚರಿ ಜೊತೆಗೆ ಆತಂಕವನ್ನುಂಟು ಮಾಡಿದೆ. ಅದೃಷ್ಟವಶಾತ್ ಕೆರೆಗೆ ಯಾರೂ ಕೂಡ ಇಳಿಯುತ್ತಿರಲಿಲ್ಲ. ಕೇವಲ ದನಕರುಗಳ ಬಳಕೆಗೆ ಮಾತ್ರ ಸಿಮೀತವಾಗಿತ್ತು. ಇನ್ನು ಅಚ್ಚರಿಯ ವಿಷಯವೆಂದರೆ ಊರಿನ ಮಧ್ಯೆ ಇರುವ ಕೆರೆಗೆ ಮೊಸಳೆ ಎಲ್ಲಿಂದ ಬಂತು ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ.

ಕೆರೆಗೆ ನದಿ ನೀರು ಬರಲ್ಲ. ಅಲ್ಲದೇ ನದಿ ಸಹ ಗ್ರಾಮದಿಂದ ಹತ್ತು, ಹದಿನೈದು ಕಿಲೊ ಮೀಟರ್ ದೂರದಲ್ಲಿ ಇದೆ‌. ಹೀಗಾಗಿ ಗ್ರಾಮಸ್ಥರೆಲ್ಲಾ ಈ ಮೊಸಳೆ ಕೆರೆಗೆ ಹೇಗೆ ಬಂತು ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸದ್ಯ ಗ್ರಾಮಸ್ಥರು ಈ ವಿಚಾರವನ್ನು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು, ಶೀಘ್ರದಲ್ಲಿ ಕಾರ್ಯಚರಣೆ ನಡೆಸಿ ,ಮೊಸಳೆಯನ್ನು ನದಿಗೆ ಬಿಡುವ ಕಾರ್ಯಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.

ಕನಕಗಿರಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕೆ.ಕಾಟಾಪುರ ಗ್ರಾಮದ ಕೆರೆಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಯುವಕರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದೆ.

Crocodile Found in Murunala Village Lake Near Bagalkot

ಸರಕಾರದ ಕೆರೆ ತುಂಬಿಸುವ ಯೋಜನೆಯಡಿ ನೀರು ತುಂಬಿಸಲಾಗಿತ್ತು. ಮೀನುಗಾರರು ಕೆರೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದಾರೆ. ದನಗಾಹಿ, ಕುರಿಗಾಹಿಗಳಿಗೂ ಸಹಾ ಬಳಕೆಯಾಗುತ್ತಿದೆ. ಯುವಕರು, ಮಕ್ಕಳು ಕೆರೆಯಲ್ಲಿ ಈಜಾಡುತ್ತಾರೆ. ಆದರೆ ದಿಢೀರ್ ಮೊಸಳೆ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಭಯವನ್ನುಂಟು ಮಾಡಿದೆ.

ಗ್ರಾಮ ಪಂಚಾಯಿತಿಯಿಂದ ಡಂಗುರ ಸಾರಲಾಗಿದೆ. ಕೆರೆಯಲ್ಲಿ ಮೊಸಳೆಯಿರುವ ಕಾರಣ ನೀರಿಗೆ ಇಳಿಯದಂತೆ, ಭಿತ್ತಿ ಪತ್ರಗಳನ್ನು ಹಚ್ಚಿ ಜಾಗೃತಿ ಮೂಡಿಸಲಾಗಿದೆ. ಅನಾಹುತಕ್ಕೂ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತು, ಮೊಸಳೆ ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

English summary
A Crocodile was found floating in the lake at Muranala village near Bagalkot. Crocodile was found during drone shooting,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X