Get Updates
Get notified of breaking news, exclusive insights, and must-see stories!

Chalukya Utsav: 10 ವರ್ಷಗಳ ನಂತರ ರಾಜ್ಯದಲ್ಲಿ 'ಚಾಲುಕ್ಯ ಉತ್ಸವ'ಕ್ಕೆ ಸರ್ಕಾರ ಸಜ್ಜು

ಬೆಂಗಳೂರು, ಮಾರ್ಚ್ 18: ಒಡಿಶಾ ರಾಜ್ಯದಲ್ಲಿ ಐದು ದಿನಗಳ ಕಾಲ ನಡೆಯುವ ಪ್ರಸಿದ್ಧವಾದ 'ಕೋನಾರ್ಕ್ ಉತ್ಸವ' ಮಾದರಿಯಲ್ಲೇ ಉತ್ತರ ಕರ್ನಾಟಕದಲ್ಲಿ 'ಚಾಲುಕ್ಯ ಉತ್ಸವ'ವನ್ನು ನಡೆಸಲಾಗುವುದು. ಈ ಕುರಿತು ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ‌ ಕೈಗೊಳ್ಳಲಾಯಿತು.

ಚಾಲುಕ್ಯ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರ ನೇತೃತ್ವದಲ್ಲಿ ಬಾಗಲಕೋಟೆಯ ಜನಪ್ರತಿನಿಧಿಗಳ ಸಭೆ ಮಂಗಳವಾರ ವಿಕಾಸಸೌಧದಲ್ಲಿ ನಡೆಯಿತು. ಬಜೆಟ್ ಮೇಲಿನ ಅಧಿವೇಶನದಲ್ಲಿ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರಸಿದ್ಧ ಉತ್ಸವ ಕುರಿತು ಪ್ರಮುಖ ಸಭೆ ನಡೆಯಿತು.

Chalukya Utsav to be Held in North Karnataka After 10 Years Like Konark Utsav says Shivaraj Tangadagi

ಸಭೆಯಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು, 2015ರ ನಂತರ ಚಾಲುಕ್ಯ ಉತ್ಸವ ಆಚರಣೆ ನಡೆದಿಲ್ಲ. ಇತರ ಉತ್ಸವಗಳಂತೆ ಚಾಲುಕ್ಯ ಉತ್ಸವವೂ ಆಚರಣೆ ಆಗುವ ಬದಲಿಗೆ ಇದನ್ನೊಂದು ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಉತ್ಸವವನ್ನಾಗಿ ರೂಪಿಸಬೇಕು. ಇಡೀ ರಾಷ್ಟ್ರದ ಗಮನ ಸೆಳೆಯುವಂತೆ ಉತ್ಸವ ಆಚರಣೆಯಾಗಬೇಕು ಎಂದು ಅವರು ಹೇಳಿದರು. ಸದ್ಯ ಯಾವಾಗ ಈ ಉತ್ಸವ ನಡೆಯುತ್ತದೆ. ದಿನಾಂಕ, ಆರಂಭದ ಕುರಿತು ಇನ್ನಷ್ಟೇ ತಿಳಿಯಬೇಕಿದೆ.

ಮೂರು ದಿನಗಳ ಚಾಲುಕ್ಯ ಉತ್ಸವದಲ್ಲಿ ಏನಿರಲಿದೆ?

ಉತ್ಸವದಲ್ಲಿ ಸಂಗೀತ, ನೃತ್ಯ ಹಾಗೂ ಜಾನಪದ ಕಲಾ ವೈಭವಗಳನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳು ಆಯೋಜನೆಯಾಗಲಿದೆ. ಒಟ್ಟು ಮೂರು ದಿನಗಳ ಕಾಲ ನಡೆಯುವ ಮಹತ್ವ ಉತ್ಸವ ಇದಾಗಿದೆ. ಈ ಉತ್ಸವಕ್ಕೆ ಬಾದಾಮಿಯಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಎರಡನೇ ದಿನ ಪಟ್ಟದಕಲ್ಲು ಹಾಗೂ ಸಮಾರೋಪ ಸಮಾರಂಭ ಐಹೊಳೆಯಲ್ಲಿ ನಡೆಯಲಿದೆ.‌ ವರ್ಷಾಂತ್ಯಕ್ಕೆ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಮುಂದಿನ‌ ಸಭೆಯಲ್ಲಿ ದಿನಾಂಕವನ್ನು ನಿಗದಿಪಡಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದು ಅವರು ವಿವರಿಸಿದರು.

ಶಾಸಕ‌ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಇಮ್ಮಡಿ ಪುಲಿಕೇಶಿ ಕರ್ನಾಟಕದ ಚರಿತ್ರೆಯಲ್ಲಿ ತನ್ನ ಶೌರ್ಯ, ಸಾಹಸ ಹಾಗೂ ಕಲಾವಂತಿಕೆ ಮುಂತಾದ ಸಂಗತಿಗಳಿಂದಾಗಿ ಅಜರಾಮರನಾಗಿದ್ದನು. ಇಮ್ಮಡಿ ಪುಲಿಕೇಶಿಯ ಚರಿತ್ರೆಯನ್ನು ಉತ್ಸವದಲ್ಲಿ ಸಾರುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

Chalukya Utsav to be Held in North Karnataka After 10 Years Like Konark Utsav says Shivaraj Tangadagi

ಕಳೆದ ಹತ್ತು ವರ್ಷಗಳಿಂದ ಚಾಲುಕ್ಯ ಉತ್ಸವವನ್ನು ಆಚರಣೆ ಮಾಡಿಲ್ಲ. ಬಾಗಲಕೋಟೆ ಜಿಲ್ಲೆ ರಾಜ್ಯದ ಐತಿಹಾಸಿಕ ಪ್ರವಾಸೋದ್ಯಮ ಹಿನ್ನೆಲೆಯುಳ್ಳ ಜಿಲ್ಲೆಯಾಗಿದ್ದು, ಈ ಬಾರಿ ಉತ್ಸವವನ್ನು ರಾಷ್ಟ್ರದ ಗಮನ ಸೆಳೆಯುವಂತೆ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜೊತೆಗೆ ಬಸವಣ್ಣನವರ ತತ್ವಗಳನ್ನುನ್ನು ಪಸರಿಸಲಾಗುತ್ತದೆ ಎಂದರು.

ಚಾಲುಕ್ಯ ಉತ್ಸವ ಬಗ್ಗೆ ನಿಮಗೆ ಗೊತ್ತೆ?

ಉತ್ತರ ಕರ್ನಾಟಕದ ಐತಿಹಾಸಿಕ ನಗರಗಳಾದ ಬಾದಾಮಿ ಮತ್ತು ಐಹೊಳೆಯಲ್ಲಿ ನಡೆಯುವ ವಾರ್ಷಿಕ ಸಾಂಸ್ಕೃತಿಕ ಮತ್ತು ಪರಂಪರೆಯ ಉತ್ಸವವೇ 'ಚಾಲುಕ್ಯ ಉತ್ಸವವು' ಆಗಿದೆ. ಇಲ್ಲಿ ನಾಡಿನ ಕಲೆ, ನೃತ್ಯ, ಸಂಗೀತ ಮತ್ತು ನಾಟಕಗಳ ಪ್ರದರ್ಶನ ನಡೆಯುತ್ತದೆ. ಇತರರಿಗೂ ನಾಡಿನ ವೈವಿಧ್ಯತೆ ಪರಿಚಯವಾಗುತ್ತದೆ. ಚಾಲುಕ್ಯ ಉತ್ಸವವನ್ನು ಸಾಮಾನ್ಯವಾಗಿ ಫೆಬ್ರವರಿ ಆರಂಭದಲ್ಲಿ ಎರಡು ಅಥವಾ ಮೂರು ದಿನಗಳ ಕಾರ್ಯಕ್ರಮವಾಗಿ ಆಚರಿಸಲಾಗುತ್ತದೆ. ಆದರೆ ಕಳೆದ 2015ರಲ್ಲಿ ನಡೆದಿದ್ದೇ ಕೊನೆ. ಅದಾದ ಬಳಿಕ ಹತ್ತು ವರ್ಷಗಳ ನಂತರ ಈಗ ಮತ್ತೆ ನಡೆಸಲು ಸರ್ಕಾರ ಸಜ್ಜಾಗಿದೆ.

ಏನಿದು ಪ್ರಸಿದ್ಧ ಕೋನಾರ್ಕ್ ಉತ್ಸವ?

ಕೋನಾರ್ಕ್ ಡ್ಯಾನ್ಸ್ ಫೆಸ್ಟಿವಲ್ 05 ದಿನಗಳ ನೃತ್ಯ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆ ರಾಜ್ಯದಲ್ಲಿ ಇದು ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಹೆಚ್ಚಾಗಿ 1 ರಿಂದ 5 ರವರೆಗೆ ಭಾರತದ ಒಡಿಶಾದ ಕೋನಾರ್ಕ್‌ನಲ್ಲಿರುವ ಸೂರ್ಯ ದೇವಾಲಯದ ಬಳಿ ನಡೆಯುತ್ತದೆ. ಇದು ಒಡಿಶಾ ರಾಜ್ಯದಲ್ಲೇ ನಡೆಯುವ ದೊಡ್ಡ ನೃತ್ಯ ಉತ್ಸವಗಳಲ್ಲಿ ಒಂದಾಗಿದೆ.

ಇಂದಿನ ಸಭೆಯಲ್ಲಿ ಅಬಕಾರಿ ಸಚಿವರೂ ಆದ ಬಾಗಲಕೋಟೆ ಜಿಲ್ಲಾ‌ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ‌ ಎಚ್.ವೈ.ಮೇಟಿ, ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಪಿ.ಎಚ್.ಪೂಜಾರ್,‌ ಮಾಜಿ ಸಚಿವ ಉಮಾಶ್ರೀ‌, ಇಲಾಖೆ ನಿರ್ದೇಶಕಿ ಗಾಯಿತ್ರಿ ಹಾಗೂ ಅಧಿಕಾರಿಗಳು ಸಭೆಯಲ್ಲಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+