ಯಾರು ಯಾರ ತಲೆ ಕಡಿತೀವಿ ಎಂದು ನೋಡ್ತೀವಿ: ಬಸನಗೌಡ ಪಾಟೀಲ್ ಯತ್ನಾಳ್

Recommended Video

      BJP MLA : ಯಾರು ಯಾರ ತಲೆ ಕಡಿತೀವಿ ಎಂದು ನೋಡ್ತೀವಿ: ಬಸನಗೌಡ ಪಾಟೀಲ್ ಯತ್ನಾಳ್ | Oneindia Kannada

      ಬಾಗಲಕೋಟೆ, ಡಿಸೆಂಬರ್ 5: ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಕಿಡಿಕಾರಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

      'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದರೆ ಪ್ರಧಾನಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯ ತಲೆ ಕಡಿಯುವುದಾಗಿ ಓವೈಸಿ ಪಕ್ಷದವರು ಹೇಳುತ್ತಾರೆ. ಓವೈಸಿಗಿಂತ ಪ್ರಬಲವಾಗಿ ನಾವು ಹಿಂದೂಗಳ ಸಂಘಟನೆಯನ್ನು ಮಾಡಿದ್ದೇವೆ. ಅವರು ತಲೆ ಕಡಿಯುವವರೆಗೂ ನಾವೇನೂ ಬಳೆತೊಟ್ಟುಕೊಂಡಿರುತ್ತೇವೆಯೇ?' ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

      'ನಮ್ಮಲ್ಲೂ ಶಕ್ತಿಯಿದೆ. ನಾವು ಮನಸು ಮಾಡಿದರೆ ಈ ದೇಶದಲ್ಲಿ ಮುಸ್ಲಿಮರೇ ಇರದಂತೆ ಮಾಡುತ್ತೇವೆ. ಹಿಂದೂಗಳನ್ನು ನಾಶ ಮಾಡುತ್ತೇವೆ ಎಂದು ಕೆಲವು ಮುಸ್ಲಿಂ ಏಜೆಂಟರು ಭಾಷಣ ಮಾಡುತ್ತಾರೆ. ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ' ಎಂದಿದ್ದಾರೆ.

      bjp mla basanagouda patil yatnal ram temple hindu muslim

      'ಪಾಕಿಸ್ತಾನದೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿರುವ ನವಜೋತ್ ಸಿಂಗ್ ಸಿಧು ಅವರನ್ನು ಪಾಕಿಸ್ತಾನದವರೇ ತೆಗೆದುಕೊಳ್ಳಲಿ.

      ಭಾರತದವರು ಒಂದು ಹೆಜ್ಜೆ ಮುಂದೆ ಬಂದರೆ, ನಾವು ಎರಡು ಹೆಜ್ಜೆ ಮುಂದೆ ಬರುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಅವರು ಸಿಧು ಅವರನ್ನು ತೆಗೆದುಕೊಂಡು ದಾವೂದ್ ಇಬ್ರಾಹಿಂ, ಸಯೀದ್ ಹಫೀಜ್‌ನನ್ನು ಭಾರತಕ್ಕೆ ಕೊಡಲಿ. ಹೀಗೆ ನಾವೂ ಎರಡು ಹೆಜ್ಜೆ ಮುಂದೆ ಬರುತ್ತೇವೆ' ಎಂದು ಲೇವಡಿ ಮಾಡಿದರು.

      ಕಾಂಗ್ರೆಸ್‌ಗೆ ದೇಶಭಕ್ತಿ, ಸ್ವಾಭಿಮಾನ ಇದ್ದರೆ ದೇಶದ್ರೋಹಿ ಸಿಧು ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಲಿ ಎಂದು ಆಗ್ರಹಿಸಿದರು.

      ಯಾವ ಕಾರಣಕ್ಕೂ ನಾವು ರೆಸಾರ್ಟ್ ರಾಜಕೀಯ ಮಾಡುವುದಿಲ್ಲ. ಅದರಿಂದ ದೂರ ಇರುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+