ಪಾಕಿಸ್ತಾನವನ್ನು ಗುಣಗಾನ ಮಾಡಿದ ಮೌಲ್ವಿಯ ತಲೆ ಕಡಿದ್ರೆ 10 ಲಕ್ಷ ರು

Posted By:
Subscribe to Oneindia Kannada
   ಕರ್ನಾಟಕದ ಹುಬ್ಬಳ್ಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮೌಲ್ವಿ | Oneindia Kannada

   ಬಾಗಲಕೋಟೆ, ಡಿಸೆಂಬರ್ 04 : ಶನಿವಾರ ಈದ್ ಮಿಲಾದ್ ದಿನದಂದು ಹುಬ್ಬಳ್ಳಿಯಲ್ಲಿ ಪಾಕಿಸ್ತಾನವನ್ನು ಗುಣಗಾನ ಮಾಡಿದ್ದ ಮೌಲ್ವಿ ಅಬ್ದುಲ್ ಹಬೀಬ್ ಇಮಾಮಸಾಬ್ ವಿರುದ್ಧ ಕ್ರಮಕೈಗೊಳ್ಳುವಂತೆ ಬಾಗಲಕೋಟೆ ಬಿಜೆಪಿ ನಗರ ಘಟಕ ಆಗ್ರಹಿಸಿದೆ.

   ಗಣೇಶಪೇಟೆ ನನಗೆ ಪಾಕಿಸ್ತಾನದಂತೆಯೇ ಎಂದಿದ್ದ ಮೌಲ್ವಿ ವಿರುದ್ಧ ದೂರು

   ಹುಬ್ಬಳ್ಳಿಯ ಗಣೇಶ್ ಪೇಟೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದ ಅಬ್ದುಲ್ ಹಬೀಬ್ ಇಮಾಮಸಾಬ್ ನನ್ನು ಕೂಡಲೆ ಬಂಧನ ಮಾಡುವಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಈ ವೇಳೆ ರಾಜ್ಯ ಬಿಜೆಪಿ ಯುವಮೋಚಾ೯ ಪ್ರಧಾನ ಕಾಯ೯ದಶಿ೯ ಬಸವರಾಜ್ ಯಂಕಂಚಿ ಅವರು ಮೌಲ್ವಿಯ ತಲೆ ಕಡಿದು ತಂದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದರು.

   BJP leader announces 10 lakh award for maulvi compared ganesh pete to pakistan

   "ಪಾಕಿಸ್ತಾನ ನೋಡಬೇಕೆಂದರೆ ಅಲ್ಲಿಗೇ ಹೋಗುವ ಅವಶ್ಯಕತೆ ಇಲ್ಲ. ಈ ಗಣೇಶಪೇಟೆ ನನಗೆ ಪಾಕಿಸ್ತಾನದಂತೆಯೇ ಕಾಣುತ್ತಿದೆ" ಎಂದು ಶನಿವಾರ ನಡೆದ ಈದ್ ಮಿಲಾದ್ ಆಚರಣೆ ವೇಳೆ ವಿವಾದಾತ್ಮಕ ಭಾಷಣ ಮಾಡಿದ್ದರು. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೌಲ್ವಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿವೆ.

   ಹುಬ್ಬಳ್ಳಿ ಉತ್ತರ ಎಸಿಪಿ ದಾವೂದ್ ಖಾನ್‌ ಹಾಗೂ ಶಹರ ಠಾಣೆ ಇನ್‌ಸ್ಪೆಕ್ಟರ್ ಶಿವಾನಂದ ಚಲವಾದಿ ಅವರ ಸಮ್ಮುಖದಲ್ಲೇ ಮೌಲ್ವಿ ಈ ರೀತಿಯ ಹೇಳಿಕೆ ನೀಡಿದ್ದು, ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

   ಇದೀಗ ಸ್ವತಃ ಹುಬ್ಬಳ್ಳಿ ಉತ್ತರ ಎಸಿಪಿ ದಾವೂದ್ ಖಾನ್‌ ಅವರು ಮಭಲ್ವಿ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The BBJP leader Basavaraj Yankanchi announced Rs 10 lakh award at Bagalkot on Monday for maulvi praising Pakistan during Eid celebrations. Moulvi Abdul Habeeb Imam compared Ganeshpet to Pakistan.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ