ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಳೇದಗುಡ್ಡದಲ್ಲಿ ಅವಳಿ ಕರುಗಳಿಗೆ ರಾಮ-ಲಕ್ಷ್ಮಣ ಎಂದು ನಾಮಕರಣ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಅಕ್ಟೋಬರ್‌, 17: ದೇವಸ್ಥಾನದ ಹಸುವೊಂದು ಅವಳಿ ಕರುಗಳಿಗೆ‌ ಜನ್ಮ‌ ನೀಡಿದ ಕಾರಣ, ಸಂಭ್ರಮದಿಂದ ಭಕ್ತಾದಿಗಳು ಕರುಗಳಿಗೆ ತೊಟ್ಟಿಲು ಶಾಸ್ತ್ರ ಮಾಡಿ ಸಂಭ್ರಮಿಸಿದರು. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಕರುಗಳ ನಾಮಕರಣ ಮಾಡಲಾಗಿದೆ.

ಗಂಡು ಕರುಗಳಿಗೆ ನಾಮಕರಣ

ಈ ಸಂದರ್ಭದಲ್ಲಿ ಸೇರಿದ್ದ ನೂರಾರು ಜನರು ಎರಡೂ ಗಂಡು ಕರುಗಳಿಗಳಿಗೆ ಅದ್ದೂರಿಯಾಗಿ ನಾಮಕರಣ ಮಾಡಿದರು. ಕರುಗಳನ್ನು ತೊಟ್ಟಿಲಿನಲ್ಲಿ ತೂಗಿ, ಭಕ್ತರು ನಾಮಕರಣ ಮಾಡಿದ್ದಾರೆ. ಹಾಗೆಯೇ ಕರುಗಳಿಗೆ ರಾಮ-ಲಕ್ಷ್ಮಣ ಎದು ಹೆಸರಿಡುವ ಮೂಲಕ ಸಂಭ್ರಮಿಸಿದರು. ಎರಡು ಗಂಡು ಕರುಗಳಿಗೆ ಜನ್ಮ ನೀಡಿರುವ ಆಕಳನ್ನು ಈ ಹಿಂದೆ ತ್ರಯಂಬಕೇಶ್ವರ ದೇವಸ್ಥಾನಕ್ಕೆ ದೇವರ ಹಸುವಾಗಿ ಬಿಡಲಾಗಿತ್ತು. ದೇವಸ್ಥಾನದ ಹಸು ಐದು ದಿನಗಳ ಹಿಂದೆ ಅವಳಿ ಗಂಡು ಕರುಗಳಿಗೆ ಜನ್ಮ ನೀಡಿತ್ತು. ದೇವಸ್ಥಾನದ ಹಸು ಅವಳಿ ಕರುಗಳಿಗೆ ಜನ್ಮ ನೀಡಿದ್ದರಿಂದ ಭಕ್ತರಲ್ಲಿ ಸಂಭ್ರಮ ಮನೆ ಮಾಡಿತ್ತು‌. ಹುಟ್ಟಿದ ಐದನೇ ದಿನಕ್ಕೆ ಅದ್ದೂರಿಯಾಗಿ ತೊಟ್ಟಿಲು ಕಾರ್ಯ ಮಾಡಿದ ಭಕ್ತರು, ಕರುಗಳನ್ನು ತೊಟ್ಟಲುಗಳಿಗೆ ಹಾಕಿ ತೂಗಿದರು. ಸದ್ಯ ಅವಳಿ ಕರುಗಳಿಗೆ ರಾಮ-ಲಕ್ಷ್ಮಣ ಎಂದು ನಾಮಕರಣ ಮಾಡಿದ್ದು, ನಾಮಕರಣ ಹಿನ್ನೆಲೆ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

Bagalkot Naming ceremony of twin calves in Guledagudda

ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ

ಸಾಮಾನ್ಯವಾಗಿ ಯಾರಾದರೂ ಮನುಷ್ಯರ ಹುಟ್ಟುಹಬ್ಬ ಇದ್ದರೆ ಪಾರ್ಟಿಗಳನ್ನು ಮಾಡಿ ಸಂಭ್ರಮಿಸುವ ಪ್ರತೀತಿ ಈಗಾಲೂ ಜಾರಿಯಲ್ಲಿದೆ. ಪಬ್‌, ಬಾರ್‌, ಹೋಟೆಲ್‌ಗಳಿಗೆ ಹೋಗಿ ಸಂಭ್ರಮಿಸುವವರು ಒಂದು ಕಡೆ ಆದರೆ, ಮತ್ತೊಂದೆಡೆ ಸಿಂಪಲ್‌ ಆಗಿ ಮನೆಗಳಲ್ಲಿಯೇ ಕುಟುಂಬದವರ ಜೊತೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಪ್ರಾಣಿಗಳಿಗೂ ಸಹ ಕೆಲವೆಡೆ ಹುಟ್ಟುಹಬ್ಬವನ್ನು ಮಾಡುತ್ತಾರೆ. ಇದೀಗ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಒಂದು ಹಸು ಎರಡು ಅವಳಿ ಗಂಡು ಕರುಗಳಿಗೆ ಜನ್ಮ ನೀಡಿತ್ತು. ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಕರುಗಳ ನಾಮಕರಣ ಕಾರ್ಯಕ್ರಮವನ್ನು ಭಕ್ತರು ಅದ್ಧೂರಿಯಾಗಿ ಆಚರಣೆ ಮಾಡಿದ್ದು, ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಿರುವುದು ಗಮನ ಸೆಳೆದಿದೆ.

ಬಾಗಲಕೋಟೆ: ಮುಖ್ಯಮಂತ್ರಿ ಆಗುವುದಕ್ಕೆ ಸಿದ್ದರಾಮಯ್ಯ ಅಯೋಗ್ಯ ವ್ಯಕ್ತಿ ಎಂದ ಈಶ್ವರಪ್ಪಬಾಗಲಕೋಟೆ: ಮುಖ್ಯಮಂತ್ರಿ ಆಗುವುದಕ್ಕೆ ಸಿದ್ದರಾಮಯ್ಯ ಅಯೋಗ್ಯ ವ್ಯಕ್ತಿ ಎಂದ ಈಶ್ವರಪ್ಪ

English summary
Naming ceremony of twin calves at Trayabakeshwara temple in Guledagudda town of Bagalkot district, Devotees celebrated, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X