ತುಂಡು ಜಮೀನಿಗಾಗಿ ಜಗಳ, ಭಾವಮೈದನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಭಾವ
ಬಾಗಲಕೋಟೆ, ಮೇ 26: ತುಂಡು ಜಮೀನಿಗಾಗಿ ವ್ಯಕ್ತಿಯೊಬ್ಬ ತನ್ನ ಬಾವಮೈದುನನ್ನು ಕಲ್ಲಿನಿಂದ ಹೊಡೆದು ಕೊಂದು, ನಂತರ ತಾನೂ ವಿಷದುಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ.
ಕೇವಲ ಒಂದು ಪಂಪ್ ಶೆಟ್, ಆರೇಳು ತೆಂಗಿನ ಗಿಡಗಳು ಇದ್ದ ವ್ಯಾಪ್ತಿಯ ಜಾಗಕ್ಕಾಗಿ ರಮೇಶ್ ಅಂಗಡಿ ಎಂಬಾತ ತನ್ನ ಪತ್ನಿಯ ತಮ್ಮ ಸಂಗಪ್ಪ ಕೋಟಿ(38) ಜೊತೆ ಜಗಳವಾಡಿ, ನಂತರ ಕೊಲೆ ಮಾಡಿದ್ದಾನೆ. ಈ ವಿಚಾರಕ್ಕೆ ಅಗಾಗ್ಗೆ ಜಗಳ ಸಂಭವಿಸುತ್ತಿದ್ದು, ರಮೇಶ್ ಯಾವಾಗಲೂ ತನ್ನ ಪತ್ನಿಗೆ ನಿನ್ನ ತಮ್ಮನನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದ. ಆದರೆ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಕೊನೆಗೂ ಹೇಳಿದಂತೆ ತನ್ನ ಸಂಬಂಧಿ ಜೊತೆಗೂಡಿ ಕೊಲೆ ಮಾಡಿದ್ದಾನೆ.
ಕೊಲೆಗೆ ಸಾಥ್ ನೀಡಿದವ ಎಸ್ಕೇಪ್
ಪದೇ ಪದೇ ಜಗಳವಾಡುತ್ತಿದ್ದರು ಇದು ಕೊಲೆ ತನಕ ಹೋಗಬಹುದು ಎಂದು ಯಾರು ನಂಬಿರಲಿಲ್ಲ. ರಮೇಶ್ ತನ್ನ ಭಾವಮೈದನನ್ನು ಕೊಂದಿದ್ದಲ್ಲದೆ, ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿ ತಾಯಿ, ಪತ್ನಿ ಸೇರಿದಂತೆ ಸಂಬಂಧಿಕರ ಗೋಳಾಡುತ್ತಿದ್ದಾರೆ. ಇನ್ನೊಂದು ಕಡೆ ಅಳಿಯನ ಕೊಲೆಗೆ ಸಾಥ್ ನೀಡಿದ ಸೋದರಸಂಬಂಧಿ ಸುನಿಲ್ ವಾಲಿ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾನೆ.

ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದ್ದ ರಮೇಶ
ಸಂಗಪ್ಪನನ್ನು ಕೊಲೆ ಮಾಡಿದ ನಂತರ ರಮೇಶ ಪತ್ನಿಗೆ ಕರೆ ಮಾಡಿ, ನಿನ್ಮ ತಮ್ಮನ ಕಥೆ ಮುಗಿಸಿದ್ದೇನೆ, ಈಗ ನಾನು ಸಾಯುತ್ತಿದ್ದೇನೆ ಎಂದು ಹೇಳಿದ್ದಾನೆ. ಸಂಗಪ್ಪನನ್ನು ಕೊಂದ ಜಾಗದಿಂದ ನೂರು ಮೀಟರ್ ದೂರದ ಹೊಲದಲ್ಲಿ ಕ್ರಿಮಿನಾಷಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಸಂಜೆ ಶವ ಪತ್ತೆಯಾಗಿದ್ದು, ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕಿ ಗೋಳಾಡುತ್ತಿದ್ದಾರೆ. ರಮೇಶ್ ಅಂಗಡಿಯನ್ನು ಚಿಕ್ಕಂದಿನಿಂದ ಸಾಕಿದ್ದು ಅವರ ಮಾವ ಪತ್ನಿಯ ತಂದೆ ಈರಪ್ಪ. ನಾಲ್ಕು ವರ್ಷದವನಿದ್ದಾಗ ಮನೆಯಲ್ಲಿ ತಂದು ಸಾಕಿ ಬೆಳೆಸಿ ವಯಸ್ಕನಾದ ಮೇಲೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದರು. ಆದರೆ ಕಳೆದ ಮೂರು ವರ್ಷದಿಂದ ಆಸ್ತಿ ವಿವಾದ ಎಲ್ಲರ ಸಂಬಂಧ ಕೆಡಿಸಿತ್ತು. ಕೊನೆಗೆ ಮೇ 23 ರಂದು ಅಳಿಯನ ಕೊಲೆ ಮಾಡಿ ಕಣ್ಮರೆಯಾದವ ಈಗ ಶವವಾಗಿ ಸಿಕ್ಕಿದ್ದಾನೆ.
ರಮೇಶನಿಗೆ ಮೂರು ಮಕ್ಕಳು, ಸಂಗಪ್ಪನಿಗೆ ಎರಡು ಮಕ್ಕಳಿದ್ದು ತಂದೆ ಕಳೆದುಕೊಂಡು ಅನಾಥರಾಗಿದ್ದರೆ, ಇಬ್ಬರ ಪತ್ನಿಯರು ವಿಧವೆಯಾಗಿದ್ದಾರೆ. ಪೊಲೀಸ್ ತನಿಖೆ ಪ್ರಕಾರ, ಶವದ ಚಿತ್ರಣ ನೋಡಿದರೆ ಸಂಗಪ್ಪನನ್ನು ಕೊಲೆ ಮಾಡಿದ ದಿನವೇ ರಮೇಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಗಪ್ಪ ಕೋಟಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸುನಿಲ್ ಮನೆಯವರು ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದಾರೆ.
(ಒನ್ಇಂಡಿಯಾ ಸುದ್ದಿ)
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications