ಅಂತ್ಯಸಂಸ್ಕಾರದ ವೇಳೆ ಎಚ್ಚರಗೊಂಡ ಮಗು: ಎದೆ ಬಡಿದುಕೊಂಡು ಗೋಳಾಡಿದ ಕುಟುಂಬ!
ಬಾಗಲಕೋಟೆ ಮೇ 24: ಹಸು ಕಂದಮ್ಮನ್ನನ್ನು ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದ ಕುಟುಂಬದ ಮುಂದೆಯೇ ಪವಾಡವೆಂಬಂತೆ ಮಗು ಕೆಮ್ಮಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಗುರುವಾರ ಈ ಘಟನೆ ನಡೆದಿದೆ. ಮಗು ಪ್ರಜ್ಞೆ ತಪ್ಪಿದ್ದನ್ನು ತಪ್ಪಾಗಿ ಭಾವಿಸಿದ ಕುಟುಂಬ ಅಂತ್ಯಸಂಸ್ಕಾರಕ್ಕೆ ಮುಂದಾದಾಗ ಮಗು ಕೆಮ್ಮಿದೆ. ಇದರಿಂದ ಕುಟುಂಬ ಎದೆ ಬಡಿದುಕೊಂಡು ಗೋಳಾಡಿ ಕಣ್ಣೀರು ಹಾಕಿದೆ.

ಹೌದು... ಬಸವರಾಜ ಭಜಂತ್ರಿ ಹಾಗೂ ನೀಲಮ್ಮ ಎಂಬ ದಂಪತಿಯ ದ್ಯಾಮಣ್ಣ ಭಜಂಯ್ರಿ ಎಂಬ 13 ತಿಂಗಳ ಹಸುಗೂಸು ಹೃದಯ ಸಂಬಂಧಿ ಕಾಯಿಲೆಯಿಂದ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿತ್ತು. ಇದರಿಂದಾಗಿ ಆ ಮಗುವಿಗೆ ಅಂಗಾಗ ವೈಫಲ್ಯವೂ ಇತ್ತು. ಹುಟ್ಟಿನಿಂದ ಮಗು ನಾನಾ ಸಮಸ್ಯೆಗಳನ್ನು ಎದುರಿಸುತ್ತಿತ್ತು.
ಹೀಗಾಗಿ ಕಳೆದ ಕೆಲ ದಿನಗಳ ಹಿಂದೆ ಮಗುವನ್ನು ಬಾಗಲಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗು ಬದುಕುವುದು ಕಷ್ಟ ಎಂದು ಹೇಳಿದಾಗ ಪೋಷಕರು ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ದಿದ್ದರು. ಅಷ್ಟರಲ್ಲಿ ಮಗು ಪ್ರಜ್ಞೆ ತಪ್ಪಿತ್ತು. ಇದರಿಂದ ಮಗು ಸಾವನ್ನಪ್ಪಿದೆ ಎಂದು ಭಾವಿಸಿದ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅಷ್ಟರಲ್ಲಿ ಮಗು ಕೆಮ್ಮಿದೆ. ಇದರಿಂದ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ಇದರಿಂದ ಕುಟುಂಬಸ್ಥರಿಗೆ ಅಚ್ಚರಿ ಜೊತೆಗೆ ಸಂತೋಷದ ಕಣ್ಣೀರು ಕಣ್ಣು ತುಂಬಿ ಬಂದಿದೆ. ಇದು ದೇವರ ಪವಾಡ ಎಂದು ಭಾವಿಸಿ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾತ್ರವಲ್ಲದೆ ದೇವರ ದರ್ಶನಕ್ಕೂ ಮಗುವನ್ನು ಕರೆದೊಯ್ಯಲಾಗಿದೆ.
ಅಲ್ಲದೆ ಇದು ಮುರ್ತುಜಾ ಖಾರ್ದಿ ಪವಾಡ ಎಂದು ಮಗುವಿನ ಪೋಷಕರು ಭಾವಿಸಿ ದರ್ಗಾಕ್ಕೆ ಮಗುವನ್ನು ಕರೆದೊಯ್ದು ನಂತರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಇಳಕಲ್ ಖಾಸಗಿ ಆಸ್ಪತ್ರೆ ವೈದ್ಯರು, 'ಮಗು ಬದುಕುವುದು ಕಷ್ಟ ಎಂದು ಮಾತ್ರ ಬಾಗಲಕೋಟೆ ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಆದರೆ ಅದು ಮೃತಪಟ್ಟಿದೆ ಎಂದು ಯಾವ ವೈದ್ಯರು ಘೋಷಣೆ ಮಾಡಿಲ್ಲ. ಆದರೆ ಕುಟುಂಬಸ್ಥರು ಮಗು ಪ್ರಜ್ಞೆ ತಪ್ಪಿಧ್ದನ್ನೇ ತಪ್ಪಾಗಿ ಭಾವಿಸಿ ಅದು ಮೃತಪಟ್ಟಿದೆ ಎಂದು ಅರ್ಥೈಸಿಕೊಂಡಿದ್ದಾರೆ. ಸದ್ಯ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ನಾವು ಮಗುವಿಗೆ ಚಿಕಿತ್ಸೆ ನೀಡುತ್ತಿದ್ದೇವೆ' ಎಂದರು.
ಕುಟುಂಬಸ್ಥರು ಮಗು ಸತ್ತಿದೆ ಎಂದು ಭಾವಿಸಿದ್ದಾರೆ ಅಷ್ಟೇ ಆದರೆ ಮಗು ಬದುಕಿದೆ. ಮಗುವಿನ ಉಸಿರಾಟ ಸಹಜ ಸ್ಥಿತಿಯಲ್ಲಿದೆ. ನಾವು ಚಿಕಿತ್ಸೆ ಮುಮದುವರೆಸುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications