67 ವರ್ಷದ ಆತ, 24 ವರ್ಷದ ಆಕೆ ಮದುವೆ, ರಕ್ಷಣೆ ನೀಡಲು 'ಹೈ' ಸೂಚನೆ
67 ವರ್ಷದ ಶಂಷೇರ್ ಸಿಂಗ್ ಹಾಗೂ 24 ವರ್ಷದ ನವ್ ಪ್ರೀತ್ ಕೌರ್ ಈಚೆಗೆ ಮದುವೆ ಆಗಿದ್ದು, ಅವರ ಸ್ವಾತಂತ್ರ್ಯ ಹಾಗೂ ಜೀವಕ್ಕೆ ರಕ್ಷಣೆ ಒದಗಿಸಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ಧುರಿ ಉಪವಿಭಾಗದ ಬಲಿಯಾನ್ ಹಳ್ಳಿಯವರು ಶಂಷೇರ್ ಹಾಗೂ ನವ್ ಪ್ರೀತ್ ಚಂಡೀಗಢದ ಗುರ್ ದ್ವಾರ್ ನಲ್ಲಿ ಜನವರಿಯಲ್ಲಿ ವಿವಾಹವಾಗಿದ್ದರು.
ಅವರ ಮದುವೆ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ತಮ್ಮ ಕುಟುಂಬಗಳು ಹಾಗೂ ಸಂಬಂಧಿಕರಿಂದ ಬೆದರಿಕೆ ಬರುತ್ತಿದೆ, ತಮಗೆ ಭದ್ರತೆ ಒದಗಿಸಬೇಕು ಎಂದು ಹೈ ಕೋರ್ಟ್ ಮೊರೆ ಹೋಗಿದ್ದರು.
"ಇದು ಅಪರೂಪದ ಮದುವೆ. ಈ ಸಂಬಂಧಕ್ಕೆ ಕುಟುಂಬದವರ ಸಮ್ಮತಿ ಇರಲಿಲ್ಲ. ಆದ್ದರಿಂದ ಜೋಡಿ ಹೈಕೋರ್ಟ್ ಮೆಟ್ಟಿಲೇರಿದರು. ತಮ್ಮ ಕುಟುಂಬ ಹಾಗೂ ಸಂಬಂಧಿಕರಿಂದ ಜೀವಕ್ಕೆ ಅಪಾಯವಿದೆ ಎಂಬುದು ಅವರ ಅಹವಾಲಾಗಿತ್ತು. ಫೆಬ್ರವರಿ ನಾಲ್ಕರಂದು ಕೊರ್ಟ್ ನಿಂದ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಅವರ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ" ಎಂದು ವಕೀಲರು ಹೇಳಿದ್ದಾರೆ.

ಯಾವುದೇ ಹೇಳಿಕೆ ನೀಡಲು ಈ ಜೋಡಿ ನಿರಾಕರಿಸಿದ್ದಾರೆ. ಆದರೆ ಈ ಮದುವೆ ಕಾನೂನಾತ್ಮಕವಾಗಿದೆ ಎಂದು ವಕೀಲರಿ ಹೇಳಿದ್ದಾರೆ. ಅವರು ವಯಸ್ಕರರು. ಮದುವೆ ಬಗ್ಗೆ ತೀರ್ಮಾನಿಸಲು ಹಕ್ಕಿದೆ. ಇಬ್ಬರಿಗೂ ಬೇರೆ ಜೀವಂತ ಸಂಗಾತಿ ಇಲ್ಲವಾದ್ದರಿಂದ ಮದುವೆ ಕಾನೂನುಬದ್ಧವಾಗಿದೆ ಎಂದು ವಕೀಲರು ತಿಳಿಸಿದ್ದಾರೆ.












Click it and Unblock the Notifications