ಇಟಲಿಯಿಂದ ಪಂಜಾಬ್‌ಗೆ ಬಂದವರಿಗೆ ಕೋವಿಡ್‌: 13 ಮಂದಿ ಆಸ್ಪತ್ರೆಯಿಂದ ಪರಾರಿ!

ಅಮೃತಸರ, ಜನವರಿ 07: ಇಟಲಿಯಿಂದ ಪಂಜಾಬ್‌ನ ಅಮೃತಸರಕ್ಕೆ ಚಾರ್ಟರ್ಡ್ ವಿಮಾನದಲ್ಲಿ ಬಂದ 125 ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಈ ಹಿನ್ನೆಲೆಯಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ನಡುವೆ ಈ ಕೋವಿಡ್‌ ಸೋಂಕಿತರ ಪೈಕಿ 13 ಮಂದಿ ಸೋಂಕಿತರು ಆಸ್ಪತ್ರೆಯಿಂದಲೇ ಪರಾರಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಗ್ಯ ಅಧಿಕಾರಿಗಳಿಗೆ ಮೋಸ ಮಾಡಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎಂದು ಕೂಡಾ ಅಧಿಕಾರಿಗಳು ತಿಳಿಸಿದ್ದಾರೆ. ಇಟಲಿಯ ಮಿಲನ್‌ನಿಂದ ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅಮೃತಸರಕ್ಕೆ ನಿನ್ನೆ ಮಧ್ಯಾಹ್ಮ ತಲುಪಿದ್ದು, ಆ ಬಳಿಕ ಕೋವಿಡ್‌ ಮಾರ್ಗಸೂಚಿಯಂತೆ ಪರೀಕ್ಷೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಈ ಪೈಕಿ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಿಂದಾಗಿ ಈ ಸೋಂಕಿತರನ್ನು ಅಮೃತಸರದ ಗುರು ನಾನಕ್‌ ದೇವ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅಮೃತಸರದ ಜಿಲ್ಲಾಧಿಕಾರಿ ಗುರುಪ್ರೀತ್‌ ಸಿಂಗ್‌ ಖೇಹ್ರಾ, "ಆಸ್ಪತ್ರೆಯಿಂದ ಪರಾರಿಯಾದ ಸೋಂಕಿತರ ಪಾಸ್‌ಪೋರ್ಟ್ ಅನ್ನು ರದ್ದು ಮಾಡುವ ಪ್ರಕ್ರಿಯೆಯನ್ನು ನಾವು ಆರಂಭ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.

13 Covid positive Passengers Of Chartered Flight From Italy To Punjab Flee From Hospital

"ನಾಳೆ ಬೆಳಗ್ಗೆ (ಜನವರಿ 7) ಒಳಗೆ ಆಸ್ಪತ್ರೆಯಿಂದ ಪರಾರಿಯಾಗಿರುವ ಕೊರೊನಾ ಸೋಂಕಿತರು ಮರಳಿ ಆಸ್ಪತ್ರೆಗೆ ಬರದಿದ್ದರೆ, ನಾವು ಪತ್ರಿಕೆಯಲ್ಲಿ ಅವರ ಚಿತ್ರವನ್ನು ಪ್ರಕಟ ಮಾಡುತ್ತೇವೆ," ಎಂದು ಎಚ್ಚರಿಕೆಯನ್ನು ಕೂಡಾ ಜಿಲ್ಲಾಧಿಕಾರಿ ಗುರುಪ್ರೀತ್‌ ಸಿಂಗ್‌ ಖೇಹ್ರಾ ನೀಡಿದ್ದಾರೆ. ಇನ್ನು ಅವರ ವಿರುದ್ಧ ಎಫ್‌ಐಆರ್‌ ದಾಖಲು ಕೂಡಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ನಿರ್ಲಕ್ಷ್ಯ ಸಹಿಸಲಾಗದು ಎಂದ ಜಿಲ್ಲಾಧಿಕಾರಿ

"ನಾವು ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಗಟ್ಟುವ ಪ್ರಯತ್ನ ಮಾಡುತ್ತಿದ್ದೇವೆ. ಈ ನಡುವೆ ಕೋವಿಡ್‌ ಸೋಂಕಿತರ ಈ ನಿರ್ಲಕ್ಷ್ಯವನ್ನು ಸಹಿಸಲು ಆಗದು. ಯಾವುದೇ ಕಾರಣಕ್ಕೂ ಇದನ್ನು ನಾವು ಸಹಿಸಲ್ಲ," ಎಂದು ಖಡಕ್‌ ಆಗಿ ಪರಾರಿಯಾದ ಸೋಂಕಿತರಿಗೆ ಎಚ್ಚರಿಕೆ ನೀಡಿದ್ದಾರೆ.

ಇಟಲಿಯ ಮಿಲಾನ್‌ನಿಂದ ಚಾರ್ಟರ್ಡ್ ವಿಮಾನದಲ್ಲಿ ಅಮೃತಸರಕ್ಕೆ ನಿನ್ನೆ ಮಧ್ಯಾಹ್ನ 179 ಪ್ರಯಾಣಿಕರು ಆಗಮಿಸಿದ್ದಾರೆ. ಈ ಪೈಕಿ 19 ಮಕ್ಕಳು ಆಗಿದ್ದಾರೆ. ಕೋವಿಡ್‌ ನಿಯಮದಂತೆ ಇವರ ಕೋವಿಡ್ ಪರೀಕ್ಷೆಯನ್ನು ಮಾಡಲಾಗಿದೆ. ಮಧ್ಯಾಹ್ನ ಸುಮಾರು 1:30 ಗಂಟೆಗೆ ಬಂದ ಈ 179 ಪ್ರಯಾಣಿಕರ ಕೋವಿಡ್‌ ಪರೀಕ್ಷೆಯನ್ನು ಮಾಡಿದ ಬಳಿಕ ಈ ಪೈಕಿ 125 ಪ್ರಯಾಣಿಕರಿಗೆ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ. ಎಲ್ಲಾ ಕೋವಿಡ್‌ ಸೋಂಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇಟಲಿಯಲ್ಲಿ ಹೆಚ್ಚು ಕೋವಿಡ್‌ ಪ್ರಕರಣಗಳು ದಾಖಲು ಆಗುತ್ತಿರುವ ಹಿನ್ನೆಲೆಯಿಂದಾಗಿ ಇಟಲಿಯಿಂದ ಬರುವ ಎಲ್ಲಾ ಪ್ರಯಾಣಿಕರ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳು ಇನ್ನಷ್ಟು ಹೆಚ್ಚಳ

ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯು ನಿರಂತರವಾಗಿ ಅಧಿಕವಾಗುತ್ತಿದೆ. ದಿನ ಕಳೆದಂತೆ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆಯು ಏರಿಕೆ ಕಾಣುತ್ತಿದೆ. ಡಿಸೆಂಬರ್‌ 28ರಂದು ದೇಶದಲ್ಲಿ 9,195, ಡಿಸೆಂಬರ್‌ 29ರಂದು 13,154, ಡಿಸೆಂಬರ್‌ 30ರಂದು 16,764, ಡಿಸೆಂಬರ್‌ 31ರಂದು 22,775, ಜನವರಿ 1ರಂದು 27,553, ಜನವರಿ 2ರಂದು 33750, ಜನವರಿ 3ರಂದು 37359, ಜನವರಿ 4ರಂದು 58,097, ಜನವರಿ 5ರಂದು 90,928 ಕೋವಿಡ್‌ ಪ್ರಕರಣಗಳು ದಾಖಲು ಆಗಿದ್ದು, ಇಂದು 1,16,836 ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿ ಆಗಿದೆ. ಕಳೆದ 200 ದಿನಗಳಲ್ಲಿ ಇದು ಹೆಚ್ಚಿನ ಕೋವಿಡ್ ಪ್ರಕರಣ ಆಗಿದೆ. ಇನ್ನು ದೇಶದಲ್ಲಿ ಈವರೆಗೆ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆಯು 3,52,25,699ಕ್ಕೆ ಏರಿಕೆ ಕಂಡಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+