• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಧ್ರಕ್ಕೆ ವಿಶೇಷ ರಾಜ್ಯ ಸ್ಥಾನದ ಭರವಸೆ ನೀಡಿದ ರಾಹುಲ್ ಗಾಂಧಿ

|

ತಿರುಪತಿ, ಫೆಬ್ರವರಿ 22: ನಾವು ಅಧಿಕಾರಕ್ಕೆ ಬಂದರೆ ಕೂಡಲೇ ಆಂಧ್ರ ಪ್ರದೇಶಕ್ಕೆ ವಿಶೇಷ ರಾಜ್ಯದ ಸ್ಥಾನ-ಮಾನ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ತಿರುಪತಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಬೃಹತ್ ಸಮಾವೇಶ ಉದ್ದೇಶಿ ಮಾತನಾಡಿದರು. ಅದಕ್ಕೆ ಮುನ್ನಾ ರಾಹುಲ್ ಅವರು ನಡೆದುಕೊಂಡೆ ತಿರುಪತಿ ಬೆಟ್ಟ ಹತ್ತಿ ವೆಂಕಟೇಶ್ವರ ಸ್ವಾಮಿ ದರ್ಶನ ಮಾಡಿದರು.

ನಡೆದುಕೊಂಡು ತಿರುಪತಿ ಬೆಟ್ಟ ಹತ್ತಿ ದರ್ಶನ ಪಡೆದ ರಾಹುಲ್‌ ಗಾಂಧಿ

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಮೋದಿ ಮಾತುಕೊಟ್ಟಿದ್ದರು, ಆದರೆ ಅವರು ವಿಫಲರಾದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ನಾವು ಆಂಧ್ರಕ್ಕೆ ವಿಶೇಷ ಸ್ಥಾನ-ಮಾನ ಕೊಡುತ್ತೇವೆ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ರಾಹುಲ್ ವಾಗ್ದಾನ ನೀಡಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇನೆಂದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುತ್ತೇನೆಂದು, ರೈತರಿಗೆ ಲಾಭ ಕೊಡಿಸುತ್ತೇನೆಂದೆಲ್ಲಾ ಮೋದಿ ಅವರು ಸುಳ್ಳು ಹೇಳಿಕೆ ನೀಡಿದ್ದರು.

ಮಾ.9ರಂದು ಕರ್ನಾಟಕದಲ್ಲಿ ಪ್ರಚಾರ ಆರಂಭಿಸಲಿದ್ದಾರೆ ರಾಹುಲ್

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದಿದ್ದರು, ಪ್ರಧಾನಿ ಬೇಡ ಚೌಕೀದಾರ್ ಮಾಡಿ ಎಂದಿದ್ದರು, ಆದರೆ ಅವರೇ ರಫೇಲ್ ಹಣವನ್ನು ಅಂಬಾನಿ ಜೇಬಿಗೆ ಹಾಕಿದರು. ಕೋಟ್ಯಂತರ ರೂಪಾಯಿ ಹಣ ವಂಚಿಸಿ ದೇಶಬಿಟ್ಟು ಹೋಗುವವರಿಗೆ ಸಹಾಯ ಮಾಡಿದರು ಎಂದು ರಾಹುಲ್ ವಾಗ್ದಾಳಿ ನಡೆಸಿದರು.

English summary
Rahul Gandhi said If Congress came to power no force will stop us from giving special status to Andhra Pradesh. He today addressed gathering in Thirapathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X