• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೋಗಿಗಳಿಂದ ಬೇರ್ಪಟ್ಟು ಹತ್ತು ಕಿ.ಮೀ. ಚಲಿಸಿದ ರೈಲು ಎಂಜಿನ್

By ಅನಿಲ್ ಆಚಾರ್
|

ವಿಶಾಖಪಟ್ಟಣ, ಆಗಸ್ಟ್ 20: ಆಂಧ್ರಪ್ರದೇಶದಲ್ಲಿ ಸೋಮವಾರ ಬೋಗಿಗಳಿಂದ ಬೇರ್ಪಟ್ಟ ರೈಲು ಎಂಜಿನ್, ಕನಿಷ್ಠ ಹತ್ತು ಕಿಲೋಮೀಟರ್ ಚಲಿಸಿದ ಘಟನೆ ನಡೆದಿದೆ. ಎಂಜಿನ್ ಬೇರ್ಪಟ್ಟ ಮೇಲೆ ಪ್ರಯಾಣಿಕರಿದ್ದ ಬೋಗಿಗಳು ನಿಂತಿವೆ. ಈ ಘಟನೆ ಬಗ್ಗೆ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಭುವನೇಶ್ವರ್ ಹಾಗೂ ಸಿಕಂದರಾಬಾದ್ ಮಧ್ಯೆ ಸಂಚರಿಸುವ ವಿಶಾಖ ಎಕ್ಸ್ ಪ್ರೆಸ್ ಗೆ ಸೇರಿದ ಎಂಜಿನ್ ಇದಾಗಿದೆ. ನರಸಿಪಟ್ಟಣಂ ಹಾಗೂ ತುನಿ ರೈಲು ನಿಲ್ದಾಣದ ಮಧ್ಯೆ ಬೋಗಿಗಳು ಎಂಜಿನ್ ನಿಂದ ಬೇರ್ಪಟ್ಟಿವೆ. ಎಂಜಿನ್ ಹಾಗೂ ಬೋಗಿಗಳನ್ನು ಬೆಸೆಯುವ ರಾಡ್ ಗಳು ಮುರಿದಿದ್ದರಿಂದ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ.

ತಾಂತ್ರಿಕ ಸಿಬ್ಬಂದಿಯ ತಂಡವೊಂದನ್ನು ನೇಮಿಸಿ, ಎಂಜಿನ್ ಮತ್ತು ಬೋಗಿಯನ್ನು ಮತ್ತೆ ಸೇರಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಇತರ ರೈಲುಗಳಿಗೆ ಈ ಕಾರಣಕ್ಕೆ ತಡವಾಗಿವೆ. ರೈಲಿನ ಎಂಜಿನ್ ಮಾತ್ರ ಚಲಿಸುತ್ತಿರುವ ವಿಡಿಯೋ ಮಾಡಿರುವ ಕೆಲವರು, ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಎಂಜಿನ್ ಬೇರ್ಪಟ್ಟು, ಸಂಚರಿಸಿದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

English summary
Visakhapatnam express train engine ran 10 km after detached from coaches in Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X