ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಪ್ರದೇಶದ ರಾಜ್ಯಪಾಲೆಯಾಗಿ ಸುಷ್ಮಾ ಸ್ವರಾಜ್ ನೇಮಕ?

|
Google Oneindia Kannada News

ಅಮರಾವತಿ, ಜೂನ್ 10: ಮಾಜಿ ಮಂತ್ರಿ ಸುಷ್ಮಾ ಸ್ವರಾಜ್ ಅವರು ಆಂಧ್ರ ಪ್ರದೇಶದ ರಾಜ್ಯಪಾಲೆ ಆಗುವ ಸಂಭವ ಇದೆ. ಹೀಗೊಂದು ಸುದ್ದಿ ಜೋರಾಗಿ ಆಂಧ್ರದ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಪ್ರಧಾನ ಮಂತ್ರಿ ಕಚೇರಿಯಿಂದಲೇ ಆಂಧ್ರದ ಹೊಸ ಸಿಎಂ ಜಗನ್‌ ಮೊಹನ್ ರೆಡ್ಡಿ ಅವರಿಗೆ ಮಾಹಿತಿ ಬಂದಿದೆ ಎನ್ನಲಾಗಿದ್ದು, ಜಗನ್ ಅವರು ಸಹ ಸುಷ್ಮಾ ಸ್ವರಾಜ್ ಅವರನ್ನು ರಾಜ್ಯಪಾಲೆಯನ್ನಾಗಿ ಮಾಡಿದರೆ ಉತ್ತಮವೆಂದು ಕೇಳಿದ್ದಾರೆ ಎನ್ನಲಾಗಿದೆ.

ಯಾರಾಗಲಿದ್ದಾರೆ ಕರ್ನಾಟಕದ ರಾಜ್ಯಪಾಲರು? ಅಚ್ಚರಿಯ ಹೆಸರುಗಳುಯಾರಾಗಲಿದ್ದಾರೆ ಕರ್ನಾಟಕದ ರಾಜ್ಯಪಾಲರು? ಅಚ್ಚರಿಯ ಹೆಸರುಗಳು

ಸುಷ್ಮಾ ಸ್ವರಾಜ್ ಅವರು ಕಳೆದ ಅವಧಿಯಲ್ಲಿ ಮೋದಿ ಸಂಪುಟದಲ್ಲಿ ವಿದೇಶ ಮಂತ್ರಿ ಆಗಿದ್ದರು. ಅತ್ಯಂತ ಕ್ರಿಯಾಶೀಲರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಆದರೆ ಈ ಬಾರಿ ಅವರು ವೈಯಕ್ತಿಕ ಕಾರಣದಿಂದಾಗಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದು, ಮಂತ್ರಿ ಮಂಡಲದಲ್ಲಿ ಸ್ಥಾನವೂ ಬೇಡವೆಂದು ಪಕ್ಷಕ್ಕೆ ಕೇಳಿಕೊಂಡಿದ್ದರು.

ಜಗನ್ ಮೋಹನ್ ರೆಡ್ಡಿಗೆ ಸಹಾಯ?

ಜಗನ್ ಮೋಹನ್ ರೆಡ್ಡಿಗೆ ಸಹಾಯ?

ಅವರಿಚ್ಛೆಯಂತೆಯೇ ಅವರನ್ನು ಸಂಪುಟದಿಂದ ದೂರವಿಡಲಾಗಿದೆ. ಆದರೆ ಅವರಿಗೆ ರಾಜಕೀಯದ ಹೊರತಾದ ರಾಜ್ಯಪಾಲ ಹುದ್ದಯೆನ್ನು ನೀಡಲು ನಿರ್ಧರಿಸಲಾಗಿದೆ. ಬಿಜೆಪಿಗೆ ಆಪ್ತವಾಗಿರುವ ಜಗನ್ ಮೋಹನ್ ರೆಡ್ಡಿ ಅವರು ಹೊಸದಾಗಿ ಸಿಎಂ ಆಗಿದ್ದು, ಅವರ ಆಡಳಿತ ಅನುಕೂಲಕ್ಕೆ ಸುಷ್ಮಾ ಸ್ವರಾಜ್ ನೆರವಾಗಲೆಂಬ ಆಶಯವೂ ಬಿಜೆಪಿಗೆ ಇದೆ.

Array

ಸಚಿವ ಹರ್ಷವರ್ಧನ್ ಟ್ವೀಟ್ ಮಾಡಿದ್ದರು

ಸಚಿವ ಹರ್ಷವರ್ಧನ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದರು. ಸುಷ್ಮಾ ಸ್ವರಾಜ್ ಅವರು ಆಂಧ್ರ ಪ್ರದೇಶದ ರಾಜ್ಯಪಾಲೆ ಆಗಲಿದ್ದಾರೆ ಎಂದು ಅವರಿಗೆ ಧನ್ಯವಾದ ಸಹ ಅರ್ಪಿಸಲಾಗಿತ್ತು. ಆದರೆ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ.

ಸಂಪುಟದಲ್ಲಿ ಸುಷ್ಮಾ ಇಲ್ಲ, ಆದರೆ ಕಚಗುಳಿ ಇಟ್ಟ ಆ ಟ್ವೀಟ್ಸ್ ಮರೆಯೋದು ಹೇಗೆ?ಸಂಪುಟದಲ್ಲಿ ಸುಷ್ಮಾ ಇಲ್ಲ, ಆದರೆ ಕಚಗುಳಿ ಇಟ್ಟ ಆ ಟ್ವೀಟ್ಸ್ ಮರೆಯೋದು ಹೇಗೆ?

ಕರ್ನಾಟಕ ರಾಜ್ಯಪಾಲೆ ಆಗುತ್ತಾರೆ ಎನ್ನಲಾಗಿತ್ತು

ಕರ್ನಾಟಕ ರಾಜ್ಯಪಾಲೆ ಆಗುತ್ತಾರೆ ಎನ್ನಲಾಗಿತ್ತು

ಸುಷ್ಮಾ ಸ್ವರಾಜ್ ಅವರು ಕರ್ನಾಟಕದ ರಾಜ್ಯಪಾಲೆ ಆಗುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಯಡಿಯೂರಪ್ಪ ಮತ್ತು ಸುಷ್ಮಾ ಸ್ವರಾಜ್ ಅವರು ಒಟ್ಟಿಗೆ ಇರುವ ಚಿತ್ರಗಳು ಬಿಜೆಪಿಯ ಬೆಂಬಲಿತ ಪೇಜ್‌ಗಳಲ್ಲಿ ಹರಿದಾಡುತ್ತಿದೆ. ಆದರೆ ಯಾವುದೂ ಸಹ ಇನ್ನೂ ಅಂತಿಮವಾಗಿಲ್ಲ.

ಈ ಬಾರಿ ಹಲವು ಆಕಾಂಕ್ಷಿಗಳು

ಈ ಬಾರಿ ಹಲವು ಆಕಾಂಕ್ಷಿಗಳು

ಸುಷ್ಮಾ ಸ್ವರಾಜ್, ಉಮಾ ಭಾರತಿ, ಸುಮಿತ್ರಾ ಮಹಾಜನ್ ಅವರುಗಳು ಈ ಬಾರಿ ರಾಜ್ಯಪಾಲೆ ಆಗಲಿದ್ದಾರೆ ಎನ್ನಲಾಗಿದೆ. ಅರುಣ್ ಜೇಟ್ಲಿ ಅವರು ಸಹ ಈ ಬಾರಿ ಚುನಾವಣೆಗೆ ಸ್ಪರ್ಧಿಸಿಲ್ಲ, ಆದರೆ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿರುವ ಅವರನ್ನು ರಾಜ್ಯಪಾಲರನ್ನಾಗಿ ಮಾಡುವುದು ಅನುಮಾನ.

ಸಂಕಟಕ್ಕೆ, ಸಂತಸಕ್ಕೆ ಸ್ಪಂದಿಸುತ್ತಿದ್ದ ಸುಷ್ಮಾ ಸ್ವರಾಜ್ : ಟ್ವಿಟ್ಟರಲ್ಲಿ ಹೊಗಳಿಕೆಸಂಕಟಕ್ಕೆ, ಸಂತಸಕ್ಕೆ ಸ್ಪಂದಿಸುತ್ತಿದ್ದ ಸುಷ್ಮಾ ಸ್ವರಾಜ್ : ಟ್ವಿಟ್ಟರಲ್ಲಿ ಹೊಗಳಿಕೆ

English summary
Former minister Sushma Swaraj may become governor of Andhra Pradesh. This is not official yet, but minister Harshavardhan tweeted about this and deleted it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X