ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ತಿರುಪತಿ ಭೇಟಿ ಮುಂದೂಡಿ, ಭಕ್ತರಿಗೆ ಟಿಟಿಡಿ ಮನವಿ

|
Google Oneindia Kannada News

ಅಮರಾವತಿ, ಮೇ 29; ತಿರುಪತಿ ಭಕ್ತರಿಂದ ತುಂಬಿ ತುಳುಕುತ್ತಿದೆ. ಭಕ್ತರನ್ನು ನಿಯಂತ್ರಿಸಲು ಟಿಟಿಡಿ ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ. ಆದ್ದರಿಂದ ತಿರುಪತಿ ಭೇಟಿಯನ್ನು 4 ರಿಂದ 5 ದಿನ ಮುಂದೂಡುವಂತೆ ಆಡಳಿತ ಮಂಡಳಿ ಭಕ್ತರಿಗೆ ಮನವಿ ಮಾಡಿದೆ.

ದರ್ಶನಕ್ಕಾಗಿ ಭಕ್ತರು 48 ಗಂಟೆಗಳ ಕಾಲ ಕಾಯುವಷ್ಟು ಜನದಟ್ಟಣೆ ಉಂಟಾಗಿದೆ. ಇದರಿಂದಾಗಿ ತಿರುಪತಿ ದೇವಾಲಯ, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಂತಾದ ಕಡೆ ಭಕ್ತರೇ ಕಾಣಿಸುತ್ತಿದ್ದಾರೆ.

ಶಿವಮೊಗ್ಗ-ತಿರುಪತಿ-ಚೆನ್ನೈ ರೈಲು ಸೇವೆಗೆ ಚಾಲನೆ; ವೇಳಾಪಟ್ಟಿ ಶಿವಮೊಗ್ಗ-ತಿರುಪತಿ-ಚೆನ್ನೈ ರೈಲು ಸೇವೆಗೆ ಚಾಲನೆ; ವೇಳಾಪಟ್ಟಿ

ಶನಿವಾರ ಮತ್ತು ಭಾನುವಾರದ ಹಿನ್ನಲೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ವೈಕುಂಠ ದರ್ಶನ ಪಡೆಯಲು 2 ಕಿ. ಮೀ. ತನಕ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ವಿವಿಧ ಕೌಂಟರ್‌ಗಳಲ್ಲಿ ಭಕ್ತರನ್ನು ನಿಯಂತ್ರಿಸುವುದು ಸವಾಲಾಗಿದೆ.

ತಿರುಪತಿ ತಿಮ್ಮಪ್ಪನದು ಈ ವರ್ಷ 3,096 ಕೋಟಿ ರೂ ಬಜೆಟ್ತಿರುಪತಿ ತಿಮ್ಮಪ್ಪನದು ಈ ವರ್ಷ 3,096 ಕೋಟಿ ರೂ ಬಜೆಟ್

tirupati temple

ಲಗೇಜ್ ಕೌಂಟರ್, ಲಡ್ಡು ಕೌಂಟರ್, ಬಸ್ ನಿಲ್ದಾಣ, ರಸ್ತೆಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಭಕ್ತರು ಆಗಮಿಸಿದರೂ ವಸತಿ ವ್ಯವಸ್ಥೆ ಮಾಡುವುದು ಸವಾಲಾಗಿದೆ. ಈ ಹಿನ್ನಲೆಯಲ್ಲಿ ಟಿಟಿಡಿ ತಿರುಪತಿ ಭೇಟಿ ಮುಂದೂಡುವಂತೆ ಭಕ್ತರಿಗೆ ಮನವಿ ಮಾಡಿದೆ.

ತಿರುಪತಿ: ವಿಶೇಷ ದರ್ಶನದ ಟಿಕೆಟ್ 80 ನಿಮಿಷದಲ್ಲೇ ಸೋಲ್ಡ್‌ ಔಟ್ತಿರುಪತಿ: ವಿಶೇಷ ದರ್ಶನದ ಟಿಕೆಟ್ 80 ನಿಮಿಷದಲ್ಲೇ ಸೋಲ್ಡ್‌ ಔಟ್

ಕೋವಿಡ್ ನಿಯಮಗಳ ಸಡಿಲಿಕೆ ಬಳಿಕ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಟಿಟಿಡಿ ಭಕ್ತರು ಪ್ರವಾಸ ಮುಂದೂಡುವಂತೆ ಹೇಳಿದೆ.

ಆಂಧ್ರ ಪ್ರದೇಶ ಮಾತ್ರವಲ್ಲ ಅಕ್ಕಪಕ್ಕದ ರಾಜ್ಯಗಳ ಭಕ್ತರು ವಾರಾಂತ್ಯದ ರಜೆ ಸಂದರ್ಭದಲ್ಲಿ ತಿರುಪತಿಗೆ ಭೇಟಿ ನೀಡಿದ್ದು, ದೇವಾಲಯದ ಆವರಣ ಭಕ್ತರಿಂದ ತುಂಬಿ ಹೋಗಿದೆ. ಸಾಮಾನ್ಯ ದರ್ಶನ ಪಡೆಯಲು 48 ಗಂಟೆಗಳ ಕಾಲವಾಗುತ್ತಿದೆ. ಈ ಹಿನ್ನಲೆಯಲ್ಲಿ ಟಿಟಿಟಿ ಶನಿವಾರ ಭಕ್ತರಿಗೆ ದೇವಾಲಯದ ಭೇಟಿ ಮುಂದೂಡಿ ಎಂದು ಹೇಳಿದೆ.

ಜೂನ್ ತಿಂಗಳು ಆರಂಭವಾದರೆ ಮಳೆಗಾಲದಲ್ಲಿ ತಿರುಪತಿ ಭೇಟಿ ಕಷ್ಟ. ಅಲ್ಲದೇ ಶಾಲೆಗಳು ಆರಂಭವಾದರೆ ಮಕ್ಕಳಿಗೆ ರಜೆ ಸಿಗುವುದು ಕಷ್ಟ ಎಂಬ ಕಾರಣಕ್ಕೆ ಮೇ ಅಂತ್ಯದಲ್ಲಿ ಲಕ್ಷಾಂತರ ಭಕ್ತರು ತಿರುಪತಿಗೆ ಭೇಟಿ ನೀಡುತ್ತಿದ್ದಾರೆ.

English summary
Postpone temple visit for 4 to 5 days. Tirumala Tirupati Devasthanam (TTD) request for the devotees of load Venkateswara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X