ತಿಮ್ಮಪ್ಪನ ಮೇಲೆ ಮುಸ್ಲಿಂ ದಂಪತಿ ಭಕ್ತಿ, ದೇವಸ್ಥಾನಕ್ಕೆ 1 ಕೋಟಿಗೂ ಹೆಚ್ಚು ದೇಣಿಗೆ

ಅಮರಾವತಿ, ಸೆ. 21: ತಿರುಪತಿ ವೆಂಕಟೇಶ್ವರನ ಸನ್ನಿಧಿ ವಿಶಿಷ್ಟ ಘಟನೆಯೊಂದರಿಂದ ಸುದ್ದಿಗೆ ಬಂದಿದೆ. ತಿಮ್ಮಪ್ಪನ ಮೇಲೆ ಭಕ್ತಿಯಿಂದ ಚೆನ್ನೈ ಮೂಲದ ಮುಸ್ಲಿಂ ದಂಪತಿ ದೇವಸ್ಥಾನದಲ್ಲಿ ಅನ್ನದಾನ ಸೇರಿದಂತೆ ಹಲವು ಸೌಕರ್ಯಗಳಿಗಾಗಿ 1 ಕೋಟಿಗೂ ಹೆಚ್ಚು ದೇಣಿಗೆ ನೀಡಿ ಭಕ್ತಿ ಮೆರೆದಿದ್ದಾರೆ.

ಚೆನ್ನೈ ಮೂಲದ ಮುಸ್ಲಿಂ ದಂಪತಿ ಅಬ್ದುಲ್ ಘನಿ ಮತ್ತು ಸುಬೀನಾ ಬಾನು ಅವರು ಮಂಗಳವಾರ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ 1.02 ಕೋಟಿ ರೂಪಾಯಿಯ ಚೆಕ್ ಅನ್ನು ನೀಡಿದ್ದಾರೆ. ತಿರುಪತಿ ತಿರುಮಲ ದೇವಾಲಯ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿದೆ.

ಚೆನ್ನೈನ ದಂಪತಿ ದೇವಸ್ಥಾನದ ಆವರಣದಲ್ಲಿರುವ ರಂಗನಾಯಕುಲ ಮಂಟಪದಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದರು.

Muslim couple donates Rs 1.02 crore to Tirumala temple

ಒಟ್ಟು ಮೊತ್ತದಲ್ಲಿ, 15 ಲಕ್ಷ ರೂ.ಗಳನ್ನು ಶ್ರೀ ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್‌ಗೆ ಮೀಸಲಿಡಲಾಗಿದೆ. ಇದು ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುವ ಸಾವಿರಾರು ಭಕ್ತರಿಗೆ ಉಚಿತ ಆಹಾರವನ್ನು ಒದಗಿಸುತ್ತದೆ.

ದೇಣಿಗೆಯಾಲ್ಲಿ ಉಳಿದ 87 ಲಕ್ಷ ರೂಪಾಯಿಗಳನ್ನು ಶ್ರೀ ಪದ್ಮಾವತಿ ಅತಿಥಿ ಗೃಹದಲ್ಲಿ ಅಡುಗೆಮನೆಯಲ್ಲಿ ಹೊಸ ಪೀಠೋಪಕರಣಗಳು ಮತ್ತು ಸಾಮಗ್ರಿಗಳಿಗಾಗಿ ಮೀಸಲಿಡಲಾಗುತ್ತದೆ.

ಬಾಲಾಜಿ ದೇವಸ್ಥಾನ ಎಂದೇ ಪ್ರಸಿದ್ಧವಾಗಿರುವ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಉದ್ಯಮಿ ಅಬ್ದುಲ್ ಘನಿ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ.

2020 ರಲ್ಲಿ, ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೇವಾಲಯದ ಆವರಣದಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸಲು ಬಹು ಆಯಾಮದ ಟ್ರಾಕ್ಟರ್-ಮೌಂಟೆಡ್ ಸ್ಪ್ರೇಯರ್ ಅನ್ನು ದಾನ ಮಾಡಿದ್ದರು. ಈ ಹಿಂದೆ ದೇವಸ್ಥಾನಕ್ಕೆ ತರಕಾರಿ ಸಾಗಿಸಲು 35 ಲಕ್ಷ ರೂಪಾಯಿ ವೆಚ್ಚದ ರೆಫ್ರಿಜರೇಟರ್ ಟ್ರಕ್ ಅನ್ನು ಕೊಡುಗೆಯಾಗಿ ನೀಡಿದ್ದರು.

Muslim couple donates Rs 1.02 crore to Tirumala temple

ದೇಣಿಗೆಯನ್ನು ಚೆಕ್ ರೂಪದಲ್ಲಿ ಔಪಚಾರಿಕವಾಗಿ ಸ್ವೀಕರಿಸಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ, ಮುಸ್ಲಿಂ ದಂಪತಿಯ ಉದಾರತೆಗೆ ಧನ್ಯವಾದ ಅರ್ಪಿಸಿದರು. ದೇವಾಲಯದ ಅಧಿಕಾರಿಗಳು ಅಬ್ದುಲ್ ಘನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಪ್ರಸಾದವನ್ನು ಹಸ್ತಾಂತರಿಸಿದರು.

ಇತ್ತಿಚೆಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ತಿರುಮಲದಲ್ಲಿರುವ ವೆಂಕಟೇಶ್ವರನ ಪುರಾತನ ಬೆಟ್ಟದ ದೇವಾಲಯಕ್ಕೆ 1.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+