ಬಿಜೆಪಿ 125ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿ ನೋಡೋಣ: ಮೋದಿಗೆ ದೀದಿ ಸವಾಲು
Recommended Video

Lok Sabha Elections 2019 : ನರೇಂದ್ರ ಮೋದಿಗೆ ಸವಾಲ್ ಹಾಕಿದ ಚಾಲೇಂಜ್
ಶಾಖಪಟ್ಟಣ, ಏಪ್ರಿಲ್ 01: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 125(543) ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಪಶ್ಚಿಮ ಬಂಗಾಳದಲ್ಲಿ ಒಂದು ಸ್ಥಾನ ಗೆಲ್ಲುವುದಕ್ಕೂ ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಯೋಜಿಸಿದ್ದ ಪ್ರಚಾರ ಸಮಾವೇಶವೊಂದರಲ್ಲಿ ದೀದಿ ಮಾತನಾಡುತ್ತಿದ್ದರು.

"ಇದು ವಿಶೇಷ ಚುನಾವಣೆ. ಇಲ್ಲಿ ದೇಶಕ್ಕಾ ಹೋರಾಡುವ ನಾಯಕರು ಕಡಿಮೆ. ದಯವಿಟ್ತು ಚಂದ್ರಬಾಬು ನಾಯ್ಡು ಅವರಿಗೆ ಮತ ಹಾಕಿ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಈ ದೇಶದ ಪ್ರತಿಯೊಬ್ಬರಿಗೂ ಮೋಸ ಮಾಡುತ್ತಿದ್ದಾರೆ" ಎಂದು ಮಮತಾ ಬ್ಯಾನರ್ಜಿ ಹೇಳಿದರು.
2014 ರ ಲೋಕಸಭಾ ಚುನವಾಣೆಯಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿ ಒಟ್ಟು 119 ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ 21 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಇದೇ ಅದರ ಮಹತ್ವದ ಸಾಧನೆ ಎಂದು ಬ್ಯಾನರ್ಜಿ ಲೇವಡಿ ಮಾಡಿದರು.












Click it and Unblock the Notifications