ನಮ್ಮ ಸೋಲಿಗಾಗಿ ಕೆಸಿಆರ್-ಜಗನ್ ಒಂದಾಗಿದ್ದಾರೆ: ಟಿಡಿಪಿ ಆರೋಪ
Recommended Video

ವಿಜಯವಾಡ, ಫೆಬ್ರವರಿ 25: "ನಮ್ಮನ್ನು ಸೋಲಿಸುವ ಸಲುವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ವೈಎಸ್ ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ ಅವರಿಗೆ ಸಹಾಯ ಮಾಡುತ್ತಿದ್ದಾರೆ" ಎಂದು ತೆಲಗು ದೇಶಂ ಪಕ್ಷದ ಕೆ.ಕಾಲಾ ವೆಂಕಟ ರಾವ್ ಆರೋಪಿಸಿದ್ದಾರೆ.
ಆಂಧ್ರಪ್ರದೇಶ ಟಿಡಿಪಿ ಅಧ್ಯಕ್ಷರಾಗಿರುವ ರಾವ್, ಕೆಸಿಆರ್ ಅವರಿಗೆ 26 ಪ್ರಶ್ನೆಗಳನ್ನು ಕೇಳಿದ್ದಾರೆ. ಆಂಧ್ರಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ತಡೆಯೊಡ್ಡುತ್ತಿರುವ ಕೆಸಿಆರ್ ಟಿಡಿಪಿ ಹಿನ್ನಡೆ ಅನುಭವಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
"ಒಂದು ಕಾಲದಲ್ಲಿ ಜಗನ್ ರೆಡ್ಡಿ ಬಗ್ಗೆ 1 ಲಕ್ಷ ಕೋಟಿ ರೂ ಹಗರಣದ ಆರೋಪ ಮಾಡಿದ್ದ ಕೆಸಿಆರ್ ಇಂದು ಅವರೊಂದಿಗೇ ಸುತ್ತುತ್ತಿದ್ದಾರೆ. ಜಗನ್ ಸಿಬಿಐ ನ 12 ಕೇಸುಗಳಲ್ಲಿ ಆರೋಪಿ. ಆದರೆ ಇದೀಗ ಅಂಥವರೊಂದಿಗೆ ಕೆಸಿಆರ್ ಆತ್ಮೀಯ ಗೆಳೆಯನ ಹಾಗೆ, ಒಡಹುಟ್ಟಿದ ಸಹೋದರನ ಹಾಗೆ ಓಡಾಡುತ್ತಿದ್ದಾರೆ. ಕಳೆದ ಆರೂವರೆ ವರ್ಷಗಳಿಂದ ಶಾಂತಿಯುತವಾಗಿದ್ದ ಜನರ ಮಡುವೆ ವೈಮನಸ್ಯ ಸೃಷ್ಟಿಸುವ ಕೆಲಸ ಮಾಡುತ್ತಿದ್ದೀರಿ" ಎಂದು ಅವರು ದೂರಿದರು.

ಮುಂಬರುವ ಲೋಕಸಭಾ ಚುನಾವಣೆ ಮತ್ತು ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಯ ಸಮಯಲ್ಲಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ ಆರ್ ಕಾಂಗ್ರೆಸ್ ಮತ್ತು ಕೆಸಿಆರ್ ಅವರ ತೆಲಂಗಾಣ ರಾಷ್ಟ್ರ ಸಮಿತಿ ಒಟ್ಟಾಗಿ ಚುನಾವಣೆ ಎದುರಿಸುವ ಸಂಭವವಿದೆ.












Click it and Unblock the Notifications