ಜಗನ್ ಒಬ್ಬ ಸೈಕೋ: ಹರಿಹಾಯ್ದ ಚಂದ್ರಬಾಬು ನಾಯ್ಡು
ವಿಶಾಖಾಪಟ್ಟಣ, ಅಕ್ಟೋಬರ್ 12: "ಜಗನ್ಮೋಹನ್ ರೆಡ್ಡಿ ಒಬ್ಬ ಸೈಕೋ" ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಪಕ್ಷ ಬಲವರ್ಧನೆಗಾಗಿ ವಿಶಾಖಾಪಟ್ಟಣಕ್ಕೆ ತೆರಳಿ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಾಯ್ಡು, ಜಗನ್ ರೆಡ್ಡಿ ಸರ್ಕಾರದ ವಿರುದ್ಧ ಹರಿಹಾಯ್ದರು.
"ನಾನು ಕಳೆದ 14 ವರ್ಷಗಳಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಆದರೆ ಎಂದೂ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿರಲಿಲ್ಲ. ಆದರೆ ಜಗನ್ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಿಪಕ್ಷದ ನಾಯಕರ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ" ಎಂದು ನಾಯ್ಡು ದೂರಿದರು.

"ಜಗನ್ ಆಡಳಿತದಲ್ಲಿ 12 ಟಿಡಿಪಿ ಮುಖಂಡರನ್ನು ಕೊಲ್ಲಲಾಗಿದೆ, 40 ಕ್ಕೂ ಹೆಚ್ಚು ಜನರ ಮೇಲೆ ಸುಳ್ಳು ಕೇಸು ದಾಖಲಿಸಲಾಗಿದೆ" ಎಂದು ನಾಯ್ಡು ಆರೋಪಿಸಿದರು.
"ವೈಎಸ್ ಆರ್ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ನನಗೆ ಒಳ್ಳೆಯದನ್ನು ಮಾಡಿದ ಜನರಿಗೆ ನಾನೂ ಒಳ್ಳೆಯವನಾಗಿರಲಿಲ್ಲ. ಆದರೆ ಜಗನ್ ಹಾಗಲ್ಲ, ಅವರು ಯಾರಿಗೂ ಒಳ್ಳೆಯದನ್ನು ಮಾಡಲ್ಲ. ಅವರೊಬ್ಬ ಸೈಕೋ" ಎಂದು ನಾಯ್ಡು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications