ಜಗನ್ ರೆಡ್ಡಿ ಸಿಎಂ ಪದವಿ ವಹಿಸಿಕೊಂಡ ತಕ್ಷಣ ವೃದ್ಧಾಪ್ಯ ಪಿಂಚಣಿ ಏರಿಕೆಗೆ ಮೊದಲ ಅಂಕಿತ

Recommended Video

      ಜಗನ್ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲರೂ ಭೇಷ್ ಅನ್ನಲೇ ಬೇಕು..? | Oneindia kannada

      ಅಮರಾವತಿ, ಮೇ 30: ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಗುರುವಾರ ಅಧಿಕಾರ ವಹಿಸಿಕೊಂಡ ತಕ್ಷಣವೇ ಕೆಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಅವುಗಳಲ್ಲಿನ ಪ್ರಮುಖಾಂಶಗಳು ಹೀಗಿವೆ.

      * ಮುಂದಿನ ವರ್ಷದಿಂದ ವೃದ್ಧಾಪ್ಯ ವೇತನ 2500 ರುಪಾಯಿಗೆ ಏರಿಕೆ. ಆ ನಂತರ ವರ್ಷಕ್ಕೆ 250 ರುಪಾಯಿಯಂತೆ, ಆ ಮೊತ್ತವು ತಿಂಗಳಿಗೆ 3000 ರುಪಾಯಿ ತಲುಪುವ ತನಕ ಏರಿಕೆ ಮಾಡಲಾಗುತ್ತದೆ.

      * ಗ್ರಾಮಸೇವಕರು ಎಂಬ ಹುದ್ದೆ ಮೂಲಕ 4 ಲಕ್ಷ ಉದ್ಯೋಗವನ್ನು ಆಗಸ್ಟ್ 15ರೊಳಗೆ ಸೃಷ್ಟಿಸಲಾಗುತ್ತದೆ. ಸರಕಾರಿ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಅವರದಾಗಿರುತ್ತದೆ.

      CM Jagan Mohan Reddy first approval to increase old age pension in Andhra Pradesh

      * ಒಂದು ಹಳ್ಳಿಯಲ್ಲಿ ಪ್ರತಿ 50 ಮನೆಗೆ ಒಬ್ಬ ಗ್ರಾಮ ಸೇವಕರನ್ನು ನೇಮಿಸಲಾಗುತ್ತದೆ. ಅವರು ಸಲ್ಲಿಸುವ ಸೇವೆಗೆ ಪ್ರತಿ ತಿಂಗಳು 5000 ಪಾವತಿಸಲಾಗುತ್ತದೆ.

      * ಜನರಿಗೆ ಸೌಲಭ್ಯ ದೊರೆಯದಿದ್ದಲ್ಲಿ ಅಥವಾ ಲಂಚಕ್ಕೆ ಒತ್ತಾಯಿಸುತ್ತಿದ್ದಲ್ಲಿ ದೂರು ನೀಡುವುದಕ್ಕೆ ಮುಖ್ಯಮಂತ್ರಿಯ ಕಚೇರಿಯಲ್ಲಿ ಕಾಲ್ ಸೆಂಟರ್ ತೆರೆಯಲಾಗುತ್ತದೆ.

      * ಗ್ರಾಮ ಸಚಿವಾಲಯವನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ ಹತ್ತು ಮಂದಿಗೆ ಉದ್ಯೋಗವನ್ನು ಒದಗಿಸಲಾಗುತ್ತದೆ.

      * 72 ಗಂಟೆಯೊಳಗೆ ದೂರನ್ನು ಪರಿಹರಿಸಲಾಗುತ್ತದೆ.

      * ಲಂಚ ಅಥವಾ ಶಿಫಾರಸು ಒಡ್ಡುವವರಿಗೆ ಸರಕಾರಿ ಸೌಲಭ್ಯ ದೊರೆಯುವುದಿಲ್ಲ.

      ಇನ್ನು ಇಡೀ ಸರಕಾರದ ಆಡಳಿತವನ್ನು ಮೇಲಿನ ಹಂತದಿಂದ ತಳ ಮಟ್ಟದವರೆಗೆ ಬದಲಾವಣೆ ತರುವುದಾಗಿ ಜಗನ್ ಮೋಹನ್ ರೆಡ್ಡಿ ಭರವಸೆ ನೀಡಿದ್ದಾರೆ.

      * ಯಾವುದೇ ಗುತ್ತಿಗೆಯಲ್ಲಿ ಅವ್ಯವಹಾರ ಅಥವಾ ಭ್ರಷ್ಟಾಚಾರ ಕಂಡುಬಂದರೆ ಅವುಗಳನ್ನು ರದ್ದುಪಡಿಸಲಾಗುತ್ತದೆ.

      * ಜಾಗತಿಕ ದರಕ್ಕಿಂತ ಆಂಧ್ರಪ್ರದೇಶದಲ್ಲಿ ಪವನ ಶಕ್ತಿಯ ಯೂನಿಟ್ ದರ ಹೆಚ್ಚಿದ್ದು, ವಿದ್ಯುತ್ ದರದ ಇಳಿಕೆ ಮಾಡುವ ಭರವಸೆ.

      * ವಿದ್ಯುತ್ ಖರೀದಿ ಒಪ್ಪಂದದ ಪರಿಶೀಲನೆಯಲ್ಲಿದ್ದು, ಮತ್ತೊಮ್ಮೆ ದರದ ಪರಿಶೀಲನೆ ನಡೆಸಿ, ವಿದ್ಯುತ್ ಪೂರೈಕೆ ದರ ಇಳಿಸುವ ಭರವಸೆ.

      * ಗುತ್ತಿಗೆ ನೀಡುವ ವಿಚಾರದಲ್ಲಿ ಪಾರದರ್ಶಕತೆ ತರಲು ಹಾಲಿ ನ್ಯಾಯಮೂರ್ತಿಯೊಬ್ಬರ 'ನ್ಯಾಯಾಂಗ ಆಯೋಗ' ನೇಮಕಕ್ಕೆ ಮುಖ್ಯನಾಯಮೂರ್ತಿಗಳಲ್ಲಿ ವಿನಂತಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+