ತಿರುಪತಿ ದೇವಾಲಯ ಬಂದ್ ಮಾಡಿ; ಟಿಟಿಡಿ ಸಿಬ್ಬಂದಿ ಪತ್ರ

ಅಮರಾವತಿ, ಜುಲೈ 15 : ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು ದೇವಸ್ಥಾನವನ್ನು ಮತ್ತೆ ಮುಚ್ಚಿ ಎಂದು ಬೇಡಿಕೆ ಇಟ್ಟಿದ್ದಾರೆ. ತಿರುಪತಿಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಬೇಡಿಕೆ ಇಡಲಾಗಿದೆ.

Recommended Video

      China ಸೈನಿಕರಿಗೆ ಅವಮಾನ | Oneindia Kannada

      ಟಿಟಿಡಿಯ 91 ಸಿಬ್ಬಂದಿಗಳಿಗೆ ಇದುವರೆಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಆದ್ದರಿಂದ, ಕೆಲವು ದಿನಗಳ ಕಾಲ ದೇವಾಲಯನ್ನು ಮುಚ್ಚುವಂತೆ ಸಿಬ್ಬಂದಿಗಳು ಬೇಡಿಕೆ ಇಟ್ಟಿದ್ದಾರೆ. ಜೂನ್ 11ರಿಂದ ತಿರುಪತಿ ದೇವಾಲಯವನ್ನು ಪುನಃ ತೆರೆಯಲಾಗಿದೆ.

      ಬುಧವಾರ ಟಿಟಿಡಿ ಸಿಬ್ಭಂದಿಗಳ ಯುನೈಟೆಡ್ ಫ್ರೆಂಟ್ ಟಿಟಿಡಿಯ ಹೆಚ್ಚುವರಿ ಕಾರ್ಯಕಾರಿ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಅವರಿಗೆ ಈ ಕುರಿತು ಪತ್ರ ಬರೆದಿದೆ. ದೇವಾಲಯದಲ್ಲಿ ದರ್ಶನವನ್ನು ನಿಲ್ಲಿಸಿ, ಲಾಕ್ ಡೌನ್ ಅವಧಿಯಲ್ಲಿ ಮಾಡಿದಂತೆ ನಿತ್ಯ ಪೂಜೆಯನ್ನು ಮಾಡೋಣ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

      Close Darshan In Tirupati Temple TTD Employees Letter

      ತಿರುಪತಿ ಭಾಗದಲ್ಲಿ 1000ಕ್ಕೂ ಅಧಿಕ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ದೇವಾಲಯದಲ್ಲಿ ಭಕ್ತರ ಹಿತದೃಷ್ಟಿಯಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಟಿಟಿಡಿಯ ಹಲವು ಸಿಬ್ಭಂದಿಗಳಿಗೆ ಈಗಾಗಲೇ ಸೋಂಕು ತಗುಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

      ದೇವಾಲಯದಲ್ಲಿ ದರ್ಶನವನ್ನು ಸ್ಥಗಿತಗೊಳಿಸುವ ಜೊತೆಗೆ ಟಿಟಿಡಿ ಸಿಬ್ಬಂದಿಗಳಿಗೆ ಪಾಳಿ ಆಧಾರದಲ್ಲಿ ಕೆಲಸ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ. ಮನೆಯಿಂದ ಕೆಲಸ ಮಾಡುವ ಅವಕಾಶ ಇದ್ದವರಿಗೆ ಅದನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ.

      ಜೂನ್ 11ರಂದು ದೇವಾಲಯವನ್ನು ತೆರೆದ ಬಳಿಕ ಪ್ರತಿದಿನ 6000 ಜನರು ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿತ್ತು. ಬಳಿಕ ಅದನ್ನು 12 ಸಾವಿರಕ್ಕೆ ಏರಿಕೆ ಮಾಡಿ ಟಿಟಿಡಿ ಆದೇಶ ಹೊರಡಿಸಿತು. ಜೂನ್ 11ರಿಂದ ಜುಲೈ 10ರ ತನಕ 2.5 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+