ವಿಡಿಯೋ: ಕೊರೊನಾವೈರಸ್ ಸೋಂಕಿತನನ್ನು ಕರೆದೊಯ್ಯಲು ಬೋಟ್!
ಅಮರಾವತಿ, ಆಗಸ್ಟ್.24: ಕೊರೊನಾವೈರಸ್ ಸೋಂಕಿನ ಅಟ್ಟಹಾಸದ ನಡುವೆ ಆಂಧ್ರ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ರಾಜ್ಯದ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
Recommended Video
ಆಂಧ್ರ ಪ್ರದೇಶ ಪೂರ್ವ ಗೋದಾವರಿ ಜಿಲ್ಲೆಯ ದೊಡ್ಡವರಂ ಗ್ರಾಮದಲ್ಲಿ ಸುರಿದ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದೆ. ಇದರ ನಡುವೆ ಗ್ರಾಮದ ಜನರಿಗೆ ನೊವೆಲ್ ಕೊರೊನಾವೈರಸ್ ಸೋಂಕು ಬೆನ್ನು ಬಿಡದ ಭೂತದಂತೆ ಕಾಡುತ್ತಿದೆ.

ದೊಡ್ಡವಂ ಗ್ರಾಮದ ವ್ಯಕ್ತಿಯೊಬ್ಬರು ಕೊವಿಡ್-19 ತಪಾಸಣೆಗೆ ಒಳಗಾಗಿದ್ದ ಸಂದರ್ಭದಲ್ಲಿ ಅವರಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿತ್ತು. ಈ ಹಿನ್ನೆಲೆ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಅಗತ್ಯವಿತ್ತು. ಆದರೆ ಸುತ್ತಲೂ ನೀರು ಆವರಿಸಿದ ಹಿನ್ನೆಲೆ ಪೊಲೀಸರು ಮಾಡಿರುವ ಹೊಸ ಐಡಿಯಾ ಸಖತ್ತಾಗಿ ವರ್ಕೌಟ್ ಆಗಿದೆ.
#WATCH Andhra Pradesh: Police in Doddavaram village of East Godavari district used a boat to take a #COVID19 patient to hospital, as the village is flooded following rainfall in the region. The boat was arranged by a Sub-Inspector of Nagaram village of the district. (23.08.2020) pic.twitter.com/g5aiOeFM5p
— ANI (@ANI) August 23, 2020
ಕೊವಿಡ್-19 ಸೋಂಕಿತ ಕರೆದೊಯ್ಯಲು ಬೋಟ್:
ಆಂಧ್ರ ಪ್ರದೇಶದ ದೊಡ್ಡವರಂ ಗ್ರಾಮದ ಕೊರೊನಾವೈರಸ್ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ವಿಶೇಷ ಬೋಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪೂರ್ವ ಗೋದಾವರಿ ಜಿಲ್ಲೆಯ ನಗರಂ ಠಾಣೆಯ ಸಬ್ ಇನ್ಸ್ ಪೆಕ್ಟರ್ ನೇತೃತ್ವದಲ್ಲೇ ಕಾರ್ಯಾಚರಣೆ ನಡಸಿದ್ದು, ಸುರಕ್ಷಿತವಾಗಿ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಸಬ್ ಇನ್ಸ್ ಪೆಕ್ಟರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications